ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಕಾರ್ಕಳ :  ಪಿರ್ಯಾದಿ ಶೇಖರ ಪ್ರಾಯ: 37 ವರ್ಷ, ತಂದೆ: ಅಣ್ಣು ಹರಿಜನ ವಾಸ: 5 ಸೆಂಟ್ಸ್, ಹೆಪ್ಪಳ, ಎರ್ಲಪ್ಪಾಡಿ ಗ್ರಾಮ, ಕಾರ್ಕಳ ಇವರು ದಿನಾಂಕ 30/07/2021 ರಂದು ಮದ್ಯಾಹ್ನ 03:00 ಗಂಟೆಗೆ ತನ್ನ ತಂದೆ – ತಾಯಿ, ತನ್ನ ತಮ್ಮ ಶಂಕರ ಹಾಗೂ ತನ್ನ ತಂಗಿ ಸಬಿತರೊಂದಿಗೆ  ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಹೆಪ್ಪಳ 5 ಸೆನ್ಸ್‌ ನಲ್ಲಿರುವ ತನ್ನ ವಾಸ್ತವ್ಯದ ಮನೆಯಲ್ಲಿರುವಾಗ ಆಪಾದಿತ ಸುಂದರನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಏಕಾಏಕಿಯಾಗಿ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದಿಲ್ಲದೇ ಕೊಲ್ಲುವುದಾಗಿ  ಬೆದರಿಕೆ ಹಾಕಿದ್ದು ಬಳಿಕ ಆಪಾದಿತನು ಪಿರ್ಯಾದಿದಾರ ಮನೆ ಬಳಿ ಬೊಬ್ಬೆ ಹಾಕುತ್ತಾ ತಿರುಗಾಡುತ್ತಿದ್ದು ಆಪಾದಿತನು ಪುನ: ಪಿರ್ಯಾದಿದಾರರ ಮನೆಯ ಅಂಗಳಕ್ಕೆ ರಾತ್ರಿ 09:35 ಗಂಟೆಗೆ ಬಂದು ಪಿರ್ಯಾದಿದಾರರ  ತಾಯಿ ಹಾಗೂ ತಂಗಿ ಸಬಿತರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದು ಪಿರ್ಯಾದಿದಾರರು ಆಪಾದಿತನಿಗೆ ಹೆದರಿ ಮನೆಯಿಂದ ಹೊರಗೆ ಬಾರದೆ ಇದ್ದು  ತಡವಾಗಿ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ  92/2021 ಕಲಂ 447, 504, 506 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ದಿನಾಂಕ 30/07/2021 ರಂದು ಪವನ್ ನಾಯಕ ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರು ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪು ನಂಬ್ರ KA20G164 ರಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯ ಕರ್ತವ್ಯದಲ್ಲಿ ಶಿರೂರು ಕೆಳಪೇಟೆ ಕಡೆಯಲ್ಲಿರುವಾಗ ದಿನಾಂಕ 31/07/2021 ರಂದು ಬೆಳಗಿನ ಜಾವ ಸಮಯ ಸುಮಾರು 03-15 ಗಂಟೆಯ ಸುಮಾರಿಗೆ ಬಾತ್ಮಿದಾರರೊಬ್ಬರು ಕರೆ ಮಾಡಿ ಶಿರೂರು ಮಾರ್ಕೆಟ್ ಬಳಿ ಬಿಳಿ ಬಣ್ಣದ ಕಾರೊಂದು ಅನುಮನಾಸ್ಪದವಾಗಿ ತಿರುಗಾಡುತ್ತಿರುವುದಾಗಿ ಹಾಗೂ ಯಾವುದೋ ಕಳ್ಳತನಕ್ಕೆ ಹೊಂಚು ಹಾಕುತ್ತಿರುವಂತೆ ಕಂಡು ಬರುತ್ತಿರುವುದಾಗಿ ಮಾಹಿತಿ ನೀಡಿದಂತೆ ನಾನು ಇಲಾಖಾ ಜೀಪಿನಲ್ಲಿ ಬೆಳಗಿನ ಜಾವ 3-30 ಗಂಟೆಯ ಸುಮಾರಿಗೆ ಶಿರೂರು ಮಾರ್ಕೇಟ್ ತಲುಪಿದಾಗ, ಶಿರೂರು ಮಾರ್ಕೇಟ್ ಬಳಿ ಒಂದು ಬಿಳಿ ಬಣ್ಣದ ಕಾರು ನಿಂತಿದ್ದು ಒಂದಿಬ್ಬರು ವ್ಯಕ್ತಿಗಳು ಅಂಗಡಿಯ ಬಳಿ ನಿಂತು ಕಳ್ಳತನ ಮಾಡಲು  ಪ್ರಯತ್ನಿಸುತ್ತಿದ್ದವರನ್ನು ದಸ್ತಗಿರಿ ಮಾಡಲು ಬಳಿ ಸಾಗಿದಾಗ ಆರೋಪಿತರು ಇಲಾಖಾ ಜೀಪು ಹಾಗೂ ಸಮವಸ್ತ್ರದಲ್ಲಿದ್ದ ಫಿರ್ಯಾದುದಾರರನ್ನು ದೂರದಿಂದ ನೋಡಿ ಕಾರಿನಲ್ಲಿ ಕುಳಿತು ಕಾರನ್ನು ಭಟ್ಕಳ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿ ಟೋಲ್ ನಿಂದ ಸ್ದಲ್ಪ ಮುಂದಕ್ಕೆ ಚಲಾಯಿಸಿ ಸ್ವಲ್ಪ ದೂರದಲ್ಲಿದ್ದ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇರುವುದನ್ನು ನೋಡಿ  ಕಾರನ್ನು ರಾಹೆ 66 ನೇದರ ಪೂರ್ವಬದಿಯ ಭಟ್ಕಳದಿಂದ ಬೈಂದೂರು ಕಡೆಗೆ ಬರುವ ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧವಾಗಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಬ್ಯಾರಿಕೇಡ್ಗಳಿಗೆ ಢಿಕ್ಕಿ ಹೊಡೆದು ಜಖಂಗೊಳಿಸಿ ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 122/2021 ಕಲಂ: 379, 511, 279, 427 R/w 34 ಐ.ಪಿ.ಸಿ . ಮತ್ತು ಕಲಂ Rule 218 R/w 177 IMV Act ರಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ:  ದಿನಾಂಕ 31/07/2021 ರಂದು ಪಿರ್ಯಾದಿ ಮಂಜುನಾಥ ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಇವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು, ಪತ್ರಾಂಕಿತ ಅಧಿಕಾರಿ, ಪಂಚರು ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಉಡುಪಿ ತಾಲೂಕು, ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿರುವ ಬಬ್ಬು ಸ್ವಾಮಿ ದೈವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 1 ಕಿಲೋ, 226   ಗ್ರಾಂ ತೂಕದ ಗಾಂಜಾವನ್ನು ಮತ್ತು ಗಿರಾಕಿ ಕುದುರಿಸಲು ಬಳಸಿದ್ದ 2 ಮೊಬೈಲ್ ಪೋನ್, ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿದ KA19AB8370ನೇ ನಂಬ್ರದ ಆಟೋರಿಕ್ಷಾವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ. 40,000/- ,  2 ಮೊಬೈಲ್ ಹಾಂಡ್‌ ಸೆಟ್‌ ಮೌಲ್ಯ ರೂ. 20,000/- ಹಾಗೂ KA19AB8370ನೇ ನಂಬ್ರದ ಆಟೋರಿಕ್ಷಾದ ಮೌಲ್ಯ ರೂ. 75,000/-  ಆಗಿರುತ್ತದೆ ಎಂಬಿತ್ಯಾದಿ.  ಸ್ವತ್ತಿನ ಒಟ್ಟು ಅಂದಾಜು ಮೌಲ್ಯ ರೂ.  1,35,000/- ಆಗಿರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ 8(c), 20 (b) (ii),  (B) ಎನ್.ಡಿ.ಪಿ.ಎಸ್. ಕಾಯ್ದೆ 1985 ರಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

 • ಹೆಬ್ರಿ: ಪಿರ್ಯಾದಿ ಸಂದೀಪ ಪ್ರಾಯ 32 ವರ್ಷ ತಂದೆ: ಶೇಖರ ಶೆಟ್ಟಿ ವಾಸ: ಪಡುಕುಡುರು ಮೇಲ್ಮನೆ ಪಾಟೀಲ್ ಹೌಸ್ ಎಳ್ಳಾರೆ ಗ್ರಾಮ ಹೆಬ್ರಿ ಇವರು  ದಿನಾಂಕ 31/07/2021 ರಂದು ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಹೆಬ್ರಿ ಕಡೆಯಿಂದ ವರಂಗ ಕಡೆಗೆ ಹೋಗುತ್ತಿರುವಾಗ  ಅವರ ಮುಂದುಗಡೆ ಪರಿಚಯದ ವಿಖ್ಯಾತ್  ರವರು ಅವರ ಬಾಬ್ತು KA 19 EC 9013 ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ವರಂಗ ಕಡೆಗೆ ಹೋಗುತ್ತಿದ್ದು. ಅವರು ಸಮಯ ಸುಮಾರು ಸಂಜೆ 04:10 ಗಂಟೆಗೆ ವರಂಗ ಗ್ರಾಮದ ಕೆಲಕಿಲ ಕ್ರಾಸ್ ಬಳಿ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ವರಂಗ ಕಡೆಯಿಂದ ಹೆಬ್ರಿ ಕಡೆಗೆ KA 04 MQ 7508 ನೇ ಕಾರನ್ನು ಅದರ ಚಾಲಕ ಅನಿಲ್ ಕುಮಾರ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಬಂದು ವಿಖ್ಯಾತ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಪಡಿಸಿದ ಪರಿಣಾಮ ವಿಖ್ಯಾತ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಯ ಬದಿಯಲ್ಲಿದ್ದ ಚರಂಡಿಗೆ ಬಿದ್ದು ಅವರ ಬಲಕಾಲಿನ ಬಳಿ ತೀವ್ರ ಸ್ವರೂಪದ ಗಾಯವಾಗಿದ್ದು ಬೆನ್ನು ನೋವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2021 ಕಲಂ:,279,338 ಐಪಿಸಿ  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ: ದಿನಾಂಕ: 31.07.2021 ರಂದು ಪಿರ್ಯಾದಿದಾರರಾದ ಐವನ್ ಫ್ರಾನ್ಸಿಸ್ ಡಿಸೋಜಾ ರವರು ಊಪ್ಪೂರು ಗ್ರಾಮದ ನರ್ನಾಡು ಮದಗ, ಅಮ್ಮುಂಜೆ  ಜಂಕ್ಷನ್ ಎಂಬಲ್ಲಿರುವ ಮನೆಯ ಎದುರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೊಳಲಗಿರಿ ಕಡೆಯಿಂದ ಕೆ.ಜಿ ರೋಡ್‌ ಕಡೆಗೆ ವಿಶಾಲ್ ಎಂಬವರು ಅವರ ಬಾಬ್ತು  KA20EM2049 ನೇ ಬಜಾಜ್ ಪಲ್ಸರ್ 220 ನಂಬ್ರದ  ಮೋಟಾರ್ ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮನೆಯ ಎದುರು ಚರ್ಚ್‌ ರಸ್ತೆ ಕಡೆಗೆ ಎಡ ಬದಿಗೆ ಸವಾರಿ ಮಾಡಲು ಆತನ ಮೋಟಾರ್ ಸೈಕಲ್‌ನ್ನು ಸ್ಲೋ ಮಾಡಿದ್ದು, ಅದೇ ವೇಳೆಗೆ ಅಂದರೆ ಸಂಜೆ 6:30 ಗಂಟೆ ಸುಮಾರಿಗೆ ಕೊಳಲಗಿರಿ ಕಡೆಯಿಂದ ಆರೋಪಿ ಸುದೀಪ್ ಎಂಬವರು ಅವರ ಬಾಬ್ತು KA20EH4057 ನಂಬ್ರದ ಬಜಾಜ್ ಪಲ್ಸರ್ 150 ಮೋಟಾರ್ ಸೈಕಲ್‌ನಲ್ಲಿ ಸುದೀಪ್ ಮತ್ತು ವಿಶ್ವ ಎಂಬವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ವಿಶಾಲ್ ರವರ ಮೋಟಾರ್ ಸೈಕಲ್‌ಗೆ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಎರಡೂ ಮೋಟಾರ್ ಸೈಕಲ್‌ನಲ್ಲಿ ಇದ್ದವರೂ ಮೋಟಾರ್ ಸೈಕಲ್ ಸಮೇತ ಥಾರ್ ರಸ್ತೆಯ ಮೇಲೆ ಬಿದ್ದು  ಎಲ್ಲಾ ನಾಲ್ಕು ಜನರಾದ ವಿಶಾಲ್, ಆರೋಪಿ ಸವಾರ ಸುದೀಪ್ ಹಾಗೂ ಆರೋಪಿಯ ಮೋಟರ್ ಸೈಕಲ್ ಸಹಸವಾರರಾದ ಸುದೀಪ್ ಮತ್ತು ವಿಶ್ವ ಎಂಬವರ  ತಲೆಗೆ, ಮುಖಕ್ಕೆ,, ಕೈಕಾಲುಗಳಿಗೆ ತೀವ್ರ ರಕ್ತಗಾಯವಾಗಿರುತ್ತದೆ.  ಗಾಯಾಳುಗಳನ್ನು ಚಿಕಿತ್ಸೆಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈಧ್ಯರು ಚಿಕಿತ್ಸೆ ನೀಡಿ ವಿಶ್ವ ರವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡು ಆರೋಪಿ ಸುದೀಪ್ ಹಾಗೂ ಸಹಸವಾರ ಸುದೀಪ್‌ನನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ  ಹಾಗೂ ವಿಶಾಲ್ ರವರನ್ನು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 147/2021 ಕಲಂ  279, 337, 338 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

 • ಕುಂದಾಪುರ: ದಿನಾಂಕ 31-07-2021ರಂದು ಪಿರ್ಯಾದಿ ಸದಾಶಿವ ಆರ್. ಗವರೋಜಿ  ಪಿಎಸ್‌ಐ ಕುಂದಾಪುರ ಪೊಲೀಸ್‌ ಠಾಣೆ.ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ 11:00 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಹುಣ್ಸೆಮಕ್ಕಿ  ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ಬಂದಂತೆ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ  ಠಾಣೆಯಿಂದ ಹೊರಟು 11 :15 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಹುಣ್ಸೆಮಕ್ಕಿ  ಸೇತುವೆ ಬಳಿ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್ ಬಂದರೆ 1/-ರೂ ಗೆ 70/-ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನುಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 11.30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದ್ದು, ಆಪಾದಿತನಿಂದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 510/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿ ಕೊಳ್ಳಲಾಯಿತು. ಆಪಾದಿತನು ಮಟ್ಕಾ ಜುಗಾರಿಯಿಂದ  ಸಂಗ್ರಹಿಸಿದ ಹಣವನ್ನು ಮಟ್ಕಾ ಬಿಡ್ಡರ್ ಆದ ಹಿತೇಶನಿಗೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93 /2021  ಕಲಂ:78 KP ACT   ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು.

 • ಕುಂದಾಪುರ:  ಪಿರ್ಯಾದಿ ರಾಘವೇಂದ್ರ ಆಚಾರ್, ಪ್ರಾಯ: 32 ವರ್ಷ, ತಂದೆ: ದಿ/ ರುದ್ರ ಆಚಾರ್, ವಾಸ: ಗೋವೆಬೆಟ್ಟು, ಹಂಗಳೂರು ಗ್ರಾಮ,  ಇವರ ತಮ್ಮ ರವೀಂದ್ರ 30 ವರ್ಷ ಎಂಬುವವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 31-07-2021 ರಂದು ರವೀಂದ್ರ ರವರು ವಾಕಿಂಗ್ ಮಾಡುತ್ತಿರುವಾಗ ಅವರಲ್ಲಿ ಉಸಿರಾಟ ಸಮಸ್ಯೆ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರನ್ನು  ಪರೀಕ್ಷಿಸಿದ ವೈದ್ಯರು ರವೀಂದ್ರರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ  ಯು.ಡಿ.ಆರ್‌ ನಂ 28/2021 ಕಲಂ: 174 CrPC ರಂತೆ ಪ್ರಕರಣ ದಾಖಲಿಸಲಾಗಿದೆ.
 • ಅಜೆಕಾರು: ಫಿರ್ಯಾದಿ ಶ್ರೀ. ಚಂದ್ರ ಸಾಲಿಯಾನ್ (39) ತಂದೆ: ಸಾಧು ಪೂಜಾರಿ ವಾಸ: ಕಡ್ಪಾಲ್ ದರ್ಖಾಸು, ಕೆರ್ವಾಶೆ ಗ್ರಾಮ ಇವರ ಅಕ್ಕನ ಮಗಳಾದ ಸೌಮ್ಯ (27) ಮತ್ತು ಅವಳ ಮಗ ಆರೂಷ್ (3) ಎಂಬವರು ಕೆರ್ವಾಶೆ ಗ್ರಾಮದ ಕಡ್ಪಾಲ್ ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಸೌಮ್ಯಳು ಸುಮಾರು 7 ದಿನಗಳಿಂದ ಕೆರ್ವಾಶೆಯ ಶಾಲೆಯ ಬಳಿ ಟೈಲರಿಂಗ್ ಕೆಲಸವನ್ನು ಕಲಿಯಲು ಹೋಗುತ್ತಿದ್ದು, ಈ ದಿನ ದಿನಾಂಕ: 31/07/2021 ರಂದು ಮಧ್ಯಾಹ್ನ 1:30 ಗಂಟೆಗೆ ಎಂದಿನಂತೆ ಟೈಲರಿಂಗ್ ಕಲಿಯಲು ಹೋಗುವ ಸಮಯ ತನ್ನ ಮಗ ಆರೂಷ್ ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು, ಸಂಜೆ 6:30 ಗಂಟೆಯಾದರೂ ಮನೆಗೆ ವಾಪಾಸು ಬಾರದ ಕಾರಣ ಸೌಮ್ಯಳ ತಂಗಿ ಸರಿತಾಳು ಹುಡುಕಿಕೊಂಡು ಹೋದಾಗ, ಮಡಿವಾಳಕಟ್ಟೆಯ ಕೆರೆಯ ನೀರಿನಲ್ಲಿ ಆರೂಷ್ ಧರಿಸಿದ್ದ ಚಪ್ಪಲಿಗಳು ತೇಲಾಡುತ್ತಿದ್ದು, ಹಾಗೂ ಸೌಮ್ಯ ತೆಗೆದುಕೊಂಡು ಹೋಗಿದ್ದ ಪ್ಲಾಸ್ಟಿಕ್ ಚೀಲ ಕೂಡಾ ಕೆರೆಯ ಬಳಿಯಲ್ಲಿ ಬಿದ್ದಿದ್ದು, ಅನುಮಾನಗೊಂಡು ಬೊಬ್ಬೆ ಹೊಡೆದಾಗ ಫಿರ್ಯಾದಿದಾರರು, ಮಯ್ಯದ್ದಿ ಹಾಗೂ ಭರತ್ ಎಂಬವರು ಅಲ್ಲಿಗೆ ಬಂದು ಆ ಪೈಕಿ ಮಯ್ಯದ್ದಿ ಹಾಗೂ ಭರತ್ ಮಡಿವಾಳಕಟ್ಟೆಯ ಕೆರೆಯ ನೀರಿನಲ್ಲಿ ಮುಳುಗಿ ಹುಡುಕಾಡಿದಾಗ ಸೌಮ್ಯ ಹಾಗೂ ಆರೂಷ್ ರವರ ಮೃತದೇಹವು ಪತ್ತೆಯಾಗಿದ್ದು, ಅವರಿಬ್ಬರ ಮೃತದೇಹವನ್ನು ಮೇಲಕ್ಕೆ ತಂದಿರುತ್ತಾರೆ. ಸೌಮ್ಯ ಹಾಗೂ ಆರೂಷ್ ಈ ದಿನ ದಿನಾಂಕ: 31/07/2021 ರಂದು 17:15 ರಿಂದ 18:30 ರ ಮಧ್ಯಾವಧಿಯಲ್ಲಿ ಕೆರ್ವಾಶೆ ಗ್ರಾಮದ ಮಡಿವಾಳ ಕಟ್ಟೆ ಕೆರೆಯ ಬದಿಯಲ್ಲಿರುವ ದಾರಿ ಮೂಲಕ ಅವರ ಮನೆಯ ಕಡೆಗೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಠಾಣಾ  ಯು.ಡಿ.ಆರ್‌ ನಂ 10/2021 ಕಲಂ: 174 CrPC ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 01-08-2021 12:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ