ಅಭಿಪ್ರಾಯ / ಸಲಹೆಗಳು

ಕಳವು  ಪ್ರಕರಣ

  • ಉಡುಪಿ: ಮಂಜುನಾಥ ಇವರು ಕೋಟ ಪೊಲೀಸ್‌ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 30/08/2021 ರಂದು ಉಡುಪಿ ಕೃಷ್ಣಮಠದ ಬಂದೋಬಸ್ತ್‌ ಕರ್ತವ್ಯಕ್ಕೆ ತನ್ನ ಬಾಬ್ತು ಬಜಾಜ್‌ ಡಿಸ್ಕವರ್‌ ಮೋಟಾರ್‌ ಸೈಕಲ್‌ ನಂಬ್ರ: KA 01 ES 4750 (Chassis No: MD2DSPAZZTWL51490, Engine No: JBMBTL70375) ನೇದರಲ್ಲಿ ಬಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕೃಷ್ಣಮಠದ ಪಾರ್ಕಿಂಗ್‌ ಸ್ಥಳದಲ್ಲಿ 18:00 ಗಂಟೆಗೆ ಪಾರ್ಕ್‌ ಮಾಡಿ ಕರ್ತವ್ಯಕ್ಕೆ ತೆರಳಿದ್ದು, 21:00 ಗಂಟೆಗೆ ಮೋಟಾರ್‌ ಸೈಕಲ್‌ ಪಾರ್ಕ್‌ ಮಾಡಿದ ಸ್ಥಳದ ಬಳಿಗೆ ಬಂದು ನೋಡಲಾಗಿ, ಮೋಟಾರ್‌ ಸೈಕಲ್‌ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ನ ಅಂದಾಜು ಮೌಲ್ಯ ರೂ. 15,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 28-08-2021 ರಂದು 16:00 ಗಂಟೆಗೆ  ಸದಾಶಿವ ಆರ್. ಗವರೋಜಿ  ಪಿಎಸ್‌ಐ ಕುಂದಾಪುರ ಪೊಲೀಸ್‌ ಠಾಣೆ ದುದಾರರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಹೆಮ್ಮಾಡಿ  ಗ್ರಾಮದ ಹೆಮ್ಮಾಡಿ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ಬಂದಂತೆ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ  ಠಾಣೆಯಿಂದ ಹೊರಟು 16:15 ಗಂಟೆಗೆ ಹೆಮ್ಮಾಡಿ ಜಂಕ್ಷನ್ ಬಳಿ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್ ಬಂದರೆ 1/-ರೂ ಗೆ 70/-ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನುಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 16.30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದ್ದು, ಆಪಾದಿತ ಸಿರಿಲ್ ಡಿ ಸೋಜಾ, ಪ್ರಾಯ: 59 ವರ್ಷ, ತಂದೆ: ಪೀಟರ್ ಡಿ ಸೋಜಾ, ವಾಸ: ರಾಜಲಕ್ಷ್ಮಿ ಹೋಟೆಲ್ ಬಳಿ, ಫಿಶ್ ಮಾರ್ಕೆಟ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಈತನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ತಿಳಿಸಿದ್ದು ಆಪಾದಿತನಿಂದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 560/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99 /2021  ಕಲಂ:78 (i) (iii)  KP ACT   ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ಅಭಿಲಾಶ್ ಇವರ ತಮ್ಮ ಮಹೇಶ್ ರವರು 2016 ನೇ ಇಸವಿಯಲ್ಲಿ ಅಗ್ನಿಶಾಮಕ ದಳಕ್ಕೆ ಆಯ್ಕೆಯಾಗಿ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಫೈರ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ ಮಹೇಶ್ ರವರು ಸುಮಾರು 8 ತಿಂಗಳಿನಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ದೊಡ್ಡಣಗುಡ್ಡೆ ಬಾಳಿಗ ಆಸ್ಪತ್ರೆಯಲ್ಲಿ ದಿನಾಂಕ:21-08-2021 ರಂದು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು ದಿನಾಂಕ:27-08-2021 ರಂದು  ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುತ್ತಾರೆ. ದಿನಾಂಕ: 27-08-2021 ರಂದು  ಸಂಜೆ 4 ಗಂಟೆಗೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಹೇಶ ರವರನ್ನು ಅಲ್ವಿನ್ ಎಂಬುವರು  ಚಿಕಿತ್ಸೆ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಮಹೇಶ್‌ ರವರು ಬಾಳಿಗಾ ಆಸ್ಪತ್ರೆಯವರು ನೀಡಿದ ಔಷದಿಯ ಬದಲು ವಿಷ ಪದಾರ್ಥವನ್ನು ಕೈತಪ್ಪಿನಿಂದ ಸೇವನೆ ಮಾಡಿ ತೀವ್ರ ಅಸ್ವಸ್ಥ್ಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  40/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಫಿರ್ಯಾದಿ ಸುಧಾಕರ ಆಚಾರಿ ಇವರ ತಾಯಿ ಶ್ರೀಮತಿ ಕಲಾವತಿ, ಪ್ರಾಯ 61 ವರ್ಷ, ಇವರು ದಿನಾಂಕ 22/08/2021 ರಂದು ಅಸ್ವಸ್ಥಗೊಂಡಿದ್ದು ವಿಚಾರಿಸಿದಾಗ ದಿನಾಂಕ 20/08/2021 ರಂದು ಬೆಳಿಗ್ಗೆ 10:00 ಗಂಟೆಗೆ ಕಾರ್ಕಳ ಕಸಬಾ ಕಾಬೆಟ್ಟುವಿನ ತನ್ನ ಮನೆಯಲ್ಲಿ  ಆಕಸ್ಮಿಕವಾಗಿ ತಿಳಿಯದೇ ಇಲಿ ಪಾಷಾಣವನ್ನು ಪೇಸ್ಟ್ ಎಂದು ತಿಳಿದು ಹಲ್ಲು ಉಜ್ಜಿದ್ದಾಗಿ  ತಿಳಿಸಿದರು. ಕೂಡಲೇ ಕಾರ್ಕಳ ಸಿಟಿ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದಂತೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಿನಾಂಕ 22/08/2021 ರಂದು  ಚಿಕಿತ್ಸೆ ಬಗ್ಗೆ ದಾಖಲಿಸಿದ್ದು  ನಂತರ 26/08/2021 ರಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ಚಿಕಿತ್ಸೆಯಲ್ಲಿದ್ದ ಕಲಾವತಿರವರು ಈ ದಿನ 01/09/2021 ರಂದು ಬೆಳಿಗ್ಗೆ 07:00 ಗಂಟೆಗೆ  ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  27/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-09-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080