ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 30/04/2023 ರಂದು ಸಂಜೆ 4:40 ಗಂಟೆಗೆ ಕಾರ್ಕಳ ತಾಲೂಕು, ಮಾಳ ಗ್ರಾಮದ ಮುಳ್ಳೂರು ಅರಣ್ಯ ಚೆಕ್ ಪೊಸ್ಟ್ ನಿಂದ ಸ್ವಲ್ಪ ಮುಂದೆ ಹಾದು ಹೋಗಿರುವ ಕಾರ್ಕಳ-ಶೃಂಗೇರಿ ರಾಷ್ಟ್ರೀಯ  ಹೆದ್ದಾರಿಯಲ್ಲಿ ಕಾರು ನಂಬ್ರ KA-53-N-0444 ನೇದರ ಚಾಲಕ ಪ್ರಕಾಶ್ ಕುಮಾರ್  ಶೃಂಗೇರಿ ಕಡೆಯಿಂದ ಬಜಗೋಳಿ ಕಡೆಗೆ ಕಾರನ್ನು ತಿರುವಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ, ಪಿರ್ಯಾದಿದಾರರಾದ ಬಿಂದುಶ್ರೀ U.P (32) , ಗಂಡ: ಅಭಿಜಿತ್,  ವಾಸ: 281.ರಾಯಲ್ ಕ್ಲೆಯರ್  ಬಡಾವಣೆ.ಗದ್ದಿಗೆ ಮೇನ್ ರೋಡ್. ಮಲ್ಲಹಳ್ಳ ಅಂಚೆ. ಮೈಸೂರು ಇವರ ಗಂಡ ಅಭಿಜಿತ್ ರವರು ಕಾರ್ಕಳ ಕಡೆಯಿಂದ ಶೃಂಗೇರಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ನಂಬ್ರ KA-41-M-9596 ನೇದರ ಬಲಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಬಲ ಕಾಲಿನ ಮಣಿಗಂಟಿಗೆ ಗುದ್ದಿದ ಗಾಯ ಹಾಗೂ ಪಿರ್ಯಾದಿದಾರರ ಗಂಡ ಅಭಿಜಿತ್ ರವರ ಗದ್ದ, ಮೂಗು ಹಾಗೂ ಬಲಕಣ್ಣಿನ ಮೆಲ್ಭಾಗದಲ್ಲಿ ರಕ್ತಗಾಯವಾಗಿದ್ದಲ್ಲದೆ, ಅಪಘಾತದಿಂದ ಎರಡೂ ಕಾರುಗಳು ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ವಿವನ್  ಲ್ಯಾನ್ಸಿ ಮೆಂಡೋನ್ಸ (31), ತಂದೆ: ದಿ. ವಿಲಿಯಂ ಮೆಂಡೋನ್ಸ  , ವಾಸ: ಕೋಡಿಮನೆ, ಚಿತ್ರಬೈಲು, ಕಣಜಾರು, ನಿಂಜೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ  29/04/2023 ರಂದು ಮಾರುತಿ ಸುಜುಕಿ ಕಾರು KA-20-P-5628 ನೇದರಲ್ಲಿ  ಪಿರ್ಯಾದಿದಾರರ ತಾಯಿ ಶ್ರೀಮತಿ ಲೀನಾ ಮೆಂಡೋನ್ಸ , ಪತ್ನಿ ವಿನೋಲಿನ್  ಮಿಸ್ಕಿತ್  ಇವರೊಂದಿಗೆ ಅಜೆಕಾರಿಗೆ   ಕಾರ್ಯಕ್ರಮಕ್ಕೆ  ಹೋಗಿ ಕಾರ್ಯಕ್ರಮ ಮುಗಿಸಿ  ಕಾರು ಚಲಾಯಿಸಿಕೊಂಡು ಅಜೆಕಾರಿನಿಂದ  ಕಾರ್ಕಳ ಕಡೆಗೆ ಬರುತ್ತಾ ರಾತ್ರಿ 22:00 ಗಂಟೆಗೆ  ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ  ಕ್ರಾಸ್  ಬಳಿ ತಲುಪಿದಾಗ  ಕಾರ್ಕಳ  ಕಡೆಯಿಂದ  ಅಜೆಕಾರು ಕಡೆಗೆ  KA-41-Z-9566 ಮಾರುತಿ ಸ್ವಿಫ್ಟ್  ಡಿಸೈರ್  ಕಾರನ್ನು ಅದರ  ಚಾಲಕ ರಾಹುಲ್  ಜೈನ್  ಅತೀವೇಗ  ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು  ಚಲಾಯಿಸುತ್ತಿದ್ದ  ಕಾರಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ  ಬಲಭುಜಕ್ಕೆ   ಗುದ್ದಿದ ಜಖಂ ಮತ್ತು ರಕ್ತಗಾಯ ಆಗಿದ್ದು,  ಶ್ರೀಮತಿ ಲೀನಾ ಮೆಂಡೋನ್ಸ ರವರ  ಎಡಕಾಲಿನ ಮೊಣಗಂಟಿನ ಕೆಳಗೆ ಒಳಜಖಂ  ಜಖಂ ಆಗಿದ್ದು, ವಿನೋಲಿನ್  ಮಿಸ್ಕಿತ್  ರವರ ಎಡಭುಜಕ್ಕೆ  ಗುದ್ದಿದ ಜಖಂ ಆಗಿದ್ದು ಎರಡೂ  ವಾಹನಗಳು  ಜಖಂಗೊಂಡಿರುತ್ತದೆ. ಗಾಯಗೊಂಡವರನ್ನು  ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ  ಕಾರ್ಕಳದ ಡಾ. ಟಿ.ಎಂ.ಎ ಪೈ ಆಸ್ಪತ್ರೆಗೆ  ದಾಖಲಿಸಿರುತ್ತಾರೆ.  KA-41-Z-9566 ಕಾರು ಚಾಲಕ ರಾಹುಲ್ ಜೈನ್ ಸಹ ಗಾಯಗೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಉಡುಪಿ: ದಿನಾಂಕ 28/04/2023 ರಂದು ಪಿರ್ಯಾದಿದಾರರಾದ ಪಲ್ಲವಿ (29) ಇವರಿಗೆ ಆನ್‌‌ಲೈನ್ ಜಾಬ್ ಬಗ್ಗೆ ಟೆಲಿಗ್ರಾಮ್ ನಲ್ಲಿ ಸಂದೇಶ ಬಂದಿದ್ದು, ಸಂದೇಶದಲ್ಲಿರುವ ವಿಚಾರ ಸತ್ಯ ಎಂದು ತಿಳಿದ ಪಿರ್ಯಾದಿದಾರರು ಸಂದೇಶದಲ್ಲಿ ಬಂದಿರುವ ಲಿಂಕ್ ಬಳಸಿ Airbnb ಎಂಬ ವೆಬ್‌ಸೈಟ್ ನಲ್ಲಿ ಖಾತೆ ತೆರೆದಿದ್ದು, ಆ ಬಳಿಕ ಟಾಸ್ಕ್ ನಡೆಸಲು ಹಣ ಪಾವತಿಸುವಂತೆ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್ ಮುಖೇನ ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಪಿರ್ಯಾದಿದಾರರು ದಿನಾಂಕ 30/04/2023 ರಿಂದ 01/05/2023 ರ ಮಧ್ಯಾವದಿಯಲ್ಲಿ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂಪಾಯಿ 1,53,026/- ಹಣವನ್ನು ಆನ್‌‌ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಆದರೆ, ಆರೋಪಿಗಳು ಟಾಸ್ಕ್ ನೀಡದೇ ಪಡೆದ ಹಣವನ್ನು ವಾಪಾಸು ನೀಡಿದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2023 ಕಲಂ: 66(C) , 66(D)   ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರ ತಂದೆ 68 ವರ್ಷ ಪ್ರಾಯದ ಪುಟ್ಟು ರವರು ಕಳೆದ ಮೂರು ವರ್ಷಗಳಿಂದ ಮನೆಯಲ್ಲಿಯೇ ಇದ್ದು ಕಳೆದ ಒಂದು ವರ್ಷದಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದು ಏನೇನೋ ಮಾತನಾಡಿಕೊಂಡಿದ್ದು, ದಿನಾಂಕ 30/04/2023 ರಂದು ಸಂಜೆ 16:00 ಗಂಟೆಗೆ ತನ್ನ ಮನೆಯಿಂದ ಗುಡ್ಡೆಯಂಗಡಿ ಪೇಟೆಗೆಂದು ಹೋದವರು ವಾಪಾಸು ಮನೆಗೆಬಾರದೆ  ಇದ್ದು ಸಂಜೆ 5:30 ಗಂಟೆಗೆ  ಹಾಡಿಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾಗಿ ಮಲಗಿಕೊಂಡಿದ್ದವರನ್ನು ನೋಡಿ ಪಿರ್ಯಾದಿದಾರರಿಗೆ ತಿಳಿಸಿ ಬಳಿಕ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಅಸ್ಪತ್ರೆಗೆ ಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಸಂಜೆ 6:55 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ಪಿರ್ಯಾದಿದಾರರಾದ ಫೆಲಿಕ್ಸ ಡೇಸಾ (45), ತಂದೆ:ಲೂಯಿಸ್ ಡೇಸಾ, ವಾಸ: ಕಂಡ್ಲೂರು  ಕಾವ್ರಾಡಿ ಗ್ರಾಮ ಕುಂದಾಪುರ  ತಾಲೂಕು ಇವರ ಸಹೋದರ  ಸಂಬಂಧಿ  ವಿಲ್ಪೇಡ್  ಡೇಸಾ(42) ಇವರು ಕುಂದಾಪುರ  ತಾಲೂಕಿನ ಅಂಪಾರು ಗ್ರಾಮದ  ಕಂಚಾರು ಎಂಬಲ್ಲಿ ವಾಸವಾಗಿದ್ದು, ದಿನಾಂಕ  30/04/2023  ರಂದು ಅವರು  ವಿಪರೀತ  ಎದೆನೋವಿನಿಂದ ಬಳಲುತ್ತಿದ್ದು, ಕೂಡಲೇ  ಅವರನ್ನು ಚಿಕಿತ್ಸೆಯ ಬಗ್ಗೆ  ಕುಂದಾಪುರ  ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಅವರನ್ನು  ಪರೀಕ್ಷಿಸಿದ  ವೈಧ್ಯರು   ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.   ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕೋಟ: ದಿನಾಂಕ 30/04/2023 ರಂದು ಮಧು ಬಿ ಇ (33), ಪೊಲೀಸ್‌ ಉಪನಿರೀಕ್ಷಕರು, ಕೋಟ ಪೊಲೀಸ್ ಠಾಣೆ ಇವರು  ಸಿಬ್ಬಂದಿಯವರೊಂದಿಗೆ  ರೌಂಡ್ಸ ಕರ್ತವ್ಯದಲ್ಲಿರುವಾಗ ಗುಂಡ್ಮಿ ಗ್ರಾಮದ ಹಳೆಕೋಟೆ ಮೈದಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ಮಧ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ದಾಳಿ ನಡೆಸಿದ್ದು ಕೂಡಲೇ ಆರೋಪಿತರಾದ 1) ವಿಶ್ವನಾಥ (28), 2) ಗಿರೀಶ್‌ (35) ಇವರ ವಶದಿಂದ  BAGPIPER ಎಂದು ಬರೆದಿರುವ 1)ಮದ್ಯ ತುಂಬಿರುವ 90 ML ನ ಟೆಟ್ರಾ ಪ್ಯಾಕ್‌, 2) ಮದ್ಯ ತುಂಬಿರುವ 90 ML ನ ಅರ್ಧ ಖಾಲಿ ಆಗಿರುವ ಟೆಟ್ರಾ ಪ್ಯಾಕ್‌ ಹಾಗೂ ಕುಡಿಯಲು ಬಳಸಿದ ಪ್ಲಾಸ್ಟಿಕ್ ಲೋಟಗಳು – 2 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಮೌಲ್ಯ ರೂಪಾಯಿ 100/- ಆಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2023 ಕಲಂ: 15(A) KE ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  ಬ್ರಹ್ಮಾವರ: ದಿನಾಂಕ 26/04/2023 ರಂದು ಪಿರ್ಯಾದಿದಾರರಾದ ಪ್ರಸನ್ನ ಪುತ್ರಾಯ (35), ತಂದೆ: ದಿವಂಗತ. ನಾಗೇಶ್ ಪುತ್ರಾಯ,    ವಾಸ: ಎಳಂಪಳ್ಳಿ ,ನೀಲಾವರ  ಗ್ರಾಮ ಬ್ರಹ್ಮಾವರ ತಾಲೂಕು ಇವರು ಕೆಲಸದ ನಿಮಿತ್ತ ನೀಲಾವರಕ್ಕೆ ತೆರಳುತ್ತಿರುವಾಗ 03:30 ಗಂಟೆಗೆ ರಸ್ತೆಯಲ್ಲಿ  1ನೇ ಆರೋಪಿ ಮಹೇಂದ್ರ ಎಂಬಾತನು ಕಾರಿನಲ್ಲಿ ಬಂದು ಪಿರ್ಯಾದಿದಾರರ  KA-20-EJ-1943 ಸ್ಕೂಟರನ್ನು ಅಡ್ಡಗಟ್ಟಿ ಪಿರ್ಯಾದಿದಾರರನ್ನು ಕಾರಿನಲ್ಲಿ ಸುಮಾರು 500 ಮೀಟರ್ ದೂರ ಕರೆದುಕೊಂಡು  ಹೋಗಿ 2ನೇ ಅರೋಪಿಯಾದ ಜಾರ್ಜ್‌ ಹಾಗೂ 3ನೇ ಆರೋಪಿಯಾದ ರಾಖಿ ಜೊತೆ ಸೇರಿಕೊಂಡು ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಿರುತ್ತಾರೆ. ಅಲ್ಲದೇ ಪೊಲೀಸರಿಗೆ ದೂರನ್ನು ನೀಡಿದರೆ ನಿನ್ನನ್ನು ತಿರುಗಾಡಲು ಬಿಡುವುದಿಲ್ಲವೆಂದು  ಬೆದರಿಕೆ ಹಾಕಿರುತ್ತಾರೆ.  ಈ ಘಟನೆಯಿಂದ ಪಿರ್ಯಾದಿದಾರರು ಭಯಗೊಂಡು ಮನೆಗೆ ತೆರಳಿರುತ್ತಾರೆ. ಅದೇ ದಿನ ರಾತ್ರಿ ಪಿರ್ಯಾದಿದಾರರ ಮನೆಯ ಮುಂದಿರುವ KA-20-EJ-1943 ಸ್ಕೂಟರನ್ನು ಜಖಂ ಮಾಡಿರುತ್ತಾರೆ. ಹಾಗೂ ಮನೆಯ ಅಂಗಳದಲ್ಲಿ ಗಾಜಿನ ಬಾಟಲಿ ಬಿದ್ದಿರುತ್ತದೆ.  ಸ್ಕೂಟರನ್ನು ಆರೋಪಿಗಳೆ ಜಖಂ ಮಾಡಿರಬಹುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2023 : ಕಲಂ 341,  504, 506, 323 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-05-2023 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080