ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 29/06/2022 ರಂದು ಸಂಜೆ 7:30  ಗಂಟೆಗೆ ಕುಂದಾಪುರ ತಾಲೂಕು, ಕಾಳಾವರ ಗ್ರಾಮದ ಬಡಾಗುಡ್ಡೆ ಎಂಬಲ್ಲಿ, ಆಪಾದಿತ ಪ್ರಶಾಂತ  KA-20-D-4781ನೇ ಅಟೋರಿಕ್ಷಾವನ್ನು  ಉಳ್ಳೂರು ಕಡೆಯಿಂದ  ಬಡಾಗುಡ್ಡೆ   ಕಡೆಗೆ ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ  ಚಾಲನೆ  ಮಾಡಿಕೊಂಡು ಬಂದು ಕುಂದಾಪುರದಿಂದ ಮುಡ್ಲಕಟ್ಟೆ ಮಾರ್ಗವಾಗಿ ಅಸೋಡಿನ ಮನೆಗೆ ಹೋಗುತ್ತಿದ್ದ ಪಿರ್ಯಾದಿದಾರರಾದ ಸುಬ್ರಹ್ಮಣ್ಯ ಶೇರಿಗಾರ (52), ತಂದೆ: ಗೋಪಾಲ, ವಾಸ:  ವೆಂಕಟೇಶ ಪ್ರಸಾದ್‌‌‌,  ರೈಲ್ವೆ ಗೇಟ್‌‌‌‌‌ ಬಳಿ,  ಅಸೋಡು ಗ್ರಾಮ, ಕುಂದಾಪುರ ಇವರ KA-20-EM-9456 TVS XL  ಮೋಟಾರ್‌ ಸೈಕಲ್‌‌ಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕೈ ಮಣಿಗಂಟಿಗೆ ಒಳಜಖಂ ಗಾಯ  ಹಾಗೂ ಎಡಕಾಲಿಗೆ ರಕ್ತಗಾಯವಾಗಿ ಕುಂದಾಪುರದ ಡಾ. ಸಂದೀಪ ನಾವಡರವರ ಕ್ಲಿನಿಕ್‌‌‌ನಲ್ಲಿ  ಹೊರ ರೋಗಿಯಾಗಿ  ಚಿಕಿತ್ಸೆ ಪಡೆದು ಮನೆಗೆ ಹೋಗಿ ಈ ದಿನ ನೋವು ಹೆಚ್ಚಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಸಂಗೀತಾ (29), ತಂದೆ: ಲಕ್ಷ್ಮಣ ಕೆ, ವಾಸ: ಕೇ/ಆಫ್‌, ಬಿ ರಾಮಚಂದ್ರರಾವ್‌, ಎನ್‌‌ಜೆಸಿ ಕಾಲೇಜಿನ ಎದುರು, ಬಾರ್ಕೂರು, ಹೇರಾಡಿ ಗ್ರಾಮ,ಬ್ರಹ್ಮಾವರ ತಾಲೂಕು,ಉಡುಪಿ ಬಾರ್ಕೂರು ಇವರು ಶ್ರೀ ವೇಣುಗೋಪಾಲಕೃಷ್ಣ ವಿವಿಧ್ದೋದೇಶ ಸೌಹರ್ದ ಸಹಕಾರಿ ಸಂಘದಲ್ಲಿ ಕ್ಲರ್ಕ್‌ ಆಗಿ ಉದ್ಯೋಗ ಮಾಡಿಕೊಂಡಿದ್ದು, ದಿನಾಂಕ 30/06/2022ರಂದು ಬೆಳಿಗ್ಗೆ 09:00 ಗಂಟೆಗೆ ಮನೆಯಿಂದ ಬಾಗಿಲಿಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಸಂಜೆ 6:00ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯ ಎದುರು ಬಾಗಿಲ ಚೀಲಕದ ಕೊಂಡಿ ಮುರಿದು ಕೊಂಡು ಬಾಗಿಲು ತೆರೆದುಕೊಂಡಿದ್ದು, ಮನೆಯ ಒಳಗೆ ಹೋಗಿ ನೋಡಿದಾಗ ಹಾಲ್‌‌ನ್ನಲ್ಲಿ ಇರಿಸಿದ್ದ ಕಬ್ಬಿಣದ ಟ್ರಂಕ್‌ನ ಬೀಗ ಒಡೆದು ಅದರ ಒಳಗಡೆಯಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಅದರ ಒಳಗಡೆ ಇದ್ದ ಸುಮಾರು 11.1/4 ಗ್ರಾಂ ತೂಕದ ಚಿನ್ನಾಭರಣ ಹಾಗೂ ಒಂದು ಜೊತೆ ಬೆಳ್ಳಿಯ ಕಾಲುಬೈನ್‌‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ  90,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2022 ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ಬಾಬಣ್ಣ ಕುಲಾಲ (50), ತಂದೆ: ಹೆರಿಯ ಕುಲಾಲ, ವಾಸ: ಶ್ರೀ ವಿನಾಯಕ ನಿಲಯ ಒಡ್ಡನಬೇರು ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ಇವರ ಮಗಳು ಮಾನಸ (17) ಶಂಕರನಾರಾಯಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ ಯು ಸಿ ಕಲಿಯುತ್ತಿದ್ದು ಎಪ್ರಿಲ್ ತಿಂಗಳ ಪಿಯು ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದು ಮನೆಯಲ್ಲಿಯೇ ಇದ್ದು ಜೂನ್ ತಿಂಗಳ ಸಪ್ಲಿಮೆಂಟರಿ ಪರೀಕ್ಷೆಗೆ ಕಟ್ಟಿದ್ದು, ದಿನಾಂಕ 30/06/2022 ರಂದು ಪ್ರಥಮ ಪಿಯುಸಿಯ ಫಲಿತಾಂಶವಾಗಿದ್ದರಿಂದ ಮಾನಸಳು ತಾನು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಬಹುದು ಎಂದು ಹೆದರಿ ಜೀವನದಲ್ಲಿ ಜಿಗುಪ್ಸೆಗೊಂಡು 10:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯ ಮದ್ಯಾವದಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಒಡ್ಡನಗದ್ದೆ ಎಂಬಲ್ಲಿ  ತನ್ನ ಮನೆಯ  ಎದುರು ಇರುವ ಹುಲ್ಲು ಹಾಕುವ ಕೊಟ್ಟಿಗೆ ಮಾಡಿನ ಪಕ್ಕಾಸಿಗೆ ನೈಲಾನ್  ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದಾಗಿದೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 20/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಬ್ರಹ್ಮಾವರ: ದಿನಾಂಕ 25/06/2022 ರಂದು ಪಿರ್ಯಾದಿದಾರರಾದ ಜ್ಯೋತಿ (33), ಗಂಡ: ನಾಗರಾಜ, ವಾಸ: ಗುರುರಾಜ ನಿಲಯ, ಕಚ್ಚೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಮನೆಯಲ್ಲಿದ್ದಾಗ ಅವರ ಅತ್ತೆ ಲಕ್ಷ್ಮೀ ಬಳೆಗಾರ್ತಿ ರವರು ನೆರೆಮನೆಯವರಾದ ಆರೋಪಿತೆ ಹೇಮ ಪೂಜಾರಿಯವರ ಮನೆಯ ಬಳಿ ಹೋಗಿ ದಿನಾಂಕ 19/06/2022 ರಂದು ಅವರ ಮಗ ನಾಗರಾಜ್‌ ಹಾಗೂ ಆರೋಪಿ ಸುರೇಶ್‌ ಪೂಜಾರಿ ರವರ ನಡುವೆ ಬಾರ್ಕೂರು ಸ್ನೇಹ ಬಾರ್‌ನಲ್ಲಿ ನಡೆದ ಗಲಾಟೆ ಬಗ್ಗೆ ವಿಚಾರಿಸಲು ಹೋದಾಗ, ಆರೋಪಿಗಳು  ಈ ಬಗ್ಗೆ ಮಾತನಾಡಲು ಪಿರ್ಯಾದಿದಾರರನ್ನು ಕರೆದಿದ್ದು, ಆಗ ಪಿರ್ಯಾದಿದಾರರು ಅಲ್ಲಿಗೆ ಮಧ್ಯಾಹ್ನ 4:00 ಗಂಟೆಗೆ ಹೋದಾಗ  ಆರೋಪಿಗಳಾದ ಹೇಮ ಪೂಜಾರ್ತಿ ಹಾಗೂ ಅವರ ಮಗಳು ಅಶ್ವಿನಿ ಮತ್ತು ಸುರೇಶ್‌  ಸೇರಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಆರೋಪಿತೆ ಅಶ್ವಿನಿಯು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದು ದೂಡಿದ ಪರಿಣಾಮ, ಪಿರ್ಯಾದಿದಾರರು ಮನೆಯ ಬಾವಿಯ ದಂಡೆಯ ಬಳಿ ಹೋಗಿ ಬಿದ್ದಿರುತ್ತಾರೆ.  ಅಲ್ಲದೇ ಸುರೇಶ್‌ ಪೂಜಾರಿಯವರ ವಿಷಯದಲ್ಲಿ ತಲೆ ಹಾಕಿದರೆ ಜೀವ ಸಹೀತ ಬಿಡುವುದಿಲ್ಲ ಎಂದು ಆರೋಪಿಗಳು ಬೆದರಿಸಿರುತ್ತಾರೆ. ಈ ಘಟನೆಯಿಂದ ಅರ್ಜಿದಾರರ ಕೆನ್ನೆಗೆ ವಿಪರೀತ ನೋವಾಗಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಹೇಮಲತಾ (61), ಗಂಡ: ಪ್ರಭಾಕರ ಪೂಜಾರಿ, ವಾಸ: ಕಚ್ಚೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ಮನೆಗೆ  ದಿನಾಂಕ 25/06/2022 ರಂದು ಮಧ್ಯಾಹ್ನ 4:00 ಗಂಟೆಯ ಸಮಯಕ್ಕೆ ಆರೋಪಿಗಳಾದ ನೆರೆಮನೆಯ 1] ಜ್ಯೋತಿ ಬಳೆಗಾರ್ತಿ, 2] ನಾಗರಾಜ ಜೋಗಿ, 3] ಭರತ,  4] ಲಕ್ಷ್ಮೀ ಬಳೆಗಾರ್ತಿ ರವರು ಅಕ್ರಮ ಪ್ರವೇಶ ಮಾಡಿ ಅದರಲ್ಲಿ  ಆರೋಪಿತೆ ಜ್ಯೋತಿ ಬಳೆಗಾರ್ತಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಹಾಗೂ ಆರೋಪಿ ನಾಗರಾಜ ಜೋಗಿ ಮುಂದೆ ನುಗ್ಗಿ ಬಂದು ಪಿರ್ಯಾದಿದಾರರನ್ನು ದೂಡಿದಾಗ ಪಿರ್ಯಾದಿದಾರರು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದರು. ಆಗ ಆರೋಪಿಗಳಾದ ಭರತ ಮತ್ತು ಲಕ್ಷ್ಮೀ ಬಳೆಗಾರ್ತಿ ಕಾಲಿನಿಂದ ತುಳಿದಿರುತ್ತಾರೆ. ಆಗ ಈ ಗಲಾಟೆಯನ್ನು ಕೇಳಿ ರೂಮಿನ ಒಳಗಿದ್ದ ಅವರ  ಮಗಳು ಆಶ್ವಿನಿ ಗಲಾಟೆ ತಪ್ಪಿಸಲು ಬಂದಾಗ ಆಕೆಗೂ ಸಹ ಆರೋಪಿಗಳೆಲ್ಲರೂ ಸೇರಿ  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುತ್ತಾರೆ. ಅಲ್ಲದೇ ಆರೋಪಿಗಳು ಅಲ್ಲಿಂದ ಹೋಗುವಾಗ ಅವರ ಆರೋಪಿ ಭರತನು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 448, 504, 354, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    


   

ಇತ್ತೀಚಿನ ನವೀಕರಣ​ : 01-07-2022 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080