ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 31/3/2022 ರಂದು ಸಂಜೆ ಪಿರ್ಯಾದಿದಾರರಾದ ಉಮೇಶ್  ಪೂಜಾರಿ (49), ತಂದೆ: ಕೊಗ್ಗು ಪೂಜಾರಿ, ವಾಸ: ಕೀಳಿಂಜೆ, ಗುಡ್ಡೆಮನೆ, ಹಾವಂಜೆ ಗ್ರಾಮ, ಬ್ರಹ್ಮಾವರ ಇವರು ಹಾವಂಜೆ ಗ್ರಾಮದ ಕೀಳಿಂಜೆ ಗಾಳಿಮರ ಎಂಬಲ್ಲಿರುವ ನವೀನ್ ಸ್ಟೋರ್ಸ್ ನಲ್ಲಿ ಮನೆಯ ಸಾಮಾನುಗಳನ್ನು ಖರೀದಿ ಮಾಡಿ ವಾಪಾಸ್ಸು ಮನೆಗೆ ಹೊರಡುವಷ್ಟರಲ್ಲಿ ಅಂದರೆ ಸಂಜೆ 4:30 ಗಂಟೆ ಸುಮಾರಿಗೆ ಅಂಗಡಿಯ ಎದುರು ಪೆರ್ಡೂರು – ಕೆಜಿ ರೋಡ್‌ ರಸ್ತೆಯಲ್ಲಿ ಪೆರ್ಡೂರು ಕಡೆಯಿಂದ ಆರೋಪಿಯು ಅವರ KA-20 D-4562 ನೇ ಬೊಲೆರೋ ಮ್ಯಾಕ್ಸಿ ಟ್ರಕ್ ಗೂಡ್ಸ್ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆಜಿ ರೋಡ್ ಕಡೆಯಿಂದ ಪೆರ್ಡೂರು ಕಡೆಗೆ ಸತ್ಯವತಿ ಎಂಬವರು ತನ್ನ KA-20 EX-1426 ನೇ TVS SCOOTY ZEST ಸ್ಕೂಟರ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಬಲ ಬದಿಗೆ ಹೋಗಲು ಇಂಡಿಕೇಟರ್ ಅನ್ನು ಹಾಕಿ ಸ್ಕೂಟರ್‌‌ನ್ನು ನಿಧಾನ ಮಾಡಿದಾಗ ಆರೋಪಿಯ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುತ್ತದೆ. ಈ ಅಪಘಾತದ ಪರಿಣಾಮ ಸತ್ಯವತಿ ರವರು ಸ್ಕೂಟರ್‌ ನಿಂದ ಎಸೆಯಲ್ಪಟ್ಟು ರಸ್ತೆಯ ಮೇಲೆ ಬಿದ್ದು ಅವರ ಎಡಕಾಲು ಪಾದಕ್ಕೆ ತರಚಿದ ಹಾಗೂ ಸೀಳು ಗಾಯ, ತಲೆಗೆ, ಮುಖಕ್ಕೆ ಗಾಯ ಹಾಗೂ ಬಲ ಸೊಂಟಕ್ಕೆ ತೀವ್ರ ಒಳ ಜಖಂ ಗಾಯ ಆಗಿರುತ್ತದೆ. ಗಾಯಗೊಂಡ ಸತ್ಯವತಿ ರವರನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 54/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಉದಯ ಗಾಣಿಗ (78) ತಂದೆ ಅನಂತ ಗಾಣಿಗ ವಾಸ: ಕುಸುಮಾ” ಗೆಂಡೆಕೆರೆ ಸಾಲಿಗ್ರಾಮ ಪೋಸ್ಟ್‌ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ಇವರ ತಂದೆ ಅನಂತ ಗಾಣಿಗ (78) ರವರಿಗೆ ಬಹಳ ಸಮಯದಿಂದ ಕೆಮ್ಮ ಇದ್ದು, ಅದು ಸುಮಾರು 1 ½ ತಿಂಗಳ ಹಿಂದೆ ಟಿ.ಬಿ. ಕಾಯಿಲೆ ಎಂದು ತಿಳಿದು ಬಂದಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಮತ್ತು ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆ ಮತ್ತು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೂ ಚಿಕಿತ್ಸೆ ಮಾಡಿಸುತ್ತಿದ್ದು, ತಂದೆಯವರು ಈ ವಿಚಾರವಾಗಿ ಬಹಳ ನೊಂದುಕೊಂಡಿದ್ದು, ಎಂದಿನಂತೆ ದಿನಾಂಕ 31/03/2022 ರಂದು ರಾತ್ರಿ 9:00 ಗಂಟೆಯ ಸಮಯಕ್ಕೆ ಊಟ ಮುಗಿಸಿ ಮಲಗಿದ್ದವರು ಟಿ.ಬಿ. ಕಾಯಿಲೆ ಮತ್ತು ವಯೋ ಸಹಜ ಕಾಯಿಲೆಯಿಂದ ಜೀವನದಲ್ಲಿ ಮನನೊಂದು ದಿನಾಂಕ 31/03/2022 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ 01/04/2022 ರಂದು ಬೆಳಿಗ್ಗೆ 05:30 ಗಂಟೆಯ ಮದ್ಯಾವಧಿಯಲ್ಲಿ ಅಣ್ಣನ ಮನೆಯ ಬಾವಿಯ ಅಡ್ಡ ದಿಂಡಿನ ಕಬ್ಬಿಣದ ರಾಡಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಮೃತ ಪಟ್ಟಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಕಾರಣ ಅಥವಾ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 11/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ದೇವಿಪ್ರಸಾದ (55) ತಂದೆ: ರಾಮಚಂದ್ರ ಭಟ್ ವಾಸ: ಪೊರ್ಣಿಮಾ ಹೌಸ್ 3 rd Main 2nd Cross ವಿ.ಪಿ ನಗರ ಕುನಜಿಬೆತತು ಪೊಸ್ಟ್ ಶಿವಳ್ಳಿ ಗ್ರಾಮ ಉಡುಪಿ ಇವರ ತಂದೆ ದಿನಾಂಕ 31/04/2022 ರಂದು ರಾತ್ರಿ ಊಟಮಾಡಿ ನೆಲ ಅಂತಸ್ತಿನಲ್ಲಿ ಮಲಗಿಕೊಂಡಿದ್ದರು, ರಾತ್ರಿ 02:00 ಗಂಟೆಗೆ ದೇವಿಪ್ರಸಾದ ಇವರ ತಾಯಿ ಎದ್ದು ನೋಡಿದಾಗ ಗಂಡನಾದ ರಾಮಚಂದ್ರ ಭಟ್ ಕಾಣದೆ ಇದ್ದು ಹುಡಕಿ ನೋಡಿದಾಗ ಮನೆಯ ಅಡುಗೆ ಕೋಣೆಯ ಹಿಂದೆ ಇರುವ ಸೀಟನ ಮಾಡಿನ ಕಬ್ಬಿಣದ ಟರ್ಸ ಗೆ ಲುಂಗಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡದ್ದನ್ನು ಕಂಡು ಕೂಡಲೇ ದೇವಿಪ್ರಸಾದ ರವರು ಬಾಗಿಲು ಮುರಿದು ಒಳಗೆ ಪ್ರವೇಶಿಸಿ ತಂದೆಯವರು ಬದುಕುವ ಉದ್ದೇಶದಿಂದ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ರಾಮಚಂದ್ರ ಭಟ್ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ,  ಮನೆಯ ಡೈನಿಂಗ್ ಟೇಬಲ್ ಮೇಲೆ ಒಂದು ಚೀಟಿ ದೊರಕಿದ್ದು ದೇವಿಪ್ರಸಾದ ರವರು ನೋಡಿದಾಗ ಅದರಲ್ಲಿ “ ನಾನು ಅನಾರೋಗ್ಯದಿಂದ ಜೀವನದಲ್ಲಿ ಬೇಸರಗೊಂಡು ವೈರಾಗ್ಯ ತಾಳಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ ಇದಕ್ಕೆ ಬೇರೆ ಯಾರು ಕಾರಣರಲ್ಲ ಆರಕ್ಷಕ ಅಧಿಕಾರಿಗಳಲ್ಲಿ ವಿನಂತಿ ದಯಮಾಡಿ ಕೇಸು ಬುಕ್ ಮಾಡಿ ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡಿ” ಎಂದು ಬರೆದು ಸಹಿ ಮಾಡಿದ ನಮೂದಿರುತ್ತದೆ, ದೇವಿಪ್ರಸಾದ ಇವರ ತಂದೆಯಾದ ರಾಮಚಂದ್ರ ಭಟ್ ರವರು ಆರೋಗ್ಯ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು   ದಿನಾಂಕ 31/03/2022 ರಾತ್ರಿ 10:00 ಗಂಟೆ ಯಿಂದ ದಿನಾಂಕ 01/04/2022 ಬೆಳಗಿನ ಜಾವ 02:00 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಅಡುಗೆಕೋಣೆಯ ಮಾಡಿನ ಕಬ್ಬಣದ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ಕಟ್ಟಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 11/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀಮತಿ ಶಾರಾದ ಬೆಳ್ವಖಂಡಿ (67) ಗಂಡ: ಗೋಪಾಲ ವಾಸ: ಕೋಡಿ ಮನೆ, 41 ನೇ ಶಿರೂರು ಗ್ರಾಮ ಉಡುಪಿ ಇವರ ಗಂಡ: ಗೋಪಾಲ (76) ರವರು ಸುಮಾರು 4 ವರ್ಷಗಳಿಂದ ಫೀಡ್ಸ್ ಕಾಯಿಲೆ ಹಾಗೂ 1 ವರ್ಷದಿಂದ ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದು  ಈ ಬಗ್ಗೆ ಕೆಎಂಸಿ ಅಸ್ಪತ್ರೆಯಲ್ಲಿ  ಶಸ್ತ್ರ ಚಿಕಿತ್ಸೆ ಮಾಡಿದ್ದು  ಇದೇವ ವಿಚಾರದಲ್ಲಿ ಗೋಪಾಲರವರು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಡೆಗೊಂಡು ದಿನಾಂಕ 01/04/2022 ರಂದು  ತನ್ನ ವಾಸದ ಮನೆಯ ಎದುರು ಇರುವ ರಬ್ಬರ್ ಮರಕ್ಕೆ ಬೆಳಿಗ್ಗೆ 6:45 ಗಂಟೆಯಿಂದ 7:15 ಗಂಟೆಯ ಮಧ್ಯಾವದಿಯಲ್ಲಿ ಲುಂಗಿ ಮತ್ತು ಬಯಿರಾಸ್‌ನಿಂದ  ನೇಣುಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 13/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ವಿಷ್ಣುಮೂರ್ತಿ ಮಯ್ಯ (59) ತಂದೆ: ದಿ. ವೆಂಕಟರಮಣ ಮಯ್ಯ, ವಾಸ: ಆತಿಥ್ಯ ಅಡಿಗಾಸ್ ಗಾರ್ಡ್ನ್, ಕದ್ರಿ ದೇವಸ್ಥಾನದ ಹಿಂಭಾಗ, ಕದ್ರಿ, ಮಂಗಳೂರು, ಇವರು ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದು, ದಿನಾಂಕ 30/03/2022 ರಂದು ಬೆಳಗ್ಗೆ 11:52 ಗಂಟೆಗೆ ತಮ್ಮ ಕೊಠಡಿಯಲ್ಲಿ ಕಛೇರಿ ಸಿಬ್ಬಂದಿಯವರಾದ ವಸಂತ, ಕುಮಾರಿ ಶಾಲಿನಿ ಇವರೊಂದಿಗೆ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಇವರ ಮೊಬೈಲ್ ನಂಬ್ರಕ್ಕೆ ಓರ್ವ ಹೆಂಗಸು ಕರೆ ಮಾಡಿ ತಾನು ಪಿ.ಯು. ಮಂಡಳಿಯ ಪರೀಕ್ಷಾ ವಿಭಾಗದಿಂದ ಕರೆ ಮಾಡುತ್ತಿದ್ದು, ದಿನಾಂಕ 31/03/2022 ರಂದು ನಡೆಯುವ ಬಯೋಲಜಿ ಪ್ರಶ್ನೆ ಪತ್ರಿಕೆ ಬಯಲಾಗಿದೆ ಉಳಿದ ಇಂಗ್ಲೀಷ್, ವಿಜ್ಞಾನ ವಿಭಾಗದ ಪ್ರಶ್ನೆ ಪತ್ರಿಕೆ ಕೂಡಾ ಬಯಲಾಗಿದೆ, ನಿಮ್ಮಲ್ಲಿ ಇರಿಸಲಾದ ಪ್ರಶ್ನೆ ಪತ್ರಿಕೆಗಳನ್ನು ಕ್ರಾಸ್ ಚಕ್ ಮಾಡುವ ಬಗ್ಗೆ ಈ ನಂಬರಿನಲ್ಲಿ ಇರುವ Whatsapp ಗೆ ಕಳುಹಿಸಿ ಎಂದು ತಿಳಿಸಿದ್ದು, ಕರೆ ಮಾಡಿದ ವ್ಯಕ್ತಿಯ ಹೆಸರು ವಿಚಾರಿಸುವಾಗ ತನ್ನ ಹೆಸರನ್ನು ಹೇಳದೆ ಪೋನ ಕರೆಯನ್ನು ಕಟ್ ಮಾಡಿದ್ದು, ಯಾರೋ ಮಹಿಳೆಯು ವಿಷ್ಣುಮೂರ್ತಿ ಮಯ್ಯ ರವರ ಮೊಬೈಲಿಗೆ ತಾನು ಪಿ.ಯು. ಮಂಡಳಿಯಿಂದ ಕರೆ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಹುಸಿ ಕರೆ ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 40/2022 ಕಲಂ: 170 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-04-2022 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080