ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 31/05/2022 ರಂದು ರಾತ್ರಿ 7:45 ಗಂಟೆಗೆ ಕಾರ್ಕಳ ತಾಲೂಕು, ಮಾಳ ಗ್ರಾಮದ ಕೋಡಂಗೆ ಶಾಲೆಯ ಬಳಿ ಹಾದು ಹೋಗಿರುವ ಹುಕ್ರಟ್ಟೆ-ಬಜಗೋಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ರೋಹಿತ್ ಡಿಮೆಲ್ಲೋ ಎಂಬುವವರು ಹುಕ್ರಟ್ಟೆ ಕಡೆಯಿಂದ ಬಜಗೋಳಿ ಕಡೆಗೆ ರೋಲ್ಸನ್ ಡಿಸೋಜಾ ಎಂಬುವವರನ್ನು ಮೋಟಾರು ಸೈಕಲ್ ನಂಬ್ರ KA-20-EG-1413 ನೇದರಲ್ಲಿ ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬರುತ್ತಿರುವಾಗ ರಸ್ತೆಯಲ್ಲಿ ಏಕಾಏಕಿ ಕಾಡುಕೋಣಗಳ ಹಿಂಡು ಬಂದಿದ್ದು, ಕಾಡುಕೋಣವೊಂದಕ್ಕೆ ಮೋಟಾರು ಸೈಕಲ್ ಢಿಕ್ಕಿಯಾಗಿ, ಮೋಟಾರು ಸೈಕಲ್ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಸೈಕಲ್ ಸವಾರನ ತಲೆಗೆ ಹಾಗೂ ಸಹಸವಾರನ ತಲೆ, ಮುಖ, ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು, ಗಾಯಾಳುಗಳಿಬ್ಬರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ  ಅಲ್ಲಿಯ ವೈದ್ಯರು ಗಾಯಾಳುಗಳನ್ನು ಪರೀಕ್ಷಿಸಿ ರೋಲ್ಸನ್ ಡಿಸೋಜನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸುವಂತೆ ಹಾಗೂ ರೋಹಿತ್ ಡಿಮೆಲ್ಲೋನನ್ನು ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಗಾಯಾಳು ರೋಹಿತ್ ಡಿಮೆಲ್ಲೋನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಸಹ ಸವಾರ ರೋಲ್ಸನ್ ಡಿಸೋಜಾ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2022 ಕಲಂ: 279, 337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 30/05/2022 ರಂದು ಮಧ್ಯಾಹ್ನ 01:30 ಗಂಟೆಗೆ ಕುಂದಾಪುರ ತಾಲೂಕು, ಕಸಬಾ ಗ್ರಾಮದ ಬೋರ್ಡ ಹೈಸ್ಕೂಲ್‌ ಬಳಿ, ಏಕಮುಖ ಸಂಚಾರ  ಪುರಸಭಾ ರಸ್ತೆಯಲ್ಲಿ ಆಪಾದಿತ ಸುನಿಲ್‌‌ ಕುಮಾರ್‌ ಶೆಟ್ಟಿ ಎಂಬುವವರು KA-20-U-9801ನೇ ಬೈಕನ್ನು ಕುಂದಾಪುರ ಹೊಸ ಬಸ್ ನಿಲ್ದಾಣ ಕಡೆಯಿಂದ  ಶಾಸ್ತ್ರಿ ಸರ್ಕಲ್‌‌  ಕಡೆಗೆ ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಶಾಸ್ತ್ರಿ ಸರ್ಕಲ್‌‌ ಕಡೆಯಿಂದ  ಹೊಸ ಬಸ್ ನಿಲ್ದಾಣ ಕಡೆಗೆ ಪಿರ್ಯಾದಿದಾರರಾದ ಕುಮಾರಿ ಸಂಗೀತಾ (32), ತಂದೆ: ಶ್ರೀನಿವಾಸ ಪೂಜಾರಿ, ವಾಸ: ಮಾಣಿಮನೆ, ಮೀನು ಮಾರ್ಕೆಟ್‌ರಸ್ತೆ, ಕಸಬಾ  ಗ್ರಾಮ, ಕುಂದಾಪುರ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EF-4329 Honda Deo ಸ್ಕೂಟರ್‌ಗೆ  ಎದುರುಗಡೆಯಿಂದ  ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರ ಬಲಕಾಲಿನ  ಕಿರುಬೆರಳಿಗೆ  ಮೂಳೆ ಮುರಿತವಾದ ಗಾಯ ಹಾಗೂ ಬೆನ್ನಿಗೆ ಹಾಗೂ ಬಲ ತೊಡೆಗೆ ಒಳ ನೋವಾದ ಗಾಯವಾಗಿ   ಕುಂದಾಪುರ  ನ್ಯೂ  ಮೆಡಿಕಲ್‌‌  ಸೆಂಟರ್‌‌  ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ  ಚಿಕಿತ್ಸೆ ಪಡೆದು,  ನೋವು ಜಾಸ್ತಿಯಾಗಿ  ಪುನ : ನ್ಯೂ  ಮೆಡಿಕಲ್‌‌  ಸೆಂಟರ್‌‌  ಆಸ್ಪತ್ರೆಯಲ್ಲಿ ಒಳ  ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2022  ಕಲಂ: 279, 338  ಐಪಿಸಿ & 218 ಜೊತೆಗೆ 177 imv Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಫೀಟರ್ (25), ತಂದೆ: ಅಮೃತ ರಾಜ್, ವಾಸ: ಮನೆ ನಂಬ್ರ 666, 12 ನೇ ಕ್ರಾಸ್, ವಿವರ್ಸ್ ಕಾಲೋನಿ, ಪಿಲಗನಹಳ್ಳಿ, ಗೊಟ್ಟಿಕೆರೆ, ಬೆಂಗಳೂರು ಸೌತ್ ಇವರು ದಿನಾಂಕ 29/05/2022 ರಂದು ಅವರ ಸ್ನೇಹಿತರಾದ ರಂಗ, ಮದನ್ ಹಾಗೂ ಶಿವ  ಎಂಬುವವರೊಂದಿಗೆ ಪುಣ್ಯ ಕ್ಷೇತ್ರ  ದರ್ಶನಕ್ಕೆಂದು ಬೆಂಗಳೂರಿನಿಂದ KA-05-MM-8172  ನೇ ನಂಬ್ರದ ಮಾರುತಿ ಕಾರಿನಲ್ಲಿ  ಉಡುಪಿಗೆ ಬಂದು ಅಲ್ಲಿಂದ ಮುರುಡೇಶ್ವರ ತಲುಪಿ ವಾಪಾಸ್ಸು ದಿನಾಂಕ 30/05/2022 ರಂದು ಮುರುಡೇಶ್ವರದಿಂದ ಉಡುಪಿಗೆ ಹೋಗಲು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ ಬರುತ್ತಿರುವಾಗ ಬ್ರಹ್ಮಾವರ  ತಾಲೂಕು, ಗಿಳಿಯಾರು ಗ್ರಾಮದ ಕೋಟ ಪೊಲೀಸ್ ಠಾಣಾ  ಎದುರು  ಇರುವ ಅಂಡರ್ ಪಾಸ್ ಮೇಲ್ಗಾಗದಲ್ಲಿ ಬರುತ್ತಿರುವಾಗ ಮಧ್ಯಾಹ್ನ 2:00 ಗಂಟೆಗೆ ಕಾರನ್ನು ಚಲಾಯಿಸುತ್ತಿದ್ದ ಕಾರಿನ ಚಾಲಕ ಶಿವ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪೂರ್ವದ ಅಂಚಿನಲ್ಲಿರುವ ತಡೆಗೋಡೆಗೆ ಸವರಿಕೊಂಡು ಸ್ವಲ್ಪ ದೂರ ಹೋಗಿ ಮಗುಚಿ ಬಿದ್ದ ಪರಿಣಾಮ  ಕಾರಿನ ಹಿಂಬದಿ ಕುಳಿತಿದ್ದ ರಂಗ ರವರ ಎಡ ಕೈನ ಮೊಣಗಂಟಿನ ಬಳಿ ತೀವ್ರ ತರದ ರಕ್ತ ಗಾಯವಾಗಿದ್ದು  ಅವರನ್ನು  ಕೋಟೇಶ್ವರ ಎನ್‌‌‌‌‌‌‌.ಆರ್‌‌‌‌‌. ಆಚಾರ್ಯ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಸೂಚನೆಯಂತೆ ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ  ಕಾರಿನಲ್ಲಿದ್ದ ಉಳಿದವರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 279 , 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಮಹಮ್ಮದ್ ಅಸ್ಲಾಂ (47), ತಂದೆ: ಅಬ್ದುಲ್ ರಶೀದ್, ವಾಸ: ಮಂಗಳೂರು ರಸ್ತೆ, ಕಾರ್ಕಳ ತಾಲೂಕು, ಉಡುಪಿ ಇವರು   ದಿನಾಂಕ 31/05/2022 ರಂದು ಅವರ ಸ್ನೇಹಿತ ಅಬ್ದುಲ್ ಖಾಲಿಕ್ ರವರೊಂದಿಗೆ ಕಾರ್ಕಳದಿಂದ ಭಟ್ಕಳ ಹೋಗಲು KA-23-M-7400 ನೇ ನಂಬ್ರದ ಕಾರಿನಲ್ಲಿ ಉಡುಪಿಗೆ ಬಂದು ಅಲ್ಲಿಂದ ಭಟ್ಕಳ ಹೋಗಲು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮುಖ್ಯ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ ಬರುತ್ತಿರುವಾಗ ಬ್ರಹ್ಮಾವರ ತಾಲೂಕು ಐರೋಡಿ ಗ್ರಾಮದ ಸಾಸ್ತಾನ ಜಂಕ್ಷನ್ ನಿಂದ ಸ್ವಲ್ಪ ಹಿಂದೆ ಶಿವಕೃಪಾ  ಕಲ್ಯಾಣ ಮಂಟಪದ ಬಳಿ ಉಡುಪಿ-ಕುಂದಾಪುರ ರಸ್ತೆಯಲ್ಲಿ ಮಧ್ಯಾಹ್ನ 1:00 ಗಂಟೆಗೆ KA-20-C-7347 ನೇ ನಂಬ್ರದ ಟಾಟಾ ಏಸ್ ಚಾಲಕ ಉದಯ ಪೂಜಾರಿ ತನ್ನ ಟಾಟಾ ಏಸ್ ವಾಹನವನ್ನು ಏಕ ಮುಖ ಸಂಚಾರ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ತನ್ನ ವಾಹನವನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿನ ಎಡಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎಡ ಬದಿ ಸೀಟಿನಲ್ಲಿ ಕುಳಿತಿದ್ದ ಅಬ್ದುಲ್ ಖಾಲಿಕ್ ರವರ ಎಡಕಣ್ಣಿನ ಬಳಿ, ಗಲ್ಲದ ಬಳಿ ತೀವ್ರ ತರದ  ರಕ್ತ ಗಾಯವಾಗಿದ್ದು  ಅವರನ್ನು ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಪ್ರಸನ್ನ ಶೆಟ್ಟಿ (33), ತಂದೆ:ದಿ.ಶೇಷು ಶೆಟ್ಟಿ, ವಾಸ: ಗೋವಿಂದ ಶೆಟ್ಟರ ಮನೆ, ಕರಾವಳಿ ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ಶಿರೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದು,  ದಿನಾಂಕ 31/05/2022 ರಂದು ಮಧ್ಯಾಹ್ನ 3:00 ಗಂಟೆಗೆ ಪಿರ್ಯಾದಿದಾರರಿಗೆ ಶಿರೂರಿನ ಪರಿಚಯದ ಶ್ರೀನಿವಾಸ ಎಂಬುವವರು ಪೋನ್ ಮಾಡಿ ಶಿರೂರು ಗ್ರಾಮದ ಶಿರೂರು ಕರಾವಳಿ ಅರಬ್ಬಿ ಸಮುದ್ರದ ದಡದಲ್ಲಿ 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ  ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಬಿದ್ದಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಿದಾಗ ಶಿರೂರು ಅರಬ್ಬಿ ಸಮುದ್ರದ ದಡದಲ್ಲಿ 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ  ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಮೃತನು ಎಲ್ಲಿಯೋ ಸುಮಾರು 5 ದಿವಸಗಳ ಹಿಂದೆ  ಆಕಸ್ಮಿಕವಾಗಿ ನೀರಿಗೆ ಬಿದ್ದು  ಉಸಿರುಗಟ್ಟಿ ಮೃತಪಟ್ಟಿರಬಹುದು ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜುಗುಪ್ಸೆಗೊಂಡು ನೀರಿಗೆ ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ದಿವಾಕರ ಶೆಟ್ಟಿ (27), ತಂದೆ: ಭಾಸ್ಕರ ಶೆಟ್ಟಿ, ವಾಸ: ಅರಂದೊಟ್ಟು ಹೌಸ್, ತೆಳ್ಳಾರ್, ದುರ್ಗಾ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 29/05/2022 ರಂದು KA-20-EA-9573 ನೇ ನೋಂದಣಿ ಸಂಖ್ಯೆಯ ಹಿರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನ್ನು ಸಂಜೆ 7:30 ಗಂಟೆಗೆ ಕಾರ್ಕಳದ ಉಡುಪಿ ಬಸ್ಟ್ಯಾಂಡ್ ನ ಬಂಜಾರ ಬಾರ್ ಎದುರುಗಡೆ ಇರುವ ಪಾಸ್ಟ್ ಪುಡ್ ಬಳಿ ನಿಲ್ಲಿಸಿ ಕೀ ತೆಗೆದುಕೊಂಡು ಸೆಲೂನ್ ಶಾಪ್ ಗೆ ಹೋಗಿದ್ದು, ವಾಪಾಸು ಸಂಜೆ 8:30 ಗಂಟೆಗೆ ವಾಪಾಸು ಬಂದು ನೋಡಿದಾಗ ಕಾಣೆಯಾಗಿದ್ದು ಮೋಟರ್ ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಮೋಟರ್ ಸೈಕಲ್ ನ ಮೌಲ್ಯ 25,000/- ಆಗಿರುತ್ತದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಪ್ರಮೀತಾ ಇವರು  19ನೇ ಕರ್ಜೆ ಗ್ರಾಮ ಪಂಚಾಯತ್‌ ನಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಆಗಿದ್ದು. ಹೊಸೂರು ಗ್ರಾಮದ ಕಡಂಗೋಡು ಶ್ರೀ ಭಸ್ಮೇಶ್ವರ ಹಾಗೂ ಮಹಮ್ಮಾಯಿ ದೇವಸ್ಥಾನಕ್ಕೆ ಹೋಗುವ ಅನಾದಿ ಕಾಲದ ರಸ್ತೆಯನ್ನು ಆರೋಪಿಗಳಾದ  ಹರೀಶ್‌ ನಾಯ್ಕ ಹಾಗೂ ಅವರ ಮಗ  ಪ್ರದೀಪ ನಾಯ್ಕ ಸೇರಿ ಕಲ್ಲು ಕಂಬ ಹಾಗೂ ಮರದ ತುಂಡುಗಳನ್ನು ಕಟ್ಟಿ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಜನ ವಾಹನ ತಿರುಗಾಡದಂತೆ ಬಂದ್‌ ಮಾಡಿದ ಬಗ್ಗೆ ಅವುಗಳನ್ನು ತುರ್ತಾಗಿ ತೆರವುಗೊಳಿಸುವಂತೆ ಪರಿಸರದ ವಾಸಿಗಳು ಪಂಚಾಯತ್‌ಗೆ ಮನವಿ ಸಲ್ಲಿದ  ಮೇರೆಗೆ ದಿನಾಂಕ 30/05/2022 ರಂದು ಪಿರ್ಯಾದಿದಾರರು ಪಂಚಾಯತ್‌ನಲ್ಲಿ ತುರ್ತು ಸಭೆ ಕರೆದಾಗ, ಸಭೆಯಲ್ಲಿ ಸರ್ವಾನುಮತದಂತೆ ತಡೆಮಾಡಿದ್ದನ್ನು ತೆರವುಗೊಳಿಸಲು ನಿರ್ಣಯವಾಗಿರುತ್ತದೆ. ಅದರಂತೆ ದಿನಾಂಕ 31/05/2022  ರಂದು ಪಿರ್ಯಾದಿದಾರರು ಪಂಚಾಯತ್‌ ಅಧ್ಯಕ್ಷ, ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಕೆಲಸದವರೊಂದಿಗೆ ಸದ್ರಿ ಕಡಂಗೋಡು ಶ್ರೀ ಭಸ್ಮೇಶ್ವರ ಹಾಗೂ ಮಹಮ್ಮಾಯಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬಳಿ ಮಧ್ಯಾಹ್ನ  2:10 ಗಂಟೆಗೆ ಹೋದಾಗ ಆರೋಪಿಗಳಾದ ಹರೀಶ್‌ ನಾಯ್ಕ, ಪ್ರದೀಪ ನಾಯ್ಕ, ಪ್ರಥ್ವೀ ಹಾಗೂ ಲಕ್ಷ್ಮೀ  ಇವರು ಸ್ಥಳದಲ್ಲಿದ್ದು ಅವರಿಗೆ ಮನವರಿಕೆ ಮಾಡಿ ರಸ್ತೆಗೆ ತಡೆಯೊಡ್ಡಿದ್ದ ಕಲ್ಲುಕಂಬ, ಮರದ  ತುಂಡು ಹಾಗೂ ಗಿಡಗಳನ್ನು ತೆರವು ಮಾಡಿ ಜನರಿಗೆ ತಿರುಗಾಡಲು ಅನುವು ಮಾಡಿಕೊಡಲು ತಿಳಿಸಿದಾಗ ಆರೋಪಿಗಳು ತಿರಸ್ಕರಿಸಿರುತ್ತಾರೆ. ಆರೋಪಿಗಳು ನೆಟ್ಟಿದ್ದ ತಡೆಯೊಡ್ಡಿದ್ದ ಕಲ್ಲು ಕಂಬ ಹಾಗೂ ಮರದ ತುಂಡುಗಳನ್ನು ತೆರವು ಮಾಡಲು ಮುಂದಾದಾಗ ನಾಲ್ಕು ಜನ ಆರೋಪಿಗಳು ಹರಿತವಾದ ಕತ್ತಿ ಹಾಗೂ ಮರದ ದೊಣ್ಣೆಗಳನ್ನು ಹಿಡಿದುಕೊಂಡು ಬೊಬ್ಬೆ ಹಾಕುತ್ತಾ ನಾವು ಬೇಲಿಯನ್ನು ತೆಗೆಯಲು ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಆಗ ಪಿರ್ಯಾದಿದಾರರು ಅವರೊಂದಿಗೆ ಇದ್ದ ಸಿಬ್ಬಂದಿಯೊಂದಿಗೆ ಸೇರಿ ಕಲ್ಲುಕಂಬ ಹಾಗೂ ಮರದ ಕಂಬಗಳನ್ನು ತೆಗೆಯಲು ಮುಂದಾದಾಗ ಆರೋಪಿಗಳಾದ ಹರೀಶ್‌ ನಾಯ್ಕ ಹಾಗೂ ಪ್ರದೀಪ ನಾಯ್ಕ ಪಿರ್ಯಾದಿದಾರರ ಕೈಯನ್ನು ಹಿಡಿದು, ದೂಡಿ ಅವರ  ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಅಲ್ಲದೇ ಘಟನೆ ಸಮಯದಲ್ಲಿ ರಕ್ಷಣೆಗೆ ಇದ್ದ ಪೊಲೀಸ್‌ ಸಿಬ್ಬಂದಿ ಸೌಮ್ಯ ರವರ ಕೈಯನ್ನು ಆರೋಪಿ ಪ್ರಥ್ವಿ  ಕಚ್ಚಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 96/2022 ಕಲಂ : 353, 354, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 31/05/2022 ರಂದು ಮಧ್ಯಾಹ್ನ 12:20 ಗಂಟೆಗೆ ಪಿರ್ಯಾದಿರಾರರಾದ ದಿವ್ಯಾ ಪೂಜಾರಿ(34), ಗಂಡ: ಕಿಶೋರ್ ಕುಮಾರ್, 5/18, ಚಿತ್ರಾಕ್ಷೀ, 6 ನೇ ಕ್ರಾಸ್‌, ವಡಭಾಂಡೆಶ್ವರ, ಮಲ್ಪೆ, ಕೊಡವೂರು ಗ್ರಾಮ ಇವರು ತನ್ನ ಮನೆಯ ಎದುರಿನ ಅಂಗಳದಲ್ಲಿ  ಗುಡಿಸುತ್ತಾ ಇದ್ದು ಆ ಸಮಯ ಅಲ್ಲಿಗೆ ಅಕ್ರಮ ಪ್ರವೇಶ ಮಾಡಿ ಬಂದ ಆರೋಪಿತೆ ಚಿತ್ರಾಲೇಖ (39) ಇವರು  ಪಿರ್ಯಾದಿದಾರರನ್ನುಉದ್ದೇಶಿಸಿ ಕಸಪೊರಕೆಯನ್ನು ನನ್ನ ಕಾಲಿಗೆ ತಾಕಿಸುತ್ತೀಯಾ ಎಂದು ಹೇಳಿ ಪಿರ್ಯಾದಿರಾರರ ಬೆನ್ನನ್ನು ಬಗ್ಗಿಸಿ ಪಿರ್ಯಾದಿದಾರರ ಕುತ್ತಿಗೆಗೆ, ತಲೆಗೆ ಮತ್ತುಬೆನ್ನಿಗೆ ಕೈಯಿಂದ ಜೋರಾಗಿ ಹೊಡೆದಾಗ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ  ಪಿರ್ಯದಿದಾರರ ಮನೆಯಲ್ಲಿ ಇದ್ದ ಅವರ ತಾಯಿ ಓಡಿ ಬಂದು ಗಲಾಟೆಯಾಗುವುದನ್ನು  ನೋಡಿ ಗಟ್ಟಿಯಾಗಿ ಬೊಬ್ಬೆ ಹಾಕಿದಾಗ ನೆರೆಕರೆಯವರು ಓಡಿ ಬಂದು ಪಿರ್ಯದಿದಾರರನ್ನು ಬಿಡಿಸಿರುತ್ತಾರೆ.  ಪಿರ್ಯಾದಿದಾರರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2022 , ಕಲಂ: 504, 447, 323 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಚಿತ್ರಲೇಖ(39), ಗಂಡ: ಯಾಜಿನ್ ಪೂಜಾರಿ, ವಾಸ: , ಬಲರಾಮ ನಗರ, 6 ನೇ ಕ್ರಾಸ್‌, ವಡಭಾಂಡೆಶ್ವರ,ಮಲ್ಪೆ, ಕೊಡವೂರು ಗ್ರಾಮ ಹಾಗೂ ಪಿರ್ಯಾದಿದಾರರ  ತಮ್ಮ ಕಿಶೋರ್ ರವರಿಗೆ  ಜಾಗದ  ತಕರಾರು ಇದ್ದು, ದಿನಾಂಕ 31/05/2022 ರಂದು  ಮಧ್ಯಾಹ್ನ 12:20 ಗಂಟೆ ಸಮಯಕ್ಕೆ ಪಕ್ಕದ ಮನೆಯ ಲಕ್ಮೀ ಅಕ್ಕನವರ ಮನೆಗೆ  ಹೋಗಿ  ವಾಪಾಸು ಬರುತ್ತಿರುವಾಗ ಪಿರ್ಯಾದಿದಾರರ ತಮ್ಮನ  ಹೆಂಡತಿ  ದಿವ್ಯ ಮತ್ತು ಅವಳ ತಾಯಿ ಜಲಜರವರು  ಹಿಂದಿನಿಂದ ಬಂದು ಜಲಜ ರವರು ಪಿರ್ಯಾದಿದಾರರ  ಬಾಯಿಯನ್ನು ಒತ್ತಿ ಹಿಡಿದು  ದಿವ್ಯಳು  ಜುಟ್ಟನ್ನು  ಹಿಡಿದು  ಎಳೆದಾಡಿ ಅವರಿಬ್ಬರೂ ಸೇರಿ ಪಿರ್ಯಾದಿದಾರರನ್ನು ಸ್ವಲ್ಪ ದೂರ  ಎಳೆದುಕೊಂಡು  ಹೋಗಿ  ಕಬ್ಬಿಣದ  ಜಾಕಿಗೆ ಪಿರ್ಯಾದಿದಾರರ ತಲೆಯನ್ನು ಜಜ್ಜಿ  ಅವಾಚ್ಯ ಶಬ್ದಗಳಿಂದ ಬೈದು   ಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಬೊಬ್ಬೆ  ಹೊಡೆದಾಗ ಪಕ್ಕದ ಮನೆಯವರು  ಬಿಡಿಸಿರುತ್ತಾರೆ. ನಂತರ ಪಿರ್ಯಾದಿದಾರರು ಅಜ್ಜರಕಾಡು ಜಿಲ್ಲಾ ಆಸ್ವತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2022 ,ಕಲಂ: 504, 506, 324  ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     
     

ಇತ್ತೀಚಿನ ನವೀಕರಣ​ : 01-06-2022 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080