ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾರ್ಕಳ: ದಿನಾಂಕ 31/05/2022 ರಂದು ರಾತ್ರಿ 7:45 ಗಂಟೆಗೆ ಕಾರ್ಕಳ ತಾಲೂಕು, ಮಾಳ ಗ್ರಾಮದ ಕೋಡಂಗೆ ಶಾಲೆಯ ಬಳಿ ಹಾದು ಹೋಗಿರುವ ಹುಕ್ರಟ್ಟೆ-ಬಜಗೋಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ರೋಹಿತ್ ಡಿಮೆಲ್ಲೋ ಎಂಬವರು ಹುಕ್ರಟ್ಟೆ ಕಡೆಯಿಂದ ಬಜಗೋಳಿ ಕಡೆಗೆ ರೋಲ್ಸನ್ ಡಿಸೋಜಾ ಎಂಬವರನ್ನು ಮೋಟಾರು ಸೈಕಲ್ ನಂಬ್ರ KA20EG1413 ನೇದರಲ್ಲಿ ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬರುತ್ತಿರುವಾಗ ರಸ್ತೆಯಲ್ಲಿ ಏಕಾಏಕಿ ಕಾಡುಕೋಣಗಳ ಹಿಂಡು ಬಂದಿದ್ದು, ಕಾಡುಕೋಣವೊಂದಕ್ಕೆ ಮೋಟಾರು ಸೈಕಲ್ ಢಿಕ್ಕಿಯಾಗಿ, ಮೋಟಾರು ಸೈಕಲ್ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಸೈಕಲ್ ಸವಾರನ ತಲೆಗೆ ಹಾಗೂ ಸಹಸವಾರನ ತಲೆ, ಮುಖ, ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು, ಗಾಯಾಳುಗಳಿಬ್ಬರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ  ಅಲ್ಲಿಯ ವೈದ್ಯರು ಗಾಯಾಳುಗಳನ್ನು ಪರೀಕ್ಷಿಸಿ ರೋಲ್ಸನ್ ಡಿಸೋಜನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸುವಂತೆ ಹಾಗೂ ರೋಹಿತ್ ಡಿಮೆಲ್ಲೋನನ್ನು ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಗಾಯಾಳು ರೋಹಿತ್ ಡಿಮೆಲ್ಲೋನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಸಹ ಸವಾರ ರೋಲ್ಸನ್ ಡಿಸೋಜಾ ಈತನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಜಿನೇಶ್ ಜೈನ್, (31),ತಂದೆ: ಸುಕುಮಾರ್ ಜೈನ್, ವಾಸ: ಹುಕ್ರಟ್ಟೆ ಮನೆ, ಮಾಳ ಅಂಚೆ ಮತ್ತು ಗ್ರಾಮ ಇವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪರಾಧ ಕ್ರಮಾಂಕ . 73/2022 ಕಲಂ 279, 337, 304 (ಎ) IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ದಿನಾಂಕ 27/05/2022 ರಂದು ಸಂಜೆ 7:30 ಗಂಟೆಗೆ   ಫಿರ್ಯಾದಿ ವಯೋಲ್ಲಾ ಪಿ.ಆರ್ ಲೋಬೋ ಪ್ರಾಯ 43 ವರ್ಷ ಗಂಡ ಕಿರಣ್ ಮೆಲ್ವಿನ್ ಲೋಬೋ, ವಾಸ ಗುಡ್ಡೆ ಹೋಟೇಲ್ ನಾಡಾ ಗ್ರಾಮ ಇವರು  ಕಾಲು ನೋವಿನ ಬಗ್ಗೆ ಔಷದ ತರಲು  ರಾಯಲ್ ಕಫೆ  ಎದುರಿನ ಮೆಡಿಕಲ್ ಅಂಗಡಿಗೆ ಹೋಗಿ  ಔಷದ  ತೆಗೆದು ಕೊಂಡು ವಾಪಾಸು ರಸ್ತೆ ದಾಟುವರೇ ರಾ. ಹೆ 66 ರಸ್ತೆಯ ಬದಿಯಲ್ಲಿ  ನಿಂತು ಕೊಂಡಿರುವಾಗ    ಮರವಂತೆ ಕಡೆಯಿಂದ ಬೈಂದೂರು ಕಡೆಗೆ ಆರೋಪಿ KA 20 ಇ.ಟಿ 5016 ನೇ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಸವಾರಿ ಮಾಡಿ ಕೊಂಡು ಬಂದು  ರಸ್ತೆ ಬದಿಯಲ್ಲಿ ನಿಂತು ಕೊಂಡಿದ್ದ  ಪಿರ್ಯಾಧಿದಾರರಿಗೆ ಡಿಕ್ಕಿ ಹೊಡೆದ ಅಪಘಾತದ ಪರಿಣಾಮ ಫಿರ್ಯಾದುದಾರಿಗೆ ತಲೆಯ ಹಿಂಭಾಗಕ್ಕೆ , ರಕ್ತ ಗಾಯ ಮತ್ತು ಬಲ ಕೈ ಸೊಂಟಕ್ಕೆ ಒಳನೋವಾಗಿದ್ದು ಗಾಯಗೊಂಡ ಫಿರ್ಯಾಧಿದಾರರನ್ನು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ   ಉಡುಪಿ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲಿಸಿರುವುದಾಗಿದೆ. ಮೋಟಾರು ಸೈಕಲ್  ಸವಾರನು ಚಿಕಿತ್ಸೆ ವೆಚ್ಚ ನೀಡುವುದಾಗಿ ತಿಳಿಸಿದ್ದು, ಬಳಿಕ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದರಿಂದ ಸವಾರ ವೆಚ್ಚ ನೀಡಲು ನಿರಾಕರಿಸಿರುವುದರಿಂದ ದೂರು ನೀಡಲು ವಿಳಂಭವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  105/2022 ಕಲಂ. 279,337 ,IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಉಡುಪಿ ನಗರ:  ಪಿರ್ಯಾದಿ ಡಾ. ಕೃಷ್ಣಾನಂದ ಲಕ್ಷ್ಮಣ್ ಭಟ್ ಪ್ರಾಯ: 80 ವರ್ಷ ತಂದೆ: ದಿ.ಲಕ್ಷ್ಮಣ ಭಟ್ ವಾಸ: ಫ್ಲ್ಯಾಟ್ ನಂ: 708, ಬಿ ಬ್ಲಾಕ್, ಅರ್ಬಾನಾ ಐರೆನ್, ಓಜೋನ್ ಅರ್ಬಾನಾ ಟೌನ್ಶಿಪ್, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಇವರು ಶಿವಳ್ಳಿ ಗ್ರಾಮದ ಮಣಿಪಾಲದಲ್ಲಿರುವ  ಸರ್ವೇ ನಂಬ್ರ: 316/47 ರಲ್ಲಿ 40 ಸೆಂಟ್ಸ್ ಜಾಗವನ್ನು ತನ್ನ ಸಹೋದರಿ ಡಾ. ಮಾಲತಿ ಭಟ್ ರವರಿಂದ ಗಿಫ್ಟ್ ಡೀಡ್ ಮುಖಾಂತರ ಪಡೆದು, ದಿನಾಂಕ 14/01/2015 ರಂದು ಉಡುಪಿ ಉಪ ನೊಂದಾಣಾಧಿಕಾರಿಯವರ ಕಛೇರಿಯಲ್ಲಿ ನೊಂದಣಿ ಮಾಡಿಸಿರುತ್ತಾರೆ. ಪಿರ್ಯಾದುದಾರರ ಗಮನಕ್ಕೆ ಬಾರದೇ ಆ ಜಾಗವನ್ನು 1ನೇ ಆರೋಪಿ ಶ್ರೀರಾಮ್ ಬಾಯರಿ ರವರು ಉಳಿದ ಆರೋಪಿತರೊಂದಿಗೆ ಸೇರಿಕೊಂಡು ಪಿರ್ಯಾದುದಾರರ ಬದಲಿಗೆ ಬೇರೆ ವ್ಯಕ್ತಿಯನ್ನು ಉಡುಪಿ ಉಪ ನೊಂದಾಣಾಧಿಕಾರಿಯವರ ಕಛೇರಿಯಲ್ಲಿ ಹಾಜರುಪಡಿಸಿ ಅವರಿಂದ ಪಿರ್ಯಾದುದಾರರ ಸಹಿ ಹಾಗೂ ಹೆಬ್ಬೆಟ್ಟಿನ ಗುರುತನ್ನು ಪಡೆದು ಆ ವ್ಯಕ್ತಿ ಪಿರ್ಯಾದುದಾರರೆಂದು ನಮೂದಿಸಿ ಆ ಜಾಗವನ್ನು ತನ್ನ ಹೆಸರಿಗೆ ದಿನಾಂಕ 02/12/2021 ರಂದು ನಕಲಿ ಖಂಡಿತ ಕ್ರಯ ಸಾಧನ ತಯಾರಿಸಿ, ಅದನ್ನು ನೊಂದಣಿ ಮಾಡಿಸಿ, ತದನಂತರ ದಿನಾಂಕ 25/03/2022 ರಂದು ಆ ಜಾಗವನ್ನು 4 ಜನ ಪಾಲುದಾರರಿಗೆ ಮಾರಾಟ ಮಾಡಿ, ಪಿರ್ಯಾದುದಾರರಿಗೆ ಮೋಸ ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 90/2022 ಕಲಂ :  419, 420, 465, 468, 470, 471 Rw 34  IPC  ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 01-06-2022 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080