ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸಂದೀಪ ಕುಮಾರ (45), ತಂದೆ; ಲಕ್ಷ್ಮಣ ದೇವಾಡಿಗ, ವಾಸ; ಸ್ಟೇಷನ್ ಮಾಸ್ಟರ್ ಬಿಜೂರು ರೈಲ್ವೆ ಸ್ಟೇಷನ್ ಬಿಜೂರು ಇವರು  ದಿನಾಂಕ 31/07/2022 ರಂದು ಬಿಜೂರು ರೈಲ್ವೆ ಸ್ಟೇಷನ್ ನಲ್ಲಿ  ಕರ್ತವ್ಯ ದಲ್ಲಿರುವ ಸಮಯ ಬೆಳಗ್ಗೆ 08:50 ಗಂಟೆಗೆ ಟ್ರ್ಯಾಕ್ ಸೇಪ್ಟಿಮಾನ್ (ಟಿಎಸ್ಎಮ್) ಆದ ಗಣಪತಿ ಮುಕ್ರೀಯವರು ಸೇನಾಪುರ ಸ್ಟೇಷನ್ ಮಾಸ್ಟರಗೆ ಕರೆಮಾಡಿ ತಾನು ಸೇನಾಪುರದಿಂದ ರೈಲ್ವೆ ಹಳಿಯನ್ನು ಚೆಕ್ ಮಾಡಿಕೊಂಡು ಅರೆಹೊಳೆ ಕಡೆಗೆ ಬರುತ್ತಿರುವಾಗ ಕಿರಿಮಂಜೇಶ್ವರದ  ರೈಲ್ವೆ ಟ್ರ್ಯಾಕ್ ಕೀ ಮೀ ಸಂಖ್ಯೆ 639/7 ರಿಂದ 639/8 ಮಧ್ಯದ ರೈಲ್ವೆ ಹಳಿಯ ಪಕ್ಕದಲ್ಲಿರುವ ಡ್ರೈನೇಜ್ (ಚರಂಡಿ)ನಲ್ಲಿ ಸುಮಾರು 45 ರಿಂದ 50 ವರ್ಷದ ವಯಸ್ಸಿನ ಒಂದು ಹೆಂಗಸಿನ ಮೃತದೇಹ ಬಿದ್ದ ಸ್ಥಿತಿಯಲ್ಲಿ ಇರುತ್ತದೆ ಎಂಬುದಾಗಿ ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 37/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕಾಪು: ದಿನಾಂಕ 31/07/2022 ರಂದು ಭರತೇಶ ಕಂಕಣವಾಡಿ,  ಪೊಲೀಸ್ ಉಪನಿರೀಕ್ಷಕರು (ತನಿಖೆ),  ಕಾಪು ಪೊಲೀಸ್ ಠಾಣೆ ಇವರಿಗೆ  ದೆಂದೂರುಕಟ್ಟೆಯ, ಇಂದ್ರಾಳಿ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಬಾಳುಗಳನ್ನು ಕಟ್ಟಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಯುತ್ತಿರುವುದಾಗಿ  ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಸುತ್ತಲೂ ನಿಂತಿದ್ದ ಜನರು ಓಡಿ ಹೋಗುತ್ತಿದ್ದು, ಅವರುಗಳನ್ನು ಬೆನ್ನಟ್ಟಿ ಹಿಡಿದುಕೊಂಡು ಅವರುಗಳ ಹೆಸರನ್ನು ವಿಚಾರಿಸಲಾಗಿ 1) ಸದಾನಂದ ಪೂಜಾರಿ, 2) ತೇಜಸ್, 3) ಸುರೇಶ್, 4) ನಿತೇಶ್, 5) ಸಂತೋಷ್, 6) ಸ್ವಾಮಿನಾಥ್, 7) ಅಣ್ಣಪ್ಪ ಪೂಜಾರಿ, 8) ಸಂದೀಪ್ ಶೆಟ್ಟಿ ಎಂಬುದಾಗಿ ತಿಳಿಸಿದ್ದು, ಕೋಳಿಗಳ ಕಾಲುಗಳಿಗೆ ಬಾಳುಗಳನ್ನು (ಕತ್ತಿ) ಕಟ್ಟಿ ಹಣವನ್ನು ಪಣವಾಗಿರಿಸಿಕೊಂಡು ಕೋಳಿ ಅಂಕ ಆಡುತ್ತಿದ್ದುದಾಗಿ ತಿಳಿಸಿದ್ದು, ಅವರುಗಳು ಜೂಜಾಟ ಮಾಡಲು ಉಪಯೋಗಿಸಿದ ನಗದು 450/- ರೂಪಾಯಿ, 10 ಕೋಳಿಗಳು ಹಾಗೂ ಬಾಳು (ಸಣ್ಣ ಕತ್ತಿ) - 1 ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2022 ಕಲಂ: 87, 93 ಕರ್ನಾಟಕ ಪೊಲೀಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಮಣಿಪಾಲ: ಆಪಾದಿತ 1. ಮಮ್ತಾಜ್‌‌ , ಗಂಡ : ಅನ್ಸಾರ್‌, ವಾಸ: ದುಗ್ಲಿ, ಪದವು, ಮಂಚಿ, ಮಣಿಪಾಲ ಇವರು   ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ  ಒಳಸಂಚು ನಡೆಸಿ , 2 ನೇ ಆಪಾದಿತ ಪದ್ಮಾವತಿ ದಾಸ್‌, ಗಂಡ: ರಾಮದಾಸ್‌, ವಾಸ:  ಮನೆ ನಂ: 1-168-113, ಅಲೆವೂರು, ಮಣಿಪಾಲ ಇವರು ಮಣಿಪಾಲದ ಮಂಚಿಯಲ್ಲಿರುವ ಜಾಗ ಮತ್ತು ಮನೆಯನ್ನು ಪಿರ್ಯಾದಿದಾರರಿಗೆ ಮಾರಾಟ ಮಾಡುವುದಾಗಿ ದಿನಾಂಕ 15/01/2021 ರಂದು ರೂಪಾಯಿ 3,70,000 /- ಹಣವನ್ನು ಪಡೆದು , ಆಪಾದಿತೆ 1 ನೇಯವರು ಮತ್ತು 2 ನೇ ಆಪಾದಿತೆಯು ಮಾರಾಟಕ್ಕೆ ಹೇಳಿರುವ ಮನೆ ಮತ್ತು ಜಾಗದ ದಾಖಲಾತಿಗಳನ್ನು ಸರಿಪಡಿಸಿಕೊಡುವುದಾಗಿ ಕರಾರು ಪತ್ರ ಮಾಡಿದ್ದು , ಬಳಿಕ ಜಾಗ ಮತ್ತು ಮನೆಯ ದಾಖಲಾತಿಗಳನ್ನು ಸರಿಪಡಿಸಿ ಕೊಡದೇ ಇದ್ದು, ಈ ಬಗ್ಗೆ ಪಿರ್ಯಾದಿದಾರರು ಆಪಾದಿತರಲ್ಲಿ ವಿಚರಿಸಿದಾಗ ಜಾಗ ಮತ್ತು ಹಣ ಕೊಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು , ಮುಂದಕ್ಕೆ ಹಣ ಕೇಳದ್ದಲ್ಲಿ ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಜಾಗ ಹಾಗೂ ಮನೆಯನ್ನು ಪಿರ್ಯಾದಿದಾರರಿಗೆ ನೀಡದೇ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022  ಕಲಂ:120(ಬಿ), 406,420,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-08-2022 10:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080