ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  •  ಕುಂದಾಪುರ: ಪಿರ್ಯಾದಿ ಚಂದ್ರಕಲಾ ಹಾಗೂ ಆಪಾದಿತ ದೀಪಕ್‌ ಮತ್ತು ರಾಧಾರಿಗೂ ಜಾಗದ ಗಡಿ ಗುರುತಿನ ವಿಚಾರದಲ್ಲಿ ತಕರಾರಿದ್ದು ಅದೇ ದ್ವೇಷದಿಂದ ದಿನಾಂಕ 31/03/2023 ರಂದು ಸಂಜೆ 06:30 ಗಂಟೆಗೆ ಪಿರ್ಯಾದಿದಾರರು ಅವರ ಗಂಡ ಮತ್ತು ಮಕ್ಕಳೊಂದಿಗೆ ಮನೆಯಲ್ಲಿರುವಾಗ ಆರೋಪಿ ದೀಪಕ್‌ ಮತ್ತು ಆತನ ತಾಯಿ ರಾಧಾ ಎಂಬುವವನು ಗಡಿ ಬಾಗದಲ್ಲಿ ಹಾಕಿದ ಬೇಲಿಯನ್ನು ಕಡಿದು ಕೀಳುತ್ತಿದ್ದಾಗ ಅದನ್ನು ಪಿರ್ಯಾದಿದಾರರು ಪ್ರಶ್ನಿಸಿದ್ದಕ್ಕೆ  ಅವಾಚ್ಯವಾಗಿ ಬೈದು ಕತ್ತಿಯಿಂದ ಕಡಿಯಲು ಬಂದು ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿದೆ. ಸದ್ರಿ ಹಲ್ಲೆಯಿಂದ ಪಿರ್ಯಾದಿದಾರರು ಹಾಗೂ ಅವರ ಗಂಡ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2023 ಕಲಂ: 504, 354, 324,ಜೊತೆಗೆ 34 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿ ದೀಪಕ ಮೋಗವೀರ ಇವರಿಗೂ ಹಾಗೂ ಆಪಾದಿತ ಮಂಜುನಾಥ ಆಚಾರ್ಯ ಮತ್ತು ಚಂದ್ರಕಲಾರಿಗೂ ಜಾಗದ ಗಡಿ ಗುರುತಿನ ವಿಚಾರದಲ್ಲಿ ತಕರಾರಿದ್ದು, ದಿನಾಂಕ 31/03/2023 ರಂದು ಸಂಜೆ 06:30 ಗಂಟೆಗೆ  ಪಿರ್ಯಾದಿದಾರರು ಅವರ ಹಿಂಬದಿ ಗಡಿಯಲ್ಲಿರುವ ಬೇಲಿಯನ್ನು ಕಡಿಯಲು ಹೋದಾಗ ಹಿಂದಿನ ಮನೆಯವರಾದ ಆರೋಪಿ ಮಂಜುನಾಥ ಆಚಾರ್ಯ ಹಾಗೂ ಆತನ ಹೆಂಡತಿ ಚಂದ್ರಕಲಾ ರವರು ಪಿರ್ಯಾದಿದಾರರನನ್ನು ಉದ್ದೇಶೀಸಿ ಜಾಗದ ಗಡಿಯಲ್ಲಿರುವ ಗಿಡಗಳನ್ನು ಕಡಿಯಬೇಡಿ ಗಡಿ ಗುರುತು ಸರಿ ಇಲ್ಲ ಎಂದು ಬೈದು ಆರೋಪಿತರಿಬ್ಬರು ಸೇರಿ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ್‌ ಮಾಡಿ ಅವರ ಪೈಕಿ ಮಂಜುನಾಥ ಆಚಾರ್ಯ ಆತನ ಕೈಯಲ್ಲಿರುವ ಮರದ ರೀಪಿನಿಂದ ಪಿರ್ಯಾದಿದಾರರ ತೆಲೆಗೆ ಹೊಡೆದು ನಂತರ ಆರೋಪಿತರಿಬ್ಬರು ಮುಂದಕ್ಕೆ ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೇಧರಿಕೆ ಹಾಕಿ ಅಲ್ಲಿಂದ ಓಡಿ ಹೋಗಿದ್ದು ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ 504, 447, 324, 506 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ: 31/03/2023 ರಂದು ಫಿರ್ಯಾದಿ ಸುಜಯ್ ಆಚಾರ್ಯ ಇವರು ಅವರ ಸ್ನೇಹಿತ ನಿಲೇಶ್ ಪೂಜಾರಿಯವರೊಂದಿಗೆ ರಾತ್ರಿ ಹನೇಹಳ್ಳಿ ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿ ಇರುವ ರಶ್ಮಿ ಬಾರ್‌ ಆ್ಯಂಡ್ ರೆಸ್ಟೊರೆಂಟ್ ನಲ್ಲಿ ಮದ್ಯಪಾನ ಮಾಡಿ, ರಾತ್ರಿ ಸುಮಾರು 11.00 ಗಂಟೆಗೆ ಬಾರ್‌ ನಿಂದ ಹೊರಗೆ ಬರುವಾಗ ಬಾರ್‌ನ ಆವರಣದಲ್ಲಿ ಅವರ ಪರಿಚಯದ 1 ನೇ ಆರೋಪಿ ರವಿ ಗಾಣಿಗ ಹಾಗೂ 2 ನೇ ಆರೋಪಿ ವಿಮಲ ಪೂಜಾರಿ ಎಂಬವರು ಫಿರ್ಯಾದಿದಾರರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವರನ್ನು ಉದ್ದೇಶಿಸಿ, ಕಳೆದ ಬಾರಿ ನನ್ನ ತಮ್ಮ ರೂಪೇಶ್‌ ನಿಗೆ ರಗಳೆ ಮಾಡಿದ್ದು ನೀನೇ ಅಲ್ಲವೋ ಬೈದು ಕೈಯಿಂದ ಫಿರ್ಯಾದಿದಾರರ ಮುಖಕ್ಕೆ ಹೊಡೆದು ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದಿರುತ್ತಾರೆ. ಆ ಸಮಯ ಅವರ ಸ್ನೇಹಿತ ಗಲಾಟೆಯನ್ನು ಬಿಡಿಸಿದ್ದು, ಅಲ್ಲಿಂದ ಆರೋಪಿಗಳು ಹೊರ ಹೋಗುವಾಗ ನಿನ್ನನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಫಿರ್ಯಾದಿದಾರರಿಗೆ ಆದ ಹಲ್ಲೆಯಿಂದ ಅವರ ಮುಖದ ಬಳಿ ತರಚಿದ ಗಾಯ, ಬೆನ್ನಿನ ಹಿಂಭಾಗ ಗಿರಿದ ರಕ್ತಗಾಯ, ಸೊಂಟದ ಬಳಿ ಗುದ್ದಿನ ಒಳನೋವು ಹಾಗೂ ಮೈ ಕೈನೋವು ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2023 : ಕಲಂ 341, 323, 504, 506 ಜೊತೆಗೆ 34  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಕೋಟ: ದಿನಾಂಕ 01/04/2023 ರಂದು ಬೆಳಿಗ್ಗೆ 01:00 ಗಂಟೆಗೆ ಮಧು ಬಿ ಇ ಪಿ.ಎಸ್.ಐ ಕೋಟ ಠಾಣೆ ಇವರು ಕೋಟತಟ್ಟು ಗ್ರಾಮದ  ಪಡುಕೆರೆ ಸಮುದ್ರ ತೀರದ ಕಡೆಯಲ್ಲಿ ರೌಂಡ್ಸ್‌‌  ಕರ್ತವ್ಯದಲ್ಲಿದಾಗ ಪಡುಕೆರೆಯ ಸಮುದ್ರದ ತೀರದ ಹತ್ತಿರದಲ್ಲಿ ಆರೋಪಿ ವಿಕಾಸ್  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಆರೋಪಿ  ವಶದಿಂದ  POWER COOL  ಎಂದು ಬರೆದಿರುವ   ಮಧ್ಯ ತುಂಬಿರುವ 30 ML ನಷ್ಟು ಮದ್ಯ ಇರುವ  650 ML ಬಾಟಲಿ-1 , POWER COOL  ಎಂದು ಬರೆದಿರುವ   ಮಧ್ಯ ತುಂಬಿರುವ 650 ML ಬಾಟಲಿ-1   ಹಾಗೂ ಗ್ರೇ ಬಣ್ಣದ ನಂ. KA19ME7271 ನೇ ಮಾರುತಿ ರಿಟ್ಜ್ ಕಾರನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾದೀನ ಪಡಿಸಿಕೊಂಡ ಸ್ವತ್ತುಗಳಾದ ಮದ್ಯದ ಅಂದಾಜು ಮೌಲ್ಯ 140/- ಹಾಗೂ ಕಾರಿನ ಅಂದಾಜು ಮೌಲ್ಯ 5,00,000/- ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023  ಕಲಂ: 15(A) KE ACT ನಂತೆ  ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿ ಶ್ರೀಮತಿ ವನಜ ಇವರ ಗಂಡ ರಮೇಶ ಪೂಜಾರಿ (ಪ್ರಾಯ 41 ವರ್ಷ) ಎಂಬುವವರು ಅಕ್ಕನ ಮನೆಯಾದ ಕೋಟತಟ್ಟು ಗ್ರಾಮ ಕೋಟಿಮನೆ ಎಂಬಲ್ಲಿ ವಾಸವಾಗಿದ್ದು ನಿನ್ನೆ ದಿನ ಬೆಳಿಗ್ಗೆ ಮೃತರು ವಿಪರೀತ ಶರಾಬು ಕುಡಿದು ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಸಂಜೆ ಆದರೂ ಬಾಗಿಲು ತೆಗೆಯದ ಕಾರಣ ಮನೆಯವರು ಹೋಗಿ ನೋಡಿದಾಗ ಅವರು ನೇಣು ಹಾಕಿಕೊಂಡಿರುವುದು ತಿಳಿದುಬಂದಿದ್ದು ಕೂಡಲೇ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-04-2023 09:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080