ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಉಡುಪಿ: ಪಿರ್ಯಾದಿ ಗಣೇಶ್ ಪ್ರಾಯ: 45 ತಂದೆ:ಗೋಪಾಲ ಪೂಜಾರಿ ವಾಸ: ಜಿಲ್ಲಾ ಪೊಲೀಸ್ ಸಶಸ್ತ್ರ ಪಡೆ (ಡಿ.ಎ.ಆರ್),ಇವರು ಉಡುಪಿ ಡಿಎಆರ್ ಘಟಕದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 28/04/2022 ರಂದು ಆದಿ ಉಡುಪಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರಪತ್ರಿಕೆಯ ಮೌಲ್ಯಮಾಪನ ಕೇಂದ್ರದ ಗಾರ್ಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಹೆಚ್. ಸಿ 104 ನೇ ರಾಜೇಶ್ ಕುಂದರ್ ರವರು ದಿನಾಂಕ 28/04/2022 ರಂದು 21:00 ಗಂಟೆಯಿಂದ ದಿನಾಂಕ 29/04/2022 ರಂದು ಬೆಳಿಗ್ಗೆ 09:00 ಗಂಟೆ ನಡುವಿನ ಸಮಯದಲ್ಲಿ ಕರ್ತವ್ಯದಲ್ಲಿರುವಾಗ ಅವರ ಬಳಿಯಿದ್ದ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಮೃತಪಟ್ಟಿರುವುದಾಗಿ ಪಿರ್ಯಾದುದಾರರು ಹೇಳಿಕೆ ನೀಡಿದ್ದಲ್ಲದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ: 25/2022 ಕಲಂ: 174 ಸಿಅರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ತನಿಖೆ ಮುಗಿದ ಬಳಿಕ ಪಿರ್ಯಾದುದಾರರು ಆದಿ ಉಡುಪಿ ಶಾಲೆಯಲ್ಲಿದ್ದ ತನ್ನ ಬಟ್ಟೆಬರೆ ಇದ್ದ ಬ್ಯಾಗ್ ಮತ್ತು ರೈಫಲ್ ನ್ನು ತೆಗೆದುಕೊಂಡು ಡಿಎಆರ್ ಕೇಂದ್ರ ಸ್ಥಾನಕ್ಕೆ ಹೋಗಿ ಬ್ಯಾಗ್ ನ್ನು ಕಿಟ್ ಬಾಕ್ಸ್ ನಲ್ಲಿ ಇರಿಸಿ, ರೈಫಲ್ ನ್ನು ಆರ್ಮರ್ ರವರಲ್ಲಿ ಡೆಪಾಸಿಟ್ ಮಾಡಿ ವಿಶ್ರಾಂತಿಗೆ ಹೋಗಿರುತ್ತಾರೆ. ದಿನಾಂಕ 30/04/2022 ರಂದು ಬೆಳಿಗ್ಗೆ 09:30 ಗಂಟೆಗೆ ಡಿಎಆರ್ ಹೆಡ್ ಕ್ವಾರ್ಟಸ್ ಗೆ ಕರ್ತವ್ಯಕ್ಕೆ ಬಂದು ಕಿಟ್ ಬಾಕ್ಸ್ ನಲ್ಲಿದ್ದ ಬ್ಯಾಗ್ನಿಂದ ಸಮವಸ್ತ್ರ ಮತ್ತು ಬೆಟ್ ಶೀಟ್ ನ್ನು ಹೊರತೆಗೆದಾಗ, ಬೆಡ್ ಶೀಟ್‌ ನ ಅಡಿಯಿಂದ ನೋಟ್ ಬುಕ್‌ ನ  ಒಂದು ಹಾಳೆ ಬಿದ್ದಿದ್ದು, ಅದನ್ನು ನೋಡಲಾಗಿ, ಅದರ ಕೊನೆಯಲ್ಲಿ ಎಹೆಚ್ಸಿ 104 ಎಂದು ಬರೆದು ಸಹಿ ಮಾಡಿದ್ದು, ಅದರಲ್ಲಿ ಮೃತರು ತನ್ನ ಸಾವಿಗೆ ಆರೋಪಿತರು ಕಾರಣ ಎಂಬುದಾಗಿ ಬರೆದಿದ್ದು, ಈ ಮಾಹಿತಿಯನ್ನು ಪೊಲೀಸ್ ಮೇಲಾಧಿಕಾರಿಗಳಿಗೆ ತಿಳಿಸಿ ಡೆತ್‌ ನೋಟ್‌ ನ್ನು ಠಾಣೆಗೆ ಹಾಜರುಪಡಿಸಿ ಪಿರ್ಯಾದನ್ನು ನೀಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ  65/2022ಕಲಂ: 306 Rw 34 IPC ಯಂತೆ ಪ್ರಕರಣ ದಾಕಲಿಸಲಾಗಿದೆ.

ಕಳವು ಪ್ರಕರಣಗಳು

  • ಉಡುಪಿ: ಪಿರ್ಯಾದಿ ಸುಬ್ರಹ್ಮಣ್ಯ ನಾಯಕ್‌ ಪ್ರಾಯ: 38 ವರ್ಷ ತಂದೆ: ರಘುರಾಮ್‌ ವಾಸ: 7-60ಎ, ರಾಘವೇಂದ್ರ ನಿಲಯ, ಕಾಜಾರಗುತ್ತು, ಹಿರಿಯಡ್ಕ ಇವರ  ಟಿವಿಎಸ್‌ ಅಪಾಚಿ ಮೋಟಾರ್‌ ಸೈಕಲ್‌ ನಂಬ್ರ: KA 20 V 6849 (Chassis No: MD634KE4792B52623 & Engine No: OE4B92154306) ನೇದನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಲ್ಸಂಕ ಬಳಿ ಇರುವ ಗೌತಮ್‌ ಏಜೆನ್ಸಿ ಎದುರು ದಿನಾಂಕ: 28/04/2022 ರಂದು ಬೆಳಿಗ್ಗೆ 11:15 ಗಂಟೆಗೆ ನಿಲ್ಲಿಸಿದ್ದು, ಬೆಳಿಗ್ಗೆ 11:50 ಗಂಟೆಗೆ ವಾಪಾಸು ಬಂದು ನೋಡಿದಾಗ ದ್ವಿ-ಚಕ್ರ ವಾಹನ ನಿಲ್ಲಿಸಿದ ಜಾಗದಲ್ಲಿಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ ನ ಅಂದಾಜು ಮೌಲ್ಯ ರೂ. 20,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ:379 IPC ಯಂತೆ ಪ್ರಕರಣ ದಾಕಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

  • ಬೈಂದೂರು: ಫಿರ್ಯಾದಿ ಸುಧೀರ  ಪ್ರಾಯ:29 ವರ್ಷ ತಂದೆ: ರಾಮ ಶೆಟ್ಟಿ ವಾಸ: ಹೆಗ್ಗೇರಿ ಮನೆ ತಗ್ಗರ್ಸೆ ಇವರ ತಂದೆಯ ಸಂಬಂದಿಯಾದ ಬೇಬಿ ಶೆಡ್ತಿಯವರು ತನ್ನ ಮಗ ಸುಧೀಪ ಪ್ರಾಯ:17 ವರ್ಷ ನೊಂದಿಗೆ  ತಗ್ಗರ್ಸೆ ಗ್ರಾಮದ  ಶೋಭಾ ಶೇರುಗಾರರ ಬಾಬ್ತು ಬಾಡಿಗೆ ಮನೆಯಲ್ಲಿ. 2 ವರ್ಷಗಳಿಂದ ವಾಸ ಮಾಡಿಕೊಂಡಿದ್ದು ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಬೇಬಿ ಶೆಡ್ತಿ ರವರ ಮಗ  ಸುದೀಪ ಪ್ರಾಯ:17 ವರ್ಷ ಈತನು  ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ  ಪ್ರಥಮ ಪಿ.ಯು.ಸಿ ವಿಧ್ಯಾಭ್ಯಾಸ  ಮಾಡಿಕೊಂಡಿದ್ದು ಈ ದಿನ ಪ್ರಥಮ ಪಿಯುಸಿ ಯ ಪಲಿತಾಂಶ  ಇದ್ದು ಸುಧೀಪನು  ತಾನು ಫೇಲಾಗಬಹುದು ಎಂಬ ಹೆದರಿಕೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ಈ ದಿನ ದಿನಾಂಕ 30/04/2022 ರಂದು  ಬೆಳಿಗ್ಗೆ  10:30  ಗಂಟೆಯಿಂದ ಮಧ್ಯಾಹ್ನ  12:50   ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಾಗಿರುವ  ಮನೆಯ  ಅಡುಗೆ ಕೋಣೆಯ ಮಾಡಿಗೆ ಅಳವಡಿಸಿದ ಕಬ್ಬಿಣದ ರಾಡಿಗೆ ಕೆಂಪು ಬಣ್ಣದ ಶಾಲ್ ನ್ನು  ಕಟ್ಟಿ  ಇನ್ನೊಂದು ಬದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 24/2022 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 01-05-2022 10:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080