ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 29/04/2023 ರಂದು ಪಿರ್ಯಾದಿದಾರರಾದ ಆನಂದ ಪೂಜಾರಿ (41), ತಂದೆ: ದಿ, ವೆಂಕಟ ಪೂಜಾರಿ, ವಾಸ: ಶ್ರೀ ಚಕ್ರೇಶ್ವರ ನಿಲಯ, ಗರಡಿಹಿತ್ಲು, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ತ್ರಾಸಿಯಿಂದ ಗಂಗೊಳ್ಳಿ ಕಡೆಗೆ ತನ್ನ ಮೋಟಾರು ಸೈಕಲ್‌  ನಲ್ಲಿ ಹೋಗುತ್ತಿರುವುವಾಗ ಗುಜ್ಜಾಡಿ ಗ್ರಾಮದ ನಾಯಕವಾಡಿ ಸರ್ಕಲ್‌ ತಲುಪುವಾಗ 17:45 ಗಂಟೆಗೆ ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ KA-20-ED- 3954 ನೇ ಮೋಟಾರು ಸೈಕಲ್‌ ನ್ನು ಪ್ರವೀಣ ಮೇಸ್ತ್‌ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ ನ್ನು ಓವರಟೇಕ್‌ ಮಾಡಿ ಹೋಗಿ ಸ್ವಲ್ಪ ಮುಂದಕ್ಕೆ ನಾಯಕವಾಡಿ ಚೆಕ್‌ಪೋಸ್ಟ್‌ ಬಳಿ ಡಾಂಬಾರು ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತೀರುವ ತಾರಾ ಎಂಬುವವರಿಗೆ  ಡಿಕ್ಕಿ ಹೊಡೆದ ಪರಿಣಾಮ ತಾರಾ ರವರು ರಸ್ತೆಗೆ ಬಿದ್ದು ಬಲಕಾಲಿನ ಮೂಳೆ ಮುರಿತ ಉಂಟಾಗಿರುತ್ತದೆ. ಗಾಯಗೊಂಡ ತಾರಾ ರವರನ್ನು ಅಂಬುಲೇನ್ಸ್‌ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಶ್ರೀದೇವಿ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ರಂಜಿತ್ ಶೆಟ್ಟಿ(34), ತಂದೆ:ರಾಜೀವ ಶೆಟ್ಟಿ, ವಾಸ:ನೂಜಿನಬೈಲು ಕಳಿನಜೆಡ್ಡು, 74 ಉಳ್ಳುರು ಗ್ರಾಮ ಕುಂದಾಪುರ ತಾಲೂಕು ಇವರ ಮಾವನ ಮಗ ಉದಯ ಶೆಟ್ಟಿ ರವರು ದಿನಾಂಕ 28/04/2023 ರಂದು ಸಿದ್ಧಾಪುರ ಕಡೆಯಿಂದ ಕಳಿನಜೆಡ್ಡು ಕಡೆಗೆ  KA-20-EZ- 9548 ಮೋಟಾರ್ ಸೈಕಲ್  ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ 14:00 ಗಂಟೆಗೆ ಕುಂದಾಪುರ ತಾಲೂಕು 74 ಉಳ್ಳೂರು ಗ್ರಾಮದ ಕಾರಿಮಕ್ಕಿ ಎಂಬಲ್ಲಿ ಅತೀವೇಗ ಹಾಗೂ ಅಜಾಗರುಕತೆಯಿಂದ ಸವಾರಿ ಮಾಡಿ, ಮೋಟಾರ್ ಸೈಕಲ್ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದು, ಉದಯ ಶೆಟ್ಟಿಯ ತಲೆಗೆ  ಪೆಟ್ಟಾಗಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2033 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಕೋಟ: ಪಿರ್ಯಾದಿದಾರರಾದ ಸಚಿನ್‌ (27), ತಂದೆ: ಕೃಷ್ಣ, ವಾಸ: ವಿನಾಯಕ ನಗರ 5 ಸೆಂಟ್ಸ್‌,ಕುಂಭಾಶಿ ಗ್ರಾಮ, ಕುಂದಾಪುರ ಇವರು ದಿನಾಂಕ 30/04/2023 ರಂದು ಸಂಜೆ ರಾಷ್ಟ್ರೀಯ ಹೆದ್ದಾರಿ .66 ಉಡುಪಿ - ಕುಂದಾಪುರ ಚತುಷ್ಪಥ ಮುಖ್ಯರಸ್ತೆಯಲ್ಲಿ ಕುಂಭಾಶಿಯಿಂದ ತೆಕ್ಕಟ್ಟೆಗೆ ಹೋಗುತ್ತಿರುವಾಗ, ಸಂಜೆ  5:45 ಗಂಟೆಗೆ ಕೊರವಡಿ ಕ್ರಾಸ್‌ಬಳಿ ರಸ್ತೆಯ ಇನ್ನೊಂದು ಪಥದಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಶುಕುರ್‌ ರವರು ತನ್ನ KA-20-EU-1035 ನೇ Honda Activa ಸ್ಕೂಟಿಯನ್ನು ಕ್ರಮದಂತೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಹಿಂದಿನಿಂದ  ಉಡುಪಿ ಕಡೆಯಿಂದ ಬಂದ ಬಿಳಿ ಬಣ್ಣದ KA-20-C-7221 ನೇ ಟೆಂಪೋ ಟ್ರಾವೆಲರ್‌ ವಾಹನವನ್ನು ಅದರ ಚಾಲಕ ಗೋಪಾಲ್‌ ಆಚಾರ್‌ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟಿಯ ಎಡದಿಂದ ಓವರ್‌ಟೇಕ್‌ ಮಾಡುವ ಭರದಲ್ಲಿ ಸ್ಕೂಟಿಗೆ ತಾಗಿಸಿದ್ದು, ಪರಿಣಾಮ ಸ್ಕೂಟಿ ಸವಾರನು ಸ್ಕೂಟಿ ನಿಯಂತ್ರಿಸಲಾಗದೇ ಸ್ಕೂಟಿ ಸಮೇತ ರಸ್ತೆಯ ಮೇಲೆ ಎಳೆದುಕೊಂಡು ಹೋಗಿ ಬಲಹಣೆಗೆ ಹಾಗೂ ಕೈಗೆ ತೀವ್ರ ತರದ ರಕ್ತಗಾಯ ಹಾಗೂ ಮೈಕೈಗೆ ತರಚಿದ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2023 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ .ಎಚ್.ರಾಮಚಂದ್ರ(69), ತಂದೆ: ದಿ.ಗಣಪತಿ  ನಾಯ್ಕ್ , ವಾಸ: ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ, ಕೋಡಿ ಕಸಬಾ ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ಕೆ.ಎಚ್.ರವೀಂದ್ರ (56) ರವರು ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮರ್ಗೋಳಿ ಶನೀಶ್ವರ ದೇವಸ್ಥಾನದ ಹಿಂಬದಿಯಲ್ಲಿ ಮನೆ ಮಾಡಿಕೊಂಡು ವಾಸವಿದ್ದು. 6 ವರ್ಷಗಳ ಹಿಂದೆ ಅವರ ಹೆಂಡತಿ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ. ಹೆಂಡತಿಯು ಮೃತಪಟ್ಟ ನಂತರ ರವೀಂದ್ರರವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು ಯಾವಾಗಲು ಒಂಟಿಯಾಗಿದ್ದು ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು.  2-3 ದಿನಗಳ ಹಿಂದೆ ರವೀಂದ್ರರವರು  ಮನೆಯಲ್ಲಿ ಟಾಯ್ಲೇಟ್ಗೆ ಹೋದಾಗ ಹೃದಯಘಾತವಾಗಿ ಮೃತಪಟ್ಟಿರುವ ಸಾಧ್ಯತೆ ಇರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ದಿನಾಂಕ 30/04/2023 ರಂದು ನಿರಂಜನ ಗೌಡ ಬಿ.ಎಸ್, ಪೊಲೀಸ್ ಉಪನಿರೀಕ್ಷಕರು ಬೈಂದೂರು ಠಾಣೆ ಇವರು ಸಿಬ್ಬಂದಿಗಳೊಂದಿಗೆ  ನಾವುಂದ ಬಳಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ನಾವುಂದ  ಗ್ರಾಮದ ವಿನಾಯಕ ಹೊಟೇಲ್ ಬಳಿ ಇರುವ  ಬ್ರಹ್ಮಲಿಂಗೇಶ್ವರ ಕಿರಾಣಿ ಅಂಗಡಿಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಮದ್ಯಪಾನ ಮಾಡುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ ಹೋಗಿ ನೋಡಲಾಗಿ ವಿನಾಯಕ ಹೊಟೇಲ್ ಬಳಿ ಇರುವ ಬ್ರಹ್ಮಲಿಂಗೇಶ್ವರ ಎಂಬ ಹೆಸರಿನ ಅಂಗಡಿಯ ಬಳಿ ವ್ಯಕ್ತಿಯೊಬ್ಬ ಮದ್ಯಪಾನ ಮಾಡುತ್ತಾ ಕುಳಿತುಕೊಂಡಿರುವುದು ಕಂಡು ಬಂದಿದ್ದು, ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಸೀತಾರಾಮ ಶೆಟ್ಟಿ(48) ಎಂಬುದಾಗಿ ತಿಳಿಸಿದ್ದು, ಸ್ಥಳದಲ್ಲಿ OLD TAVERN Whisky ಎಂದು ಬರೆದಿರುವ 180 ML ನ ಟೆಟ್ರಾ ಪ್ಯಾಕ್ -1 ( ಮೌಲ್ಯ ರೂಪಾಯಿ 86/-), 90 ML ನ Original Choice DELUX WHISKY ತುಂಬಿರುವ ಟೆಟ್ರಾ ಪ್ಯಾಕ್ – 2 (  ಮೌಲ್ಯ ರೂಪಾಯಿ 70/-), 90 ML ನ Original Choice DELUX WHISKY ಖಾಲಿಯಾದ ಟೆಟ್ರಾ ಪ್ಯಾಕ್ -1 ಹಾಗೂ ಮದ್ಯ ಇರುವ ಪ್ಲಾಸ್ಟಿಕ್ ಲೋಟ  ಮತ್ತು ನೀರಿನ ಬಾಟಲಿ-1 ಇರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2023 ಕಲಂ:15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 30/04/2023 ರಂದು ಈರಯ್ಯ ಡಿ ಎನ್, ಪೊಲೀಸ್ ಉಪನಿರೀಕ್ಷಕರು ( ಕಾ&ಸು) ಕುಂದಾಪುರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ರಸ್ತೆಯಲ್ಲಿ ರೌಂಡ್ಸನಲ್ಲಿ ಇರುವಾಗ  ಬೀಜಾಡಿ ಗ್ರಾಮದ ಹಳೆ ಅಳಿವೆ ಬಳಿ ಸಾರ್ವಜನಿಕ ಜಾಗದಲ್ಲಿ  ಇಬ್ಬರು ಕುಳಿತುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಬೀಜಾಡಿ ಗ್ರಾಮದ ಹಳೆ ಅಳಿವೆ ಬಳಿ  ಸಾರ್ವಜನಿಕ ಸ್ಥಳದಲ್ಲಿ ಅಕ್ಷಯ  ಕುಮಾರ್  ಮತ್ತು  ಅಭಿಷೇಕ್  ‌ ಕುಳಿತುಕೊಂಡು ಬಿಯರ್ ಸೇವನೆ ಮಾಡುತ್ತಿರುವುದು ಕಂಡು ಬಂದು ಅವರ ಬಳಿ ಹೋದಾಗ  ಅಲ್ಲಿ 650 ML ನ POWER COOL ಬಿಯರ್‌ ಬಾಟಲ್ -2 ‌ಇರುವುದು ಕಂಡುಬಂದಿರುತ್ತದೆ. ವಶಪಡಿಸಿಕೊಡ ಸ್ವತ್ತುಗಳ ಒಟ್ಟು  ಮೌಲ್ಯ 250 ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023 ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-05-2023 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080