ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬೈಂದೂರು: ಫಿರ್ಯಾದಿದಾರರಾಧ ಮಹಮ್ಮದ್ ಜಲೀಲ್ (46) ತಂದೆ; ದಿ ಸಯ್ಯದ್ ಹುಸೇನ್, ವಾಸ; ಮೌಲಾನಾ ಕಾಂಪ್ಲೆಕ್ಸ್ ಹೆಚ್ ಪಿ ಪೆಟ್ರೋಲ್ ಬಂಕ್ ಬಳಿ ನೀರ್ಗದ್ದೆ. ಶಿರೂರು ಗ್ರಾಮ, ಬೈಂದೂರು ಇವರು ದಿನಾಂಕ 30/04/2021 ರಂದು ಮಧ್ಯಾಹ್ನ 01:40 ಗಂಟೆ ಸುಮಾರಿಗೆ ಒತ್ತೆನೆಣೆ ಎಂಬಲ್ಲಿ ಅವರ ಬೈಕಿನಲ್ಲಿ ಹೋಗುತ್ತಿರುವಾಗ ಮಹಮ್ಮದ್ ಜಲೀಲ್ ರವರ ಹಿಂದಿನಿಂದ KA-20-C-812 ಟಿಪ್ಪರ್ ಲಾರಿಯನ್ನು ಅದರ ಚಾಲಕನು ಶಿರೂರು ಕಡೆಯಿಂದ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ನೇ ಪೂರ್ವ ರಸ್ತೆಯಲ್ಲಿ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಹಮ್ಮದ್ ಜಲೀಲ್ ರವರ ಬೈಕನ್ನು ಒವರ್ ಟೇಕ್ ಮಾಡಿಕೊಂಡು ಹೋಗಿದ್ದು ಒತ್ತಿನೆಣೆ ತಿರುವುನ ಬಳಿ ಟಿಪ್ಪರ್ ಲಾರಿಯು ಚಾಲಕನ ಹತೋಟಿ ತಪ್ಪಿ ರಸ್ತೆಯ ಬಲಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಮಗುಚಿ ಸುಮಾರು 10 ಅಡಿ ಅಳದಲ್ಲಿರುವ ಚತುಷ್ಪಧ ರಾಷ್ಟ್ರೀಯ ಹೆದ್ದಾರಿ 66ರ ಪಶ್ಚಿಮ ಬದಿಯ ರಸ್ತೆಗೆ ಬಿದ್ದಿದ್ದು ಇವರು ಹೋಗಿ ನೋಡಲಾಗಿ ಟಿಪ್ಪರ್ ಲಾರಿಯ ಚಾಲಕನು ಒಳಗೆ ಸಿಕ್ಕಿ ಹಾಕಿಕೊಂಡಿದ್ದು ಮಹಮ್ಮದ್ ಜಲೀಲ್ ರವರು ಹಾಗೂ ಇತರರು ಸೇರಿ ಟಿಪ್ಪರ್ ಲಾರಿ ಚಾಲಕನನ್ನು ಹೊರ ತೆಗೆದು ಒಂದು ಅಂಬುಲೆನ್ಸ್ ನಲ್ಲಿ ಬೈಂದೂರಿನ ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಂತರ ಮಹಮ್ಮದ್ ಜಲೀಲ್ ರವರು ಅದೇ ಅಂಬುಲೆನ್ಸ್ ನಲ್ಲಿ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಬ್ರಹ್ಮಾವರ ಬಳಿ ತಲುಪಿದಾಗ ಟಿಪ್ಪರ್ ಲಾರಿ ಚಾಲಕನು ಮೃತಪಟ್ಟಂತೆ ಕಂಡಿದ್ದು ನಂತರ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಪರೀಕ್ಷಿಸಿದ ವೈದ್ಯರು ಟಿಪ್ಪರ್ ಲಾರಿ ಚಾಲಕನು ಮೃತಪಟ್ಟಿರುವುದಾಗಿ ಧೃಡಪಡಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೊಲ್ಲೂರು: ಪಿರ್ಯಾದಿದಾರರಾಧ ಮೋಹನ್ ಖಾರ್ವಿ (30) ತಂದೆ:ದಿ.ರಾಮ ಖಾರ್ವಿ ವಾಸ:ಕಾಳಬೆಕ್ಕಿನ ಮನೆ ಗಾಂಧಿನಗರ ಮರವಂತೆ ಬೈಂದೂರು ಇವರು ದಿನಾಂಕ 30/04/2021 ರಂದು ಬೆಳಿಗ್ಗೆ  08:30 ಗಂಟೆಗೆ ತನ್ನ ಮೋಟಾರು ಸೈಕಲ್ ನಲ್ಲಿ ವ್ಯವಹಾರದ ನಿಮಿತ್ತ ಮರವಂತೆ ಕಡೆಯಿಂದ ಕೊಲ್ಲೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಇಡೂರು ಕುಂಜ್ಞಾಡಿ ಗ್ರಾಮದ ರಾಜ್ಯ ಹೆದ್ದಾರಿಯ ಇಡೂರು ಕ್ರಾಸ್ ಬಳಿ ತಲುಪಿದಾಗ ಮೋಹನ್ ಖಾರ್ವಿ ರವರ ಎದುರಿನಿಂದ ಅಂದರೆ ವಂಡ್ಸೆಯಿಂದ ಕೊಲ್ಲೂರು ಕಡೆಗೆ ಕಿಶನ್ ಎಂಬವರು KA-20-EH-5050 ನೇ ಮೋಟಾರು ಸೈಕಲ್ ನಲ್ಲಿ  ರಾಜು ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜಿಂಕೆಯೊಂದು ರಸ್ತೆಗೆ ಒಮ್ಮೇಲೆ ಅಡ್ಡ ಬಂದ ಕಾರಣ ಗಲಿಬಿಲಿ ಗೊಂಡು ವೇಗವನ್ನು ನಿಯಂತ್ರಿಸಲಾಗದೇ ಆರೋಪಿಯು ಒಮ್ಮೇಲೆ ಮೋಟಾರು ಸೈಕಲ್ ಗೆ ಬ್ರೇಕ್ ಹಾಕಿ ನಿಯಂತ್ರಣ ತಪ್ಪಿದ ಪರಿಣಾಮ ಕಿಶನ್ ಹಾಗೂ ಸಹ ಸವಾರ ರಾಜು ರವರು ಮೊಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ರಾಜು ರವರ ಎಡಕಾಲಿಗೆ ಒಳನೋವು ಆಗಿ ಉಡುಪಿ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಕಿಶನ್ ಇತನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ತೇಜಸ್ವಿ ಟಿ ಐ ಪಿಎಸ್ ಐ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ರವರು ದಿನಾಂಕ 30/04/2021 ರಂದು ಸಿಬ್ಬಂದಿಯವರಾದ ಸತೀಶ್ ಬಟ್ವಾಡಿ, ಮಂಜುನಾಥ್ ಇವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ20-ಜಿ-162 ನೇದರಲ್ಲಿ ಚಾಲಕನಾಗಿ ಸತೀಶ್ ನಾಯ್ಕ, ಇವರೊಂದಿಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್ ಬಸ್ ನಿಲ್ದಾಣದ ಬಳಿ ತಪಾಸಣೆ ಮಾಡುತ್ತಿರುವಾಗ ಸಮಯ ಸಂಜೆ 17:30 ಗಂಟೆಗೆ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಕೆಎ-20-ಇಯು-0876 ನೇ ನಂಬ್ರದ ಸ್ಕೂಟಿ ಸವಾರ ಹಾಗೂ ಸಹ ಸವಾರ ಹೆಲ್ಮೆಟ್ ಹಾಗೂ ಮಾಸ್ಕ ಧರಿಸದೇ ಅತೀವೇಗವಾಗಿ ಸ್ಕೂಟಿಯನ್ನು ಚಲಾಯಿಸಿಕೊಂಡು ಬರುತ್ತಿದ್ದು ಸ್ಕೂಟಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಕೂಡಾ ಪೋಲೀಸ್ ಸೂಚನೆಯನ್ನು ಉಲ್ಲಂಘಿಸಿ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು ಸದ್ರಿಯವರುಗಳಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಮಾಸ್ಕ ಹಾಕದೇ ಅನಗತ್ಯವಾಗಿ ಸ್ಕೂಟಿಯಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 46/2021 ಕಲಂ: 269,270.279,ಐ,ಪಿ,ಸಿ ಹಾಗೂ ಕಲಂ: 119 ಜೊತೆಗೆ 177 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಪಡುಬಿದ್ರಿ: ಪ್ರಸ್ತುತ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ರಾಜ್ಯ ಸರ್ಕಾರವು ಲಾಕ್‌ಡಾನ್‌ಘೋಷಿಸಿ ಜನರ ಅನಗತ್ಯ ಓಡಾಟವನ್ನು ನಿಷೇಧಿಸಿದ್ದು  ಆ ಬಗ್ಗೆ ದಿಲೀಪ್ ಜಿ ಆರ್ ಪೊಲೀಸ್ ಉಪ ನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆ ಇವರು ಪಡುಬಿದ್ರಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚೆಕ್ ಪೋಸ್ಟ್‌ನಿರ್ಮಿಸಿ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ   ನಡೆಸುತ್ತಿರುವ ಸಮಯ ದಿನಾಂಕ 30/04/2021 ರಂದು ಸಂಜೆ 17:00 ಗಂಟೆಗೆ KA-20-EB-1917 ನೇ ಮೋಟಾರ್ ಸೈಕಲ್ ಸವಾರ ಹರಿಪ್ರಸಾದ್ ಮತ್ತು KA-20-R-3117 ನೇ ಮೋಟಾರ್ ಸೈಕಲ್ ಸವಾರ ಶಂಶುದ್ದೀನ್ ಎಂಬವರು ಯಾವುದೇ ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು  ಸದ್ರಿ ಆರೋಪಿತರನ್ನು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 31/2021 ಕಲಂ: 269, 271, ಐಪಿಸಿ ಮತ್ತು ಕಲಂ 3 ಸಾಂಕ್ರಾಮಿಕ ರೋಗ ತಡೆ ಅಧಿನಿಯಮ ಹಾಗೂ  1897ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 30/04/2021 ರಂದು ಪಿರ್ಯಾದಿದಾರರಾದ ಸಂಗೀತಾ ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ 18:45 ಗಂಟೆಗೆ ಶಿರೂರು ಗ್ರಾಮದ ಕೆಳಪೇಟೆಯ ಮುಸ್ಲೀಂಕೇರಿ ಇರುವ ಜಾಮೀಯಾ ಮಸೀದಿ ಬಳಿ ಹೋಗುತ್ತಿರುವಾಗ ಸದ್ರಿ ರಸ್ತೆಯ ನೇರಕ್ಕೆ ಜಾಮೀಯಾ ದಾರುಸ್ಸುನ್ನಹ್ ಮದ್ರಸಾ ಬಳಿಯಲ್ಲಿ ಕೆಲವು ವ್ಯಕ್ತಿಗಳು ಮೋಟಾರು ಸೈಕಲ್ ಗಳನ್ನು ನಿಲ್ಲಿಸಿಕೊಂಡು ಕೋವಿಡ್-19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಿರುವಂತಹ ಕರ್ಪ್ಯೂ ಆದೇಶವನ್ನು ಪಾಲಿಸದೇ ಯಾವುದೇ ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಮೈದಾನದಲ್ಲಿ ಗುಂಪು ಸೇರಿ ಜೋರಾಗಿ ಮಾತನಾಡುತ್ತಾ ಒಬ್ಬರಿಗೊಬ್ಬರು ಯಾವುದೇ ಸಾಮಾಜಿಕ ಅಂತರ ಇಲ್ಲದೇ ಮಾಸ್ಕ ಧರಿಸಿದೇ ಆಟವಾಡುತ್ತಾ ಇದ್ದು ಕೋವಿಡ್ -19 ಸಾಂಕ್ರಾಮಿಕ ರೋಗ ತೀವ್ರತರವಾಗಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಸರ್ಕಾರವು ಕರ್ಪ್ಯೂ ವನ್ನು ವಿಧಿಸಿರುವ ಸಂದರ್ಭದಲ್ಲಿ ಸರ್ಕಾರದ ದೇಶವನ್ನು ಉಲ್ಲಂಘಿಸಿ ಸಾಂಕ್ರಾಮಿಕ ರೋಗವು ಹರಡುವ ರೀತಿಯಲ್ಲಿ ವರ್ತಿಸುತ್ತಿದ್ದ ಸ್ಥಳಕ್ಕೆ ಹೋದಾಗ ಸದ್ರಿ ವ್ಯಕ್ತಿಗಳು ಓಡಿ ಪರಾರಿ ಆಗಿದ್ದು, ಸಂಗೀತಾ ಪೊಲೀಸ್ ಉಪನಿರೀಕ್ಷಕರು ರವರು ಸ್ಥಳಕ್ಕೆ ಕೋವಿಡ್ -19 ಕರ್ಪ್ಯೂ ಗೆ ಸಂಬಂಧಪಟ್ಟ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾದ ನವೀನ್ ಹಾಗೂ ಪಂಚರನ್ನು ಬರಮಾಡಿಕೊಂಡು ಸದ್ರಿ ಸ್ಥಳದಲ್ಲಿದ್ದ ಹೊಂಡಾ ಆಕ್ಟಿವಾ ಮೋಟಾರು ಸೈಕಲ್ ನಂಬ್ರ KA-20-EC-5215 ಆಗಿದ್ದು, ಅದರ ಬದಿಯಲ್ಲಿ 3 ಕ್ರಿಕೆಟ್ ಸ್ಟಂಪ್ ಹಾಗೂ ಟೆನ್ನಿಸ್ ಬಾಲ್ ಹೊಂಡಾ ಡಿಯೋ ಮೋಟಾರು ಸೈಕಲ್ ನಂಬ್ರ KA-47-S-4740 ನೇಯದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 83/2021 ಕಲಂ 5 (1), (4) THE KARNATAKA EPIDEMIC DISEASES ACT 2020 ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಪಿ ಗಣೇಶ ಶೆಣೈ ತಂದೆ:ಪಿ ದಯಾನಂದ ಶೆಣೈ ಆಶ್ಲೇಷ ಹೋಟೆಲ್, ಈಶ್ವರನಗರ, ಮಣಿಪಾಲ, ಇವರು ಮಣಿಪಾಲ ಈಶ್ವರನಗರದ ಆಶ್ಲೇಷ ಕಟ್ಟಡದ ಮಾಲೀಕರಾಗಿದ್ದು, ಕಟ್ಟಡವನ್ನು ಕಟ್ಟಿಯಾದ ನಂತರ ಕಟ್ಟಡದ ನೆಲಮಾಳಿಗೆ ನಂಬರ್ 8-79A5 ಕೊಠಡಿಯನ್ನು ವಿಘ್ನೇಶ್ ನಾಯಕ್ ಎಂಬುವವರಿಗೆ ಮಾರಾಟ ಮಾಡಿರುತ್ತಾರೆ. ಅವರು ತಮ್ಮ ವ್ಯಾಪಾರ ವಹಿವಾಟಿನ ವಸ್ತುಗಳನ್ನು ಇಡಲು ಗೋಡಾನ್ ಆಗಿ ಬಳಸಿಕೊಂಡಿರುತ್ತಾರೆ. ದಿನಾಂಕ 22/04/2021 ರಂದು ಈಶ್ವರನಗರದ ಆಶ್ಲೇಷ  ಕಟ್ಟಡದ ಈ ಕೊಠಡಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ಇಡೀ ಕಟ್ಟಡಕ್ಕೆ ಹರಡಿರುತ್ತದೆ. ವಿಘ್ನೇಶ್ ನಾಯಕ್ ರವರ ನಿರ್ಲಕ್ಷ್ಯತನದಿಂದ ಮತ್ತು ಯಾವುದೇ ಮುಂಜಾಗ್ರತಾ ಕ್ರಮ ಅವರು ಕೈಗೊಳ್ಳಲದೇ ಇರುವುದರಿಂದ ಕಟ್ಟಡಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅದೇ ಕಟ್ಟಡದಲ್ಲಿರುವ ಪಿ ಗಣೇಶ ಶೆಣೈ ರವರ ಕೊಠಡಿಗೆ ಅಂದಾಜು 20,0000/- ರೂಪಾಯಿ ಹಾನಿಯಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 61/2021 ಕಲಂ: 286 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ ದುನ್ವಾನ್‌ ರಿಕೀತ್ (30)‌ತಂದೆ: ಮೋಹನ್‌ ಪ್ರೇಮ್‌ ಕುಮಾರ್‌ವಾಸ: 12-96, ಜೀಸಸ್‌ ಹೋಮ್‌, ಆಬ್ದುಲ್‌ ಕಾಂಪ್ಲೆಕ್ಸ್‌ ಬಳಿ, ಸಾಲ್ಮರ, ಕೊಡವೂರು, ಮಲ್ಪೆ ಉಡುಪಿ ಇವರು ದಿನಾಂಕ 30/04/2021 ರಂದು ಬೆಳಿಗ್ಗೆ 10:30 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪಡು ಸಗ್ರಿಯ ಬಾಲಾಜಿ ಲೇಔಟ್ ಕಡೆಯಿಂದ ಮನೆಯ ಕಡೆಗೆ ತನ್ನ KA-20-Z-8594 ನೇ ಮಾರುತಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬಾಲಾಜಿ ಲೇಔಟ್ ಬಳಿ ಆಪಾದಿತರಾದ 1) ದೀಪಕ್‌, 2)ದಿಲಿಪ್ ಇವರು ವಿರುದ್ದ ದಿಕ್ಕಿನಲ್ಲಿ ಸ್ವೀಪ್ಟ್ ಕಾರನ್ನು ದುನ್ವಾನ್‌ ರಿಕೀತ್ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮಾರುತಿ ಕಾರಿಗೆ ಅಡ್ಡ ನಿಲ್ಲಿಸಿ ತಡೆ ಮಾಡಿ ಆಪಾದಿತರಿಬ್ಬರು ದುನ್ವಾನ್‌ ರಿಕೀತ್ ರವರನ್ನು ಕಾರಿನಿಂದ ಇಳಿಸಿ ಇವರನ್ನು ಉದ್ದೇಶಿಸಿ ನನ್ನ ತಂದೆ ತಾಯಿ ಇವರಿಗೆ ಕೋವಿಡ್ ಬಂದ ಬಗ್ಗೆ ಅಪ ಪ್ರಚಾರ ಮಾಡುತ್ತಿ ಎಂದು ಕೋಪದಿಂದ  ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಕೈ ಕಾಲು ಮುರುಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಲ್ಲದೆ ದುನ್ವಾನ್‌ ರಿಕೀತ್ ರವರ ಕಾರಿನ ಗ್ಲಾಸ್ಗಳನ್ನು ಕಲ್ಲು ಮತ್ತು ಬಿಯರ್ ಬಾಟಲಿಯಿಂದ ಒಡೆದು ಇವರಿಗೆ ಸುಮಾರು 30,000 ರೂಪಾಯಿ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 62/2021 ಕಲಂ:341,504, 506,427, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 30/04/2021 ರಂದು ಪಡುತೋನ್ಸೆ ಗ್ರಾಮದ ಕಂಬಳತೋಟ ಪರಿಸರದಲ್ಲಿ ಅನಧೀಕೃತವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರ ಕಚೇರಿಯಿಂದ ಬಂದ ದೂರಿನಂತೆ ಸಂದ್ಯಾ ಕುಮಾರಿ (29) ತಂದೆ: ಬಾಬು ಎನ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ  ರಜತಾದ್ರಿ ಮಣಿಪಾಲ, ಉಡುಪಿ ಇವರು ಮತ್ತು ಸಿಬ್ಬಂದಿಯವರು  ಸದ್ರಿ ಸ್ಥಳ ಪರಿಶೀಲನೆ ಬಗ್ಗೆ  ಕಛೇರಿ ವಾಹನ ಸಂಖ್ಯೆ ಕೆಎ-20-ಜಿ-0388 ನೇದರ ಚಾಲಕನಾದ ಯೋಗೀಶ ಶೆಟ್ಟಿಗಾರ ರವರ  ಜೊತೆಯಲ್ಲಿ ಸದ್ರಿ ಸ್ಥಳಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡುವ ಸಮಯ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಇರ್ಷಾದ್ ಸದ್ರಿ ಸ್ಥಳಕ್ಕೆ ಬಂದು ನನ್ನ ಮರಳು ಧಕ್ಕೆ ಯನ್ನು ಪರಿಶೀಲಿಸಲು ನಿಮಗೇನು ಆಧಾರವಿದೆ, ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ತಿಳಿಸಿರುತ್ತಾನೆ, ಸಂದ್ಯಾ ಕುಮಾರಿ ರವರು  ಸದ್ರಿ ಮರಳು  ಧಕ್ಕೆಯ ತೋಟದಲ್ಲಿದ್ದ ಟಿಪ್ಪರ್ ವಾಹನವನ್ನು ಪರಿಶೀಲಿಸಲು ಹೋದಾಗ ಆರೋಪಿಯು ಐದಾರು ಜನರೊಂದಿಗೆ ಗುಂಪು ಸೇರಿಸಿಕೊಂಡು ಕಛೇರಿ ವಾಹನದ ಚಾಲಕನಿಗೆ ಹೊಡೆಯಲು ಪ್ರಯತ್ನ ಪಟ್ಟಿರುತ್ತಾರೆ, ನಂತರ ನಮ್ಮ ಇಲಾಖಾ ವಾಹನವನ್ನು ಚಲಾಯಿಸಿಕೊಂಡು ಹೋಗುವಂತೆ ಚಾಲಕನಿಗೆ ತಿಳಿಸಿದಾಗ ಆರೋಪಿಯು ಬಿಳಿ ಬಣ್ಣದ CRETA ಕಾರನ್ನು ಅಡ್ಡ ಇರಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ,  ಆ ಸಮಯ ತಡೆಯಲು ಹೋದ ಸಂದ್ಯಾ ಕುಮಾರಿ ರವರಿಗೆ  ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 38/2021 ಕಲಂ: 143, 147 341, 353, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-05-2021 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080