ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 20/05/2021 ರಿಂದ ದಿನಾಂಕ 07/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ನಿಷೇದ ಇದ್ದು  ಈ ಬಗ್ಗೆ ಗುರುನಾಥ ಬಿ. ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 01/06/2021 ರಂದು ಸಿಬ್ಬಂದಿಯವರೊಂದಿಗೆ ಬ್ರಹ್ಮಾವರ ತಾಲೂಕು ಹೇರಾಡಿ ಗ್ರಾಮದ ಹೇರಾಡಿ ಜಂಕ್ಷನ್ ಬಳಿ ಬಾರ್ಕೂರು – ಸಾಯಿಬ್ರಕಟ್ಟೆ ರಸ್ತೆಯಲ್ಲಿ ಅನಗತ್ಯವಾಗಿ ಜನರ ಮತ್ತು ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ ಸಾಯಿಬ್ರಕಟ್ಟೆ ಕಡೆಯಿಂದ ಬಾರ್ಕೂರು ಕಡೆಗೆ MH-02-FN-6195 ನಂಬ್ರದ ಇನ್ನೋವಾ ಕಾರಿನಲ್ಲಿ ಆರೋಪಿಗಳಾದ ಚಾಲಕ ಅರವಿಂದ ಹೆಗ್ಡೆ (59) ಮತ್ತು ಸಹ ಪ್ರಯಾಣಿಕ ಮಂಜುನಾಥ (35)  ಎಂಬುವವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಲಾಕ್‌ಡೌನ್ ಅವಧಿಯಲ್ಲಿ ಎಲ್ಲಿಗೆ ಹೋಗುತ್ತಿರುವುದಾಗಿ ಸಮರ್ಪಕವಾದ ಕಾರಣವನ್ನು ನೀಡಿರುವದಿಲ್ಲ. ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಅನಗತ್ಯವಾಗಿ ಕಾರಿನಲ್ಲಿ ತಿರುಗಾಡಿ ಕೋವಿಡ್‌19 ನಿಯಮ ಉಲ್ಲಂಘಿಸಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ104/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 20/05/2021 ರಿಂದ ದಿನಾಂಕ 07/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ನಿಷೇದ ಇದ್ದು  ಈ ಬಗ್ಗೆ ಗುರುನಾಥ ಬಿ. ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 01/06/2021 ರಂದು ಸಿಬ್ಬಂದಿಯವರೊಂದಿಗೆ ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಜಿ.ಎಂ ಇಂಗ್ಲೀಷ್ ಮೀಡಿಯಂ ಶಾಲೆಯ ಬಳಿ ಹೊನ್ನಾಳ – ಸಾಲಿಕೇರಿ ರಸ್ತೆಯಲ್ಲಿ ಅನಗತ್ಯವಾಗಿ ಜನರ ಮತ್ತು ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ ಹೊನ್ನಾಳ ಕಡೆಯಿಂದ ಸಾಲಿಕೇರಿ ಕಡೆಗೆ KA-20-EM-2468 ನೋಂದಣಿ ನಂಬ್ರದ ಯಮಹಾ ಆಲ್ಫಾ ಮೋಟಾರ್ ಸೈಕಲ್‌ನಲ್ಲಿ  ಆರೋಪಿ ಜಯಪ್ರಕಾಶ (34) ಎಂಬುವವರು ಸವಾರಿ ಮಾಡುತ್ತಿದ್ದು ಲಾಕ್‌ಡೌನ್ ಅವಧಿಯಲ್ಲಿ ಎಲ್ಲಿಗೆ ಹೋಗುತ್ತಿರುವುದಾಗಿ ಸಮರ್ಪಕವಾದ ಕಾರಣವನ್ನು ನೀಡಿರುವದಿಲ್ಲ. ಆರೋಪಿಯು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಅನಗತ್ಯವಾಗಿ ಮೋಟಾರ್‌ ಸೈಕಲ್‌ನಲ್ಲಿ  ತಿರುಗಾಡಿ ಕೋವಿಡ್‌19 ನಿಯಮ ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 01-06.2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ರವೀಶ ಹೊಳ್ಳ ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ  ಕರ್ತವ್ಯದಲ್ಲಿರುವ ವೇಳೆ 14:00 ಗಂಟೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎದುರು  KA-20-EF-6608 ನೇ TVS PHOENIX-125  ಬೈಕ್ ಸವಾರ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು ಸದ್ರಿ ವಾಹನದ ಸವಾರ ಪೊಲೀಸ್‌ರನ್ನು ನೋಡಿ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಸದ್ರಿ  ವಾಹನ ಚಾಲಕನು  ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ:269, 271 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಫಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 01-06-2021 ರಂದು  10;15  ಗಂಟೆಗೆ ಗುರುರಾಜ್  ಐತಾಳ ಇವರು  KA-20 EW-2256 ನೇ  ನಂಬ್ರದ  ಮೋಟಾರ್ ಸೈಕಲ್‌ನಲ್ಲಿ   ಹೆಬ್ರಿ   ತಾಲೂಕಿನ  ಬೆಳ್ವೆ  ಗ್ರಾಮದ   ದೇವಸ್ಥಾನ ಬೆಟ್ಟು ಎಂಬಲ್ಲಿ  ಸಾರ್ವಜನಿಕ  ಮಣ್ಣು ರಸ್ತೆಯಲ್ಲಿ  ಬರುತ್ತಿರುವಾಗ  ಆರೋಪಿ ಕೆಎ,19 ಎಮ್‌ಎ. 9247 ನೇ ನಂಬ್ರದ ಕಾರಿನ ಚಾಲಕ   ಪ್ರಸನ್ನ  ಆಚಾರ್  KA-19 MA-9247  ನೇ ನಂಬ್ರದ  ಕಾರನ್ನು   ದೇವಸ್ಥಾನ  ಕಡೆಯಿಂದ  ಅತೀ ವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಮೋಟಾರ್  ಸೈಕಲ್‌ಗೆ  ಡಿಕ್ಕಿ ಹೊಡೆದಿರುತ್ತಾನೆ,ಇದರ  ಪರಿಣಾಮ ಮೋಟಾರ್  ಸೈಕಲ್ ಸಮೇತ ಗುರುರಾಜ್ ಐತಾಳ ಇವರು  ಮಣ್ಣು  ರಸ್ತೆಯ  ಮೇಲೆ ಬಿದ್ದಿದ್ದು  ಇದರಿಂದ ಗುರುರಾಜ್  ಐತಾಳ ಇವರ  ಬಲಕಾಲಿನ  ಮೊಣಗಂಟಿನಬಳಿ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 279, , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 01-06-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080