ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ:  ದಿನಾಂಕ:30/07/20222 ರಂದು ಪಿರ್ಯಾದಿ ರೇಚಲ್  (36 ವರ್ಷ),  ವಾಸ: ಬಾಡಿಗೆ ಮನೆ ಯಕ್ಷೀಣಿ ನಗರ ಕೊರಗಜ್ಜ ದೇವಸ್ಥಾನದ ಹತ್ತಿರ ಚಾಂತಾರು  ಗ್ರಾಮ ಇವರು ತನ್ನ KA.20.EX.2488 ನೇ ಜೂಪಿಟರ್ ಸ್ಕೂಟರ್ ನಲ್ಲಿ ತನ್ನ ಮಗನಾದ ಜೋನಾನ್(13) ನನ್ನು ಸಹಸವಾರನನ್ನಾಗಿ ಕುರಿಸಿಕೊಂಡು ಬ್ರಹ್ಮಾವರದಿಂದ ಕೃಷಿಕೇಂದ್ರದ ಹತ್ತಿರದಲ್ಲಿರುವ  ತನ್ನ ಮನೆಗೆ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸವಾರಿ ಮಾಡಿಕೋಂಡು ಹೋಗುತ್ತಾ  ರಾತ್ರಿ ಸುಮಾರು 08:20 ಗಂಟೆಗೆ  ಚಾಂತಾರು ಗ್ರಾಮದ ಪ್ರಗತಿ ನಗರದ 3ನೇ ಕ್ರಾಸ್ ಬಳಿ ತಲುಪುವಾಗ ಅವರ  ಹಿಂದಿನಿಂದ ಆರೋಪಿಯು ತನ್ನ ಬಾಬ್ತು  ಕಾರನ್ನು ಅತಿವೇಗ ಹಾಗೂ ಅಜಾಗುರುಕತೆಯಿಂದ ಚಲಾಯಿಸಿ ಫೀರ್ಯಾದಿದಾರರ ಸ್ಕೂಟರ್ ನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ನ ಬಲಬದಿಗೆ ತಾಗಿಸಿಕೊಂಡು ತನ್ನ ಕಾರನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುತ್ತಾರೆ. ಆ ಸಮಯದಲ್ಲಿ ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಹತೋಟಿ ತಪ್ಪಿ ಫಿರ್ಯಾದಿದಾರರು ಹಾಗೂ ಅವರ ಮಗ ಜೋನಾನ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ,ಪರಿಣಾಮ ಫಿರ್ಯಾದಿದಾರರ ಬಲ ಮುಂಗೈಗೆ ಸಣ್ಣ ರಕ್ತಗಾಯವಾಗಿದ್ದು, ಹಾಗೂ ಜೋನಾನ್ ನ ಬಲಕಾಲಿಗೆ ಮೂಳೆಮೂರಿತದ ಜಖಂ ಆಗಿರತ್ತದೆ. ಅಲ್ಲದೆ ಸ್ಕೂಟರ್ ನ ಬಲ ಬಾಗಕ್ಕೆ ಸಣ್ಣ ಮಟ್ಟದ ಗುದ್ದಿದ , ತರಚಿದ ಜಖಂ ಆಗಿರುತ್ತದೆ. ಗಾಯಗೊಂಡ ಇಬ್ಬರನ್ನು ಚಿಕಿತ್ಸೆ ಬಗ್ಗೆ  ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಈ ದಿನ ಜೋನಾನ್ ನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 130/2022 ಕಲಂ :279, 338 IPC & 134 (A & B) & 187 IMV ACT ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ದಿನಾಂಕ 29/07/2022 ರಂದು ಪಿರ್ಯಾದಿ ಪಾಂಡುರಂಗ  ಸದಾನಂದ  ಚಿಕ್ಕೋರ್ಡ ಪ್ರಾಯ 32 ವರ್ಷ ತಂದೆ: ಸದಾನಂದ ಚಿಕ್ಕೋರ್ಡ  ನಡುಬೆಟ್ಟು  ಕುಶಾಲ ನಿವಾಸ  ಕೆದೂರು  ಕುಂದಾಪುರ ಇವರು ತನ್ನ KA20X2728 ನೆ ಹೀರೋ ಹೊಂಡ ಕಂಪೆನಿಯ ಪ್ಯಾಷನ್ ಪ್ಲಸ್   ಬೈಕಿನಲ್ಲಿ ಕೆದೂರಿನಿಂದ ತೆಕ್ಕಟ್ಟೆಗೆ  ಹೊರಟು ಮಲ್ಯಾಡಿ ಎಂಬಲ್ಲಿ ಬರುವಾಗ ಸುಮಾರು 12.25 ಗಂಟೆಯ ಸಮಯಕ್ಕೆ  KA 21N3529  ಕಾರು ಚಾಲಕ ಭಾಸ್ಕರ ಅಡಿಗ ಎಂಬಾತನು ತನ್ನ ಕಾರನ್ನು ತೆಕ್ಕಟ್ಟೆಯಿಂದ  ಕೆದೂರು ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರ  ಮೋಟಾರ್ ಸೈಕಲಿನ  ಬಲ ಬದಿಯ ಹ್ಯಾಂಡಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು  ಬಲಕಾಲಿನ ಹೆಬ್ಬೆರಳು ತುಂಡಾಗಿ ರಸ್ತೆಗೆ ಬಿದ್ದಿರುತ್ತದೆ. ಕೈಗೆ ತರಚಿದ ಗಾಯವಾಗಿರುತ್ತದೆ.  ಎಂಬಿತ್ಯಾದಿ ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 124/2022 ಕಲಂ: 279 338 IPC  ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ:

  • ಕೋಟ: ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂಬ್ರ 193/2022 ರಂತೆ  ಐರೋಡಿಯಲ್ಲಿ ಕೃಶ್ ತಂಪು ಪಾನೀಯ ತಯಾರಿಕಾ ವ್ಯವಹಾರ  ಮಾಡಿಕೊಂಡಿದ್ದು ,ತನ್ನ ವ್ಯವಹಾರಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಆರೋಪಿಯ ಪ್ಯಾಕ್ಟರಿಯಿಂದ ಖರೀದಿ ಮಾಡಿರುವುದಾಗಿದೆ. ಪಿರ್ಯಾದಿದಾರರು ಆರೋಪಿಯ ಅಂಗಡಿಯಲ್ಲಿ ಸುಮಾರು 23.36.400/- ಮೌಲ್ಯದ ಸಾಮಗ್ರಿಗಳನ್ನು ಖರೀದಿ ಮಾಡಿರುತ್ತಾರೆ. ಅದರಲ್ಲಿ ಅವರು ನೀಡಿರುವ ಸುಮಾರು 8.50.000 ದ ಫಿಲ್ಲಿಂಗ್  ಮಿಶಿನ್ ಹಾಗೂ ಸುಮಾರು 4.40.000/ ದ ಚಿಲ್ಲರೆ ಮಿಶನ್  ಸರಿಯಾಗಿ ಕೆಲಸ ಮಾಡದೇ ನಿರುಪಯುಕ್ತವಾಗಿರುತ್ತದೆ ಅಲ್ಲದೇ ಪಿರ್ಯಾದಿದಾರರು ಆರ್ಡರ್ ಮಾಡಿದ ಮಿಶನ್ ಕೂಡ ಆಗಿರುವುದಿಲ್ಲ. ಅವರುಗಳು ಬೇರೊಂದು ವಾಟರ್ ಪಿಲ್ಲಿಂಗ್ ಮಿಶನ್ ಕಳುಹಿಸಿದ್ದು ಅದು ಪಿರ್ಯಾದಿದಾರರ ವ್ಯವಹಾರಕ್ಕೆ  ಸಂಬಂಧಪಟ್ಟ ಉಪಕರಣವಾಗಿರುವುದಿಲ್ಲ. ಪಿರ್ಯಾದಿದಾರರು ಆರೋಪಿಯ ಬಳಿ ಅನೇಕ ಬಾರಿ ಕೊಟೇಶನ್ ನೀಡಿದ ಮಿಶನ್ ನೀಡುವಂತೆಯೂ ಹಾಗೂ ಈಗಾಗಲೇ ಕಳುಹಿಸಿದ ಹಿಂಪಡೆಯುವಂತೆಯೂ ಕೇಳಿಕೊಂಡಿರುತ್ತಾರೆ. ಇಲ್ಲದಿದ್ದರೆ ಹಣ ಹಿಂತಿರುಗಿಸುವಂತೆಯೂ ಕೇಳಿಕೊಂಡಿರುತ್ತಾರೆ. ದಿನಾಂಕ 6/06/2022 ರಂದು ಪಿರ್ಯಾದಿದಾರರು ಹಾಗೂ ಆಕೆಯ ಗಂಡ 2 ನೇ ಆರೋಪಿಗೆ ಪೋನ್ ಮಾಡಿದಾಗ ಅವಾಚ್ಯ ಶಬ್ದಗಳಿಂದ ಬೈದು ನಿಮ್ ಮಿಶನ್ ಬದಲಾಯಿಸಿ ನೀಡಲು ಆಗುವುದಿಲ್ಲ. ಇನ್ನೂ ಮುಂದೆ  ಮಿಶನ್ ಬಗ್ಗೆ ಪೋನ್ ಮಾಡಿದಲ್ಲಿ  ಕೈ ಕಾಲು ಕಡಿದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಹಣ ಪಡೆದು ವ್ಯವಹಾರಕ್ಕೆ ನಿರುಪಯುಕ್ತ ಯಂತ್ರೋಪಕರಣಗಳನ್ನು ನೀಡಿ  ಮೋಸ  ಮಾಡಿದ್ದಾಗಿದೆ. ಇದರಿಂದಾಗಿ ಪಿರ್ಯಾದಿದಾರರಿಗೆ ಜಿಎಸ್ಟಿ ಹಾಗೂ ಬ್ಯಾಂಕ್ ನಲ್ಲಿ ಸಾಲ ಮಾಡಿ ಪಡೆದಿರುವುದರಿಂದ ಬಡ್ಡಿ ಹಣ ಕೂಡ ನಷ್ಟ ವಾಗಿರುತ್ತದೆ. ಈ ಬಗ್ಗೆ ಅಪ್ರಿನ್ ಪ್ರಾಯ 39 ವರ್ಷ ತಂದೆ:ಅಜೀಜ್ ಮೊಹಮ್ಮದ್ ವಾಸ: ರಿಯಾದ್ ಅಹಮ್ಮದ್  ಯಾಕೂಬ್ ಸಾಹೇಬ್ ಮನೆ ನಂಬ್ರ 1-190(1) ಕೋಡಿ ರಸ್ತೆ ಐರೋಡಿ ಗ್ರಾಮ ರವರು ನೀಡಿದ ದೂರಿನಂತೆ  ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 123/2022  ಕಲಂ: 406.420.504.506 IPC  ರಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ಶಶಿಕಾಂತ ಆಚಾರ್ಯ ಪ್ರಾಯ:33 ವರ್ಷ ತಂದೆ:ಸುಂದರ ಆಚಾರ್ಯ, ವಾಸ:ಶ್ರೀ ದೇವಿ ನಿಲಯ, ಫಕೀರನಕಟ್ಟೆ, ಮಲ್ಲಾರು ಇವರು ಟೆಲಿಗ್ರಾಂ ಆ್ಯಪ್‌ ನಲ್ಲಿ ಪಾರ್ಟ್ ಟೈಮ್‌ ಜಾಬ್‌ ಹುಡುಕುತ್ತಿದ್ದು ಅರದಲ್ಲಿ ವಸ್ತುಗಳನ್ನು ಖರೀದಿಸಿ ಸೇಲ್‌ ಮಾಡುವ ಬಗ್ಗೆ Snapdeal Shopping ಎಂಬ ಆಪ್ ನ್ನು ಡೌನ್ಲೋಡ್ ಮಾಡಿ,  200 ರೂ ರಿಚಾರ್ಜ್ ಮಾಡಿದ್ದು ಅದಕ್ಕೆ ಪ್ರತಿಯಾಗಿ ರೂ. 413/- ಹಾಗೂ  ರೂ. 1472/-  ಪಿರ್ಯಾದಿದಾರರ ಖಾತೆಗೆ ಜಮಾ ಆಗಿದ್ದು ತದ ನಂತರ ಮೊಬೈಲ್  7405075230 ನೇ ವ್ಯಕ್ತಿ ತಾನು Snapdeal Shopping ಮ್ಯಾನೇಜರ್ ಎಂದು ತಿಳಿಸಿ, ಟಾಸ್ಕ್‌ ಗಳನ್ನು ಮಾಡಲು  3,26,887.72/- ರೂ ಅನ್ನು ಪಿರ್ಯಾದಿದಾರರ Snapdeal Shopping ಖಾತೆಗೆ ಜಮಾ ಮಾಡಿದ್ದು, ಆದರೆ, ಅದರಲ್ಲಿರುವ ವಸ್ತುಗಳನ್ನು ಸೇಲ್ ಮಾಡುವ ಬಗ್ಗೆ ಪಿರ್ಯಾದಿದಾರರ  AMAZON PAY app ನಿಂದ ಆನ್ ಲೈನ್ ಮುಖೇನ ಒಟ್ಟು ರೂ 2,06,050/-  ಪಡೆದು, ಕಳುಹಿಸಿದ ಹಣವನ್ನು ವಾಪಾಸು ನೀಡದೇ ಪಿರ್ಯಾದಿದಾರರಿಗೆ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಠಾಣಾ ಅಪರಾಧ ಕ್ರಮಾಂಕ 39/22 ಕಲಂ: 66(ಡಿ) ಐ.ಟಿ ಕಾಯ್ದೆ  ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 01-08-2022 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080