ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 30/03/2022 ರಂದು 17:15 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ನಿಂದ ಸ್ವಲ್ಪ ಮುಂದಕ್ಕೆ ಪಡುಬಿದ್ರೆ –ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ KA-20-EK-0765 ನೇ ನಂಬ್ರದ ಮೋಟಾರು ಸೈಕಲ್  ಸವಾರ ತನ್ನ ಮೋಟಾರು ಸೈಕಲನ್ನು ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಯಾವುದೋ ವಾಹನದ ಚಾಲಕನು ಆತನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು ಸಂದೇಶ ನಾಯಕ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಂದೇಶ್ ನಾಯಕ್ ರವರಿಗೆ ಗಾಯವಾಗಿದ್ದು, ಗಾಯಾಳು ಮಣಿಪಾಲ ಕೆ.ಎಂ.ಸಿ. ಅಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು,  ಅಪಘಾತವೆಸಗಿದ ವಾಹನದ ಚಾಲಕನು ಗಾಯಾಳುವನ್ನು ಉಪಚರಿಸದೆ ಮತ್ತು ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ: 279,337 ಐಪಿಸಿ ಮತ್ತು 134(ಎ)(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಯು. ನರಸಿಂಹ  ಪೈ (61), ತಂದೆ:ದಿ. ಯು.ಸದಾನಂದ ಪೈ, ವಾಸ: 13-1-47A “ಸದಾನಂದ” LIC ಹಿಂಬದಿ ಅಜ್ಜರಕಾಡು, ಮೂಡನಿಡಂಬೂರು ಗ್ರಾಮ, ಉಡುಪಿ ತಾಲೂಕು ಇವರ ಮಾಲಕತ್ವದ ಸುಜುಕಿ ಎಕ್ಸಿಸ್‌125  ಸ್ಕೂಟರ್ ನಂಬ್ರ KA-20-EE-1440  ನೇದನ್ನು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಎಲ್‌ಐಸಿ ಕಛೇರಿಯ ಹಿಂಬದಿ ಪಿರ್ಯಾದುದಾರರ ಮನೆಯ ಹಿಂಬದಿ ನಿಲ್ಲಿಸಿದ್ದು, ದಿನಾಂಕ 30/03/2022  ರಂದು  22:30 ಗಂಟೆಯಿಂದ ದಿನಾಂಕ 31/03/2022 ರಂದು ಬೆಳಿಗ್ಗೆ 06:30 ಗಂಟೆಯ ನಡುವಿನ ಸಮಯದಲ್ಲಿ ಮನೆಯ ಗೇಟಿನ ಬೀಗವನ್ನು ಯಾರೋ ಕಳ್ಳರು ಮುರಿದು ಸ್ಕೂಟರ್‌ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್ ನ  ಮೌಲ್ಯ ರೂಪಾಯಿ 30,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಪಾಂಡುರಂಗ ಅಧಿಕಾರಿ (85), ತಂದೆ: ದಿ. ಸುಬ್ರಾಯ ಅಧಿಕಾರಿ, ವಿಳಾಸ: ಮನೆ ನಂಬ್ರ: 13-1-46, ಎಲ್‌.ಐ.ಸಿ ಕಛೇರಿ ಹಿಂಭಾಗ, ಕೋಟೆ ನಾರಾಯಣರಾವ್‌ ಕಂಪೌಂಡ್‌, ಅಜ್ಜರಕಾಡು, ಮೂಡನಿಡಂಬೂರು ಗ್ರಾಮ, ಉಡುಪಿ  ತಾಲೂಕು ಇವರು ದಿನಾಂಕ 14/03/2022 ರಂದು ಬೆಂಗಳೂರಿನಲ್ಲಿರುವ ಮಗನ ಮನೆಗೆ ಹೋಗಿರುತ್ತಾರೆ. ದಿನಾಂಕ 14/03/2022 ರಿಂದ ದಿನಾಂಕ 31/03/2022 ರಂದು ಬೆಳಿಗ್ಗೆ 06:30 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಎದುರಿನ ಬಾಗಿಲಿನ ಒಂದು ತುಂಡನ್ನು ಒಡೆದು, ಒಳಪ್ರವೇಶಿಸಿ, ಮನೆಯಲ್ಲಿ ಹುಡುಕಾಡಿ ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: 454, 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಅಭಿಲಾಷ್ ಮೇಸ್ತ (22), ತಂದೆ: ರಘುನಾಥ ಮೇಸ್ತ, ವಾಸ: ಗುಜ್ಜಾಡಿ ಬಸ್ ನಿಲ್ದಾಣದ ಬಳಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರ  ತಂದೆ ರಘುನಾಥ ಮೇಸ್ತ (60) ರವರು ದಿನಾಂಕ 30/03/2022 ರಂದು ರಾತ್ರಿ ಊಟ ಮಾಡಿ ಮಲಗಿದ್ದವರು ರಾತ್ರಿ 11:00 ಗಂಟೆಗೆ ತನ್ನ ಬೈಕ್ ನಲ್ಲಿ ಮನೆಯವರಿಗೆ ಹೇಳದೇ ಹೊರಗೆ ಹೋಗಿರುತ್ತಾರೆ. ರಾತ್ರಿ 11:30 ಗಂಟೆಗೆ ಪಿರ್ಯಾದಿದಾರರ ಪರಿಚಯದ ಮೀನುಗಾರರಾದ ದಿನೇಶ್ ರವರು ಕರೆ ಮಾಡಿ ತಾನು ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಅರಾಟೆ ಸೇತುವೆ ಬಳಿ ಸೌಪರ್ಣಿಕಾ ನದಿಯಲ್ಲಿ ಮೀನು ಹಿಡಿಯುತ್ತಿರುವಾಗ ರಘುರಾಮ ಮೇಸ್ತರವರು ಬೈಕ್ ನಲ್ಲಿ ಬಂದು ಅರಾಟೆ ಸೇತುವೆ ಮೇಲೆ ನಿಲ್ಲಿಸಿ ಸೇತುವೆ ಮೇಲಿಂದ ಕೆಳಗೆ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ತನ್ನ ಅಣ್ಣ ಹರೀಶ್ ಮೇಸ್ತ  ಹಾಗೂ ಇತರರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ರಘುರಾಮ ಮೇಸ್ತರವರು ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ.  ರಘುರಾಮ ಮೇಸ್ತರವರು ಹಲವು ಸಮಯಗಳಿಂದ ಅಸ್ತಮ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದರೂ ಗುಣವಾಗದೇ ಇದ್ದು  ಮಾನಸಿಕವಾಗಿ ನೊಂದು  ಅದೇ ಕಾರಣದಿಂದ ಅರಾಟೆ ಸೇತುವೆಯ ಕೆಳಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 07/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿದಾರರಾದ ಸುರೇಶ್ ಆಚಾರ್ ಪ್ರಾಯ (30), ತಂದೆ: ಗಣಪತಿ ಆಚಾರ್, ವಾಸ: ಗುಡಿಕೇರಿ ಉಳ್ಳೂರು 74  ಕುಂದಾಪುರ ತಾಲೂಕು ಇವರ ಅಳಿಯ ಸುಮಂತ್ (18) ಹಾಗೂ ಅವನ ಸ್ನೇಹಿತ  ಗಣೇಶ(18) ನೊಂದಿಗೆ ದಿನಾಂಕ  31/03/2022 ರಂದು 16:00 ಗಂಟೆಗೆ ಮಚ್ಚಟ್ಟು ಗ್ರಾಮದ ಕಳಿನಜೆಡ್ಡು  ಸಾಗುವಾನಿ ಕೂಫ್ ಎಂಬಲ್ಲಿಗೆ  ವಾರಾಹಿ ನದಿಯಲ್ಲಿ ಸ್ನಾನ ಮಾಡಲು ಬಂದಿದ್ದು ಸುಮಂತ ಹಾಗೂ ಗಣೇಶ್   ಸ್ನಾನಕ್ಕೆಂದು ನೀರಿಗೆ ಇಳಿದಾಗ ಆಯತಪ್ಪಿ ಬಿದ್ದು ನೀರಿನ ಸುಳಿಗೆ ಸಿಕ್ಕಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ  ಸರೋಜಾ ದಾಸ್ (40), ಗಂಡ: ಹೆರಿಯ ದಾಸ್ , ವಾಸ:  ತೊಂಬಟ್ಟು  ಮೂಡಕಂಪ    ಹಂಚಿಕಟ್ಟೆ  ಅಂಚೆ  ಮಚ್ಚೊಟ್ಟು ಗ್ರಾಮ  ಕುಂದಾಫುರ  ತಾಲೂಕು ಇವರು 2017  ರಲ್ಲಿ  ಕುಂದಾಪುರ  ತಾಲೂಕಿನ  ಶಂಕರನಾರಾಯಣ ಗ್ರಾಮದ  ಶಂಕರನಾರಾಯಣ  ಬಸ್ಸು ನಿಲ್ದಾಣದ  ಬಳಿ  ಇರುವ  ಶೈಲಜಾ  ಶೇಟ್  ಇವರಿಗೆ ಸೇರಿದ  ಅಂಗಡಿ  ಕಟ್ಟಡದಲ್ಲಿ  ಟೈಲರಿಂಗ್ ಅಂಗಡಿ   ಇಟ್ಟುಕೊಂಡು  ವ್ಯವಹಾರ  ಮಾಡಿಕೊಂಡಿರುತ್ತಾರೆ,  ಆ ಬಳಿಕ  ಅಂಗಡಿ  ಬಾಗಿಲು  ತೆಗೆಯಲು   ಬಿಟ್ಟಿರುವುದಿಲ್ಲ   ದಿನಾಂಕ  28/03/2022  ರಂದು  ಪಿರ್ಯಾದಿದಾರರು ಅಂಗಡಿಯ  ಬಳಿ ಹೋದಾಗ ಪಿರ್ಯಾದಿದಾರರು  ಅಂಗಡಿಗೆ  ಈ  ಹಿಂದೆ   ಹಾಕಿದ  ಬೀಗವನ್ನು  ಮುರಿದು ಹೊಸ  ಬೀಗ   ಹಾಕಿದ್ದು, ಆಗ  ಅದನ್ನು ವಿಚಾರಿಸಿದಕ್ಕೆ  ಆರೋಪಿಗಳಾದ 1)ಶೈಲಜಾ  ಶೇಟ್, 2)  ಸಚಿನ್ ಶೇಟ್, 3) ಸಚಿನ್ ಶೇಟ್ ರವರ ಹೆಂಡತಿ ಇವರು  ಸೇರಿ ಪಿರ್ಯಾದಿದಾರರನ್ನು  ಹೊರಗೆ  ಹಾಕಿ  ಮರದ  ಕೋಲಿನಿಂದ ಹಲ್ಲೆ ಮಾಡಿ  ಅವಾಚ್ಯ  ಶಬ್ದದಿಂದ  ಬೈದಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2022  ಕಲಂ: 324, 504 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 01-04-2022 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080