ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾರ್ಕಳ: ದಿನಾಂಕ 30/06/2021 ರಂದು ಸಂಜೆ ಸಮಯ ಸುಮಾರು 4:00 ಘಂಟೆಗೆ ಹಿರ್ಗಾನ ಗ್ರಾಮದ  ಸ್ವಾಗತ್ ಕಾಂಪ್ಲೆಕ್ಸ್ ಎದುರು ಪಿರ್ಯಾದಿದಾರರಾಧ ಸುರೇಶ ಮೂಲ್ಯ (36) ತಂದೆ: ನಾರಾಯಣ ಮೂಲ್ಯ ವಾಸ: ಹಟ್ಟೆಮನೆ, ಎಣ್ಣೆಹೊಳೆ ಅಂಚೆ, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಹೋಟೆಲಿನ ಮುಂಭಾಗ ನಿಂತು ಕೊಂಡಿರುವಾಗ ಅಜೆಕಾರು ಕಡೆಯಿಂದ ಕಾರ್ಕಳ ಕಡೆಗೆ ಸಾಗಿರುವ ರಾಜ್ಯ ಹೆದ್ದಾರಿಯಲ್ಲಿ KA-20-ES-6631 ನೇ ನೊಂದಣಿ ಸಂಖ್ಯೆಯ ಮೋಟಾರ್ ಸೈಕಲನ್ನು ಅದರ ಸವಾರ ಪ್ರದೀಪ್ ನಾಯ್ಕ್ ಎಂಬಾತನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅ ಸಮಯದಲ್ಲಿ ಮೋಟಾರ್ ಸೈಕಲಿಗೆ ಬೆಂಕಿ ಹತ್ತಿ ಮೋಟಾರ್ ಸೈಕಲ್ ಸುಟ್ಟು ಹೋಗಿದ್ದು ಮೋಟಾರ್ ಸೈಕಲ್ ಸವಾರನಿಗೆ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಭಾಗೀರಥಿ, ಜಿ ರಾವ್, (74) ಗಂಡ: ಕಟ್ಟೆ ಗೋಪಾಲಕೃಷ್ಣ ರಾವ್, ವಾಸ: ಚಿನ್ಮಯಿ, 2/86, ಎನ್. ಹೆಚ್ 66, ಹಂಗಳೂರು, ಕುಂದಾಪುರ. ಇವರ ಮನೆಯ ಗೋಡ್ರೇಜಿನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ನಗದು ಹಣ ದಿನಾಂಕ 27/06/2021 ರಂದು ಕಾಣೆಯಾಗಿರುತ್ತದೆ. ಈ ಬಗ್ಗೆ ಇವರು ಮನೆಯಲ್ಲಿ ಹುಡುಕಾಡಲಾಗಿ ಪತ್ತೆಯಾಗದೇ ಇದ್ದು, ದಿನಾಂಕ 30/06/2021 ರಂದು ಬೆಳಗ್ಗೆ  ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ನೋಡಲಾಗಿ ಮನೆ ಕೆಲಸ ಮಾಡುತ್ತಿದ್ದ ಶರಾವತಿರವರು  ದಿನಾಂಕ 27/06/2021 ರಂದು ಬೆಳಗ್ಗೆ 09:18 ಗಂಟೆ ವೇಳೆಗೆ ಮನೆಯ ಗೋಡ್ರೇಜಿನಿಂದ ಕಳವು ಮಾಡುತ್ತಿರುವುದು ರೆಕಾರ್ಡ್ ಆಗಿರುತ್ತದೆ. ಭಾಗೀರಥಿ, ಜಿ ರಾವ್ ರವರ ಮನೆ ಗೋಡ್ರೇಜಿನಿಂದ  35,000 ರೂಪಾಯಿ ನಗದು, ಹಾಗೂ 16 ಗ್ರಾಂ ತೂಕದ ಚಿನ್ನದ ಬಳೆ-1, 12 ಗ್ರಾಂ ತೂಕದ ಒಂದು ಚಿನ್ನದ ಪೆಂಡೆಂಟ್ ಕಳವಾಗಿದ್ದು ಇವುಗಳ ಒಟ್ಟು ಮೌಲ್ಯ 1,25,000 ರೂಪಾಯಿಗಳಾಗಿರುತ್ತದೆ. ಶರಾವತಿರವರು ದಿನಾಂಕ 27/06/2021 ರಂದು ಸಂಜೆ ಮನೆ ಕೆಲಸದಿಂದ ಹೋದವರು ವಾಪಾಸು ಮನೆಗೆ ಬಾರದೇ ಇದ್ದು ಸದ್ರಿ ನಗದು ಹಾಗೂ ಸ್ವತ್ತುಗಳನ್ನು ಶರಾವತಿರವರೇ ಕಳ್ಳತನ ಮಾಡಿದ್ದು ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 1,60,000 ರೂಪಾಯಿಗಳಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 83/2021 ಕಲಂ: 381 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಮಹೇಶ.ಟಿ.ಎಂ –ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರು ದಿನಾಂಕ 30/06/2021 ರಂದು ಠಾಣಾ ರೌಂಡ್ಸ್ ನಲ್ಲಿರುವಾಗ ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಮಾರಾಳಿ ಕಂಬ್ಲಿಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಇವರು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು  ಸಿಬ್ಬಂದಿಗಳೊಂದಿಗೆ ಹಾಗೂ ಪಂಚರೊಂದಿಗೆ KA-20-G-334 ನೇ ಇಲಾಖಾ ವಾಹನದಲ್ಲಿ ಸ್ಥಳಕ್ಕೆ ಸಂಜೆ 19:00 ಗಂಟೆಗೆ ಹೋಗಿ ನೋಡಿದಲ್ಲಿ ಸುಮಾರು 7 ರಿಂದ 8 ಜನರು ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಅವುಗಳಿಗೆ ಹಿಂಸೆಯಾಗುವಂತೆ  ಕಾಳಗಕ್ಕೆ ಬಿಟ್ಟು ವಿಜೇತ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಸಂಜೆ 19:05 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 1) ಪ್ರದೀಪ್ ಶೆಟ್ಟಿ (45) ತಂದೆ: ಶಂಕರ ಶೆಟ್ಟಿ ವಾಸ: ಕಾರಾಡಿ, ಚಾರಾ ಗ್ರಾಮ, ಹೆಬ್ರಿ ತಾಲೂಕು , 2) ಪ್ರವೀಣ್ ಶೆಟ್ಟಿ (36) ತಂದೆ: ಬೋಜ ಶೆಟ್ಟಿ ವಾಸ: ಕಾರಾಡಿ, ಚಾರಾ ಗ್ರಾಮ, ಹೆಬ್ರಿ ತಾಲೂಕು. 3) ಕೀರ್ತನಾ (24) ತಂದೆ: ಹರೀಶ್ ವಾಸ; ಮುಟ್ಲಪಾಡಿ, ಅಂಡಾರು ಗ್ರಾಮ, ಕಾರ್ಕಳ ತಾಲೂಕು, 4) ರಾಜೇಶ್ (30) ತಂದೆ: ಸೂರ ಹಾಂಡ ವಾಸ: ಮಾರಾಳಿ ಕಂಬ್ಲಿಬೆಟ್ಟು, ನಾಲ್ಕೂರು ಗ್ರಾಮ, ಬ್ರಹ್ಮಾವರ ಇವರನ್ನು ವಶಕ್ಕೆ ಪಡೆದು ಕೊಂಡಿದ್ದು. ಉಳಿದವರು ಓಡಿ ಹೋಗಿದ್ದು ಓಡಿ ಹೋದವರ ಬಗ್ಗೆ ವಿಚಾರಿಸಿದಾಗ ಅವರು ಯಾರು ತಿಳಿದಿಲ್ಲವಾಗಿಯೂ ತಾವುಗಳು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದುದಾಗಿ ಒಪ್ಪಿಕೊಂಡಿದ್ದು ಆಪಾದಿತರುಗಳು ಕೋವಿಡ್‌-19 ಕಾಯ್ದೆಯ ನಿಯಂತ್ರಣಕ್ಕಾಗಿ ಮಾನ್ಯ ಕರ್ನಾಟಕ ಸರಕಾರವು ಲಾಕ್‌ಡೌನ್‌ಆದೇಶ ಹೊರಡಿಸಿದ್ದು, ಸದ್ರಿ ಆದೇಶವನ್ನು ಉಲ್ಲಂಘಿಸಿ ಆರೋಪಿತರುಗಳು ಸಮಾನ ಉದ್ದೇಶದಿಂದ ಕೋಳಿ ಅಂಕವನ್ನು ನಡೆಸುತ್ತಿದ್ದು. ಇವರುಗಳು ಕೋಳಿ ಅಂಕಕ್ಕೆ  ಬಳಸಿದ 04 ಕೋಳಿ ಹುಂಜಗಳನ್ನು  ಹಾಗೂ ಆರೋಪಿತರುಗಳ ಬಳಿ ಇದ್ದ ಕೋಳಿ ಅಂಕಕ್ಕೆ ಬಳಸಿದ ನಗದು 1,120 ರೂಪಾಯಿ ಹಾಗೂ ಕೋಳಿಗಳಿಗೆ ಕಟ್ಟಿದ ಎರಡು ಬಾಳುಗಳನ್ನು ಪಂಚರ ಸಮಕ್ಷಮ ಮಹಜರು ಬರೆದು ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 45/2021 ಕಲಂ:,269 ಐಪಿಸಿ ಕಲಂ: 87,93 ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾಧ ಸುಬ್ರಹ್ಮಣ್ಯ, (42) ತಂದೆ: ಗೋವಿಂದ  ಗೌಡ, ವಾಸ:  ಮಾತ್ರ  ಛಾಯಾ, ಗರಿಕೆಮಠ, ಶಿರಿಯಾರ  ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರ ತಾಯಿ ಶ್ರೀಮತಿ ರಾಜೀವಿ, (75) ಇವರು ಕಳೆದ ಸುಮಾರು 4 ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಕಳೆದ  ಒಂದುವಾರದಿಂದ ಯಾವುದೋ ಕಾಯಿಲೆಯಿಂದ ಅಸ್ವಸ್ಥರಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೃದಯ ಸಂಬಂಧಿ ಕಾಯಿಲೆ ಇರುವ ಬಗ್ಗೆ ಅನುಮಾನಗೊಂಡು ಚಿಕಿತ್ಸಾ ವೆಚ್ಚದ ಬಗ್ಗೆ ಚಿಂತಿತರಾಗಿ ಮಗನಲ್ಲಿ  ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದು ಅದೇ ಚಿಂತೆಯಲ್ಲಿದ್ದು ದಿನಾಂಕ 30/06/2021 ರಂದು ಮಧ್ಯಾಹ್ನ 15:00 ಗಂಟೆಯಿಂದ ಸಂಜೆ 17:00 ಘಂಟೆಯ ಮಧ್ಯಾವಧಿಯಲ್ಲಿ ಮನೆಯ ತೋಟದ ಬಾವಿಗೆ ಬಿದ್ದು ನೀರಿನಲ್ಲಿ  ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 19/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾಧ ಅಶ್ವಥ (20) ತಂದೆ:ಅಣ್ಣು ದೇವಾಡಿಗ, ವಾಸ:ಮಂಗಳಪಾದೆ ಮಿಯಾರು ಗ್ರಾಮ, ಕಾರ್ಕಳ ತಾಲೂಕು ಇವರ ತಂದೆ ಅಣ್ಣು ದೇವಾಡಿಗ (55) ಇವರು ಸುಮಾರು 1 ವರ್ಷದಿಂದ ಪಾರ್ಶ್ವವಾಯು ಪೀಡಿತರಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/06/2021 ರಂದು ಸಂಜೆ ಸುಮಾರು 4:30 ಗಂಟೆಗೆ ತನ್ನ ವಾಸ್ತವ್ಯದ ಮನೆಯ ಮಾಡಿನ ಮರದ ಜಂತಿಗೆ ಕುತ್ತಿಗೆಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿಯ ವೈದ್ಯರು ಅಣ್ಣು ದೇವಾಡಿಗ ರವರನ್ನು ಪರೀಕ್ಷಿಸಿ ಸಮಯ ಸಂಜೆ ಸುಮಾರು 07:00 ಗಂಟೆಗೆ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ, ಮೃತ ದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗರದಲ್ಲಿರಿಸಿರುವುದಾಗಿದೆ, ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 20/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಹರೀಶ್, (42) ತಂದೆ: ದಿ. ಗಣೇಶ್, ವಾಸ: ರಾಘವೇಂದ್ರ ಮಠದ ಬಳಿ, ಕಂಚಿನಡ್ಕ, ನಡ್ಸಾಲು ಗ್ರಾಮ, ಕಾಪು ಇವರ ತಾಯಿ ಸುಶೀಲ(60) ಎಂಬುವರು ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದು. ಅವರ ಮನೆ ವಠಾರದ ಬಳಿ ಪ್ರತಿ ದಿನದಂತೆ ದಿನಾಂಕ 30/06/2021 ರಂದು ಕೂಡ ಬೆಳಿಗ್ಗೆ ವಾಕಿಂಗ್ ಗೆ ಹೋಗಿದ್ದು ಸುಮಾರು 07:00 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಕಂಚಿನಡ್ಕ ರಾಘವೇಂದ್ರ ಮಠದ ಬಳಿ ಆನಂದ ರವರ ಮನೆಯ ಅಂಗಳದಲ್ಲಿ ಆನಂದ ರವರ ಮಗ ಮಣಿ @ ಮಣಿಕಂಠನಿಗೆ ಎಂಬಾತನು ಕಳೆದ 4-5 ದಿನಂಗಳಿಂದ ಮಾನಸಿಕವಾಗಿ ತಿರುಗಾಡುತ್ತಿದ್ದು, ಆತನಿಗೆ ಇವರ ತಾಯಿ ಬುದ್ದಿವಾದ ಹೇಳಿದ್ದಕ್ಕೆ ಆರೋಪಿತನು ಹರೀಶ್‌ ಇವರ ತಾಯಿಗೆ ಹಾರೆಯಿಂದ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ ಓಡಿ ಹೋಗಿರುತ್ತಾನೆ. ನಂತರ ಗಾಯಾಳು ಸುಶೀಲ ರವರಿಗೆ ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 60/2021 ಕಲಂ: 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-07-2021 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080