ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ತೇಜಸ್ವಿ ಟಿ ಐ ಪಿಎಸ್ಐ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ದಿನಾಂಕ: 01/05/2021 ರಂದು ನಾನು ಠಾಣಾ ಸಿಬ್ಬಂದಿಯವರಾದ ಹೆಚ್,ಸಿ 60 ನೇ ಮಂಜುನಾಥ್ ಇವರೊಂದಿಗೆ ಇಲಾಖಾ ಜೀಪು ನಂಬ್ರ: ಕೆಎ-20-ಜಿ-162 ನೇದರಲ್ಲಿ ಚಾಲಕನಾಗಿ ಎ,ಹೆಚ್,ಸಿ, 109 ನೇ ಸತೀಶ್ ನಾಯ್ಕ, ಇವರೊಂದಿಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 12:00 ಗಂಟೆಗೆ ಆರೋಪಿ 1) ಮುರಳೀಧರ (31) ತಂದೆ: ಅರುಣ್ ಕುಮಾರ್ ವಾಸ: ಶ್ರೀಕೃಷ್ಣ ಪ್ರಸಾದ್ ಹೌಸ್, ಅತ್ತೂರ್ ಚರ್ಚ ರಸ್ತೆ, ಕಾಬೆಟ್ಟು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರು ತನ್ನ ಸೆಲೂನ್ ಅಂಗಡಿಯನ್ನು ತೆರೆದಿದ್ದು ಆರೋಪಿ 2) ಶ್ರೀ ಸಂಪತ್ (25) ತಂದೆ: ಸದಾಶಿವ ಆಚಾರ್ಯ ವಾಸ: ಗಾಯತ್ರಿ ನಿವಾಸ, ಮೈಲೊಟ್ಟುರಸ್ತೆ, ಅತ್ತೂರು ಅಂಚೆ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು 3) ಶ್ರೀ ದಾಮೋಧರ (36)ತಂದೆ: ಸೋಮಯ್ಯ ವಾಸ: ಚೇತನಹಳ್ಳಿ, ಅತ್ತೂರು ಅಂಚೆ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ.ಇವರು ಸೆಲೂನ್ ನಲ್ಲಿ ಗ್ರಾಹಕರಾಗಿ ಬಂದಿದ್ದು, ಕೋವಿಡ್ ಕರ್ಪ್ಯೂ ಇದ್ದು ಈ ಸಮಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂಬ ಆದೇಶವಿದ್ದು ಸದ್ರಿಯವರುಗಳಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 47/2021 ಕಲಂ: 269,270 ಐ,ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಗುರುನಾಥ ಬಿ ಹಾದಿಮನಿ ಪಿ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 01/05/2021 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 08:45 ಗಂಟೆಗೆ ಆರೋಪಿ ರಮೇಶ್ ರವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಹೊಸಾಳ ಗ್ರಾಮದ ಬಾರಕೂರು ರಥಬೀದಿಯ ಗೋಕುಲ್‌ ಆಚಾರ್ಯ ಎಂಬವರ ಕಾಂಪ್ಲೆಕ್ಸ್‌ ಕಟ್ಟಡದಲ್ಲಿ OLGA Hair Dresses ಅಂಗಡಿಯನ್ನು ತೆರೆದು ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 66/2021 ಕಲಂ 269 ಐ,ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಸುಂದರ ಎ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ. ರವರು ದಿನಾಂಕ 01/05/2021 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 08:15 ಗಂಟೆಗೆ ಆರೋಪಿ ಯೋಗಿಶ್ ಭಂಡಾರಿ ಯವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಕಚ್ಚೂರು ಗ್ರಾಮದ ಬಾರಕೂರು ರಥಬೀದಿಯ ಲಕ್ಷ್ಮೀ ಕಾಂಪ್ಲೆಕ್ಸ್‌ಕಟ್ಟಡದಲ್ಲಿ My Choice Hair Parlour ಅಂಗಡಿಯನ್ನು ತೆರೆದು ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2021 ಕಲಂ 269 ಐ,ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ವೆಂಕಟರಮಣ ದೇವಾಡಿಗ, ಹೆಚ್‌ಸಿ 2046. ಬ್ರಹ್ಮಾವರ ಪೊಲೀಸ್ ಠಾಣೆ ರವರು ದಿನಾಂಕ 01/05/2021 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 08:30 ಗಂಟೆಗೆ ಆರೋಪಿ ಅಭಿಜಿತ್‌ ರವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಕಚ್ಚೂರು ಗ್ರಾಮದ ಬಾರಕೂರು ಗಣೇಶ್‌ ಎಂಟರ್‌ ‌ಪ್ರೈಸಸ್‌‌ ಪೆಟ್ರೋಲ್‌ ಬಂಕ್‌ನ ಬಳಿ ಇರುವ ಮದರ್‌ ಎನ್‌‌ಕ್ಲೇವ್‌ ‌ಕಟ್ಟಡದಲ್ಲಿರುವ Aruns Hair Parlour ಅಂಗಡಿಯನ್ನು ತೆರೆದು ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 65/2021 ಕಲಂ 269 ಐ,ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 01-05-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080