ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಲಾರೆನ್ಸ್ ಸಲ್ಡಾನ (60),  ತಂದೆ: ಲಿಯೋ ಸಲ್ಡಾನ್,  ವಾಸ: ಕರಿಕಲ್ ಕಟ್ಟೆ ಮಣೂರು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 31/03/2021 ತನ್ನ ಮನೆಯಿಂದ ಪರಿಚಯದ  ರಾಘವೇಂದ್ರ ದೇವಾಡಿಗರವರ  ಮನೆಗೆ ನಡೆದುಕೊಂಡು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ  ಪೂರ್ವ ಪಥದ  ರಸ್ತೆಯ ತೀರಾ ಬದಿಯಲ್ಲಿ ಕೋಟ ಕಡೆಗೆ ಹೋಗುತ್ತಿರುವಾಗ 12:00 ಗಂಟೆಗೆ ಕೊಮೆ  ಕ್ರಾಸ್ ಮಣೂರು ಗ್ರಾಮ ಎಂಬಲ್ಲಿ ಹಿಂದಿನಿಂದ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಸ್ಕೂಟಿ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ತಲೆ ಕೆಳಗಾಗಿ ಬಿದ್ದು ತೀವ್ರ ತರಹದ ರಕ್ತಗಾಯ, ಎಡಕಾಲಿನ ಗಂಟಿನ ಕೆಳಗೆ ರಕ್ತಗಾಯ ಮತ್ತು ಎರಡೂ ಕೈಗೆ, ಮುಖಕ್ಕೆ, ಮೂಗಿಗೆ  ತರಚಿದ  ರಕ್ತ ಗಾಯವಾಗಿರುತ್ತದೆ. ದ್ವಿಚಕ್ತ ವಾಹನದ ನಂಬ್ರ:KA-20-EV-1865 ಆಗಿದ್ದು. ಸವಾರ ಯಲ್ಲಪ್ಪ ರವರಿಗೂ ಸಣ್ಣಪುಟ್ಟ  ಗಾಯವಾಗಿರುತ್ತದೆ. ಸಹಸವಾರ ರಾಜೀವ ಎಂಬುವವರಿಗೂ ತರಚಿದ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಹಾಗೂ  ಗಾಯಗೊಂಡ ಯಲ್ಲಪ್ಪ, ರಾಜೀವ ರವರನ್ನುಉಪಚರಿಸಿ ಚಿಕಿತ್ಸೆ ಬಗ್ಗೆ ಕುಂದಾಪುರ  ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಪರೀಕ್ಷಿಸಿದ  ವೈದ್ಯರು ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಆನಂದ ಗಾಣಿಗ (55), ತಾಯಿ: ಪದ್ದು ಯಾನೆ ಪದ್ಮಾವತಿ, ವಾಸ: ಚಿತ್ತೇರಿ ಮಕ್ಕಿ, ತಲ್ಲೂರು ಗ್ರಾಮ, ಕುಂದಾಪುರ ತಾಲೂಕು ಇವರು ತಲ್ಲೂರು ಗ್ರಾಮದ ಸರ್ವೇ ನಂ 135/3 ರಲ್ಲಿ 0.19 ಎಕ್ರೆ ಸ್ಥಳ ಹೊಂದಿದ್ದು, ಜಮೀನಿಗೆ ಕಂಪೌಂಡ್ ವಾಲ್ ಹಾಕಿ ಕೃಷಿ ಕೆಲಸ ಮಾಡುತ್ತಿರುವುದಾಗಿದೆ. ಹೀಗಿರುತ್ತಾ ದಿನಾಂಕ 29/03/2021ರಂದು ಬೆಳಗ್ಗೆ 06:30 ಗಂಟೆಗೆ ಪಿರ್ಯಾದಿದಾರರು ಅವರ ಜಾಗವನ್ನು ಪರಿಶೀಲಿಸಲಾಗಿ ಅವರ ಜಾಗದ ಶಿಲೆಕಲ್ಲಿನ ಆವರಣ ಗೋಡೆಯನ್ನು ಒಡೆದುಹಾಕಿ ಪಾಯಿಖಾನೆ ಗುಂಡಿಯನ್ನು ಒಡೆದು ಜೇಸಿಬಿ ಮೂಲಕ ಮಣ್ಣು ತೆಗೆದಿರುವುದು ಕಂಡು ಬಂದಿದ್ದು, ಈ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಲಾಗಿ ಆರೋಪಿತರಾದ ತಲ್ಲೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಜುಡಿತ್ ಮೆಂಡೋನ್ಸಾರವರು ಅವರ ಮನೆಗೆ ರಸ್ತೆ ಮಾಡಲು ಸತೀಶ್ ದೇವಾಡಿಗರವರ ಜೆ.ಸಿ.ಬಿ ಮೂಲಕ ಕೃತ್ಯ ಮಾಡಿರುವುದಾಗಿ ತಿಳಿದು ಬಂದಿರುವುದಾಗಿದೆ. ಆರೋಪಿತರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬಲಾತ್ಕಾರದಿಂದ ರಸ್ತೆ ಮಾಡಿಕೊಂಡು ಹೋಗಲು ಪ್ರಯತ್ನ ಮಾಡಿ ಪಿರ್ಯಾದಿದಾರರಿಗೆ 50,000/- ರೂಪಾಯಿ ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021  ಕಲಂ:  447, 427ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಸದಾಶಿವ ಮೊಂಟ ಪೂಜಾರಿ(68),  ತಂದೆ: ಮೊಂಟ ಪೂಜಾರಿ, ವಾಸ: ಎಂ ಎನ್ ಎಸ್ ಇನಕ್ಲೈವ  ರೂಂ ನಂಬ್ರ 404 ಬೊಮ್ಮರ ಬೆಟ್ಟು ಗ್ರಾಮ ಉಡುಪಿ ತಾಲೂಕು ಇವರ ಪ್ಲಾಟಿನ ಬಿಲ್ಡಿಂಗ್ ನಲ್ಲಿ ಆರೋಪಿತರಾದ ದಿನೇಶ್ ಮೆಂಡನ್ ಮತ್ತು ಅಮಿತ್ ದಯಾನಂದ ಕುಂದರ್  ರವರು  ವಾಸವಾಗಿರುವುದಾಗಿದೆ. ಇವರುಗಳು ವಿನಾ ಕಾರಣ ಪಿರ್ಯಾದಿದಾರರ ಮೇಲೆ ಜಗಳಕ್ಕೆ ಬರುವುದು ಮಾಡುತ್ತಿದ್ದು ಪಿರ್ಯಾದಿದಾರರನ್ನು ಅವರ ಪ್ಲಾಟಿನಿಂದ ಓಡಿಸಲು ಹುನ್ನಾರ ಹಾಕುತ್ತಿರುವುದಾಗಿದೆ. ಆರೋಪಿಗಳಿಗೆ ಕಾರ್ ಪಾರ್ಕಿಂಗ್ ಇರದೇ ಇದ್ದು, ಪಿರ್ಯಾದಿದಾರರಿಗೆ ಇರುವ ಕಾರ್ ಪಾರ್ಕಿಂಗ್ ನಲ್ಲಿ ಆರೋಪಿತರುಗಳ ಎರಡೆರಡು ಕಾರು ಪಾರ್ಕಿಂಗ್ ನಿಲ್ಲಿಸಿ ಪಿರ್ಯಾದಿದಾರರಿಗೆ ತೊಂದರೆ ನೀಡುತ್ತಿರುವುದಾಗಿದೆ .ಈ ಬಗ್ಗೆ ಪಿರ್ಯಾದಿದಾರರು ಹಲವು ಬಾರಿ ವಿನಂತಿಸಿದರೂ ಅವರ ಮಾತು ಕೇಳದೆ ಉಡಾಪೆ ಮಾತು ಆಡಿರುತ್ತಾರೆ.  ಹೀಗಿರುವಾಗ ದಿನ ನಿತ್ಯ ಆರೋಪಿತರು ಪಿರ್ಯಾದಿದಾರರಿಗೆ ಬೈಯುವುದು ,ಕೈಕಾಲು ಕಡಿದು ಹಾಕುತ್ತೇನೆ ,ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ. ಅಲ್ಲದೆ  ಕರೆಂಟ್ ಇಲ್ಲದ ಸಮಯ ಪಿರ್ಯಾದಿದಾರರು ನಡೆದುಕೊಂಡು ಕೆಳಗೆ ಬರುವಾಗ ಆರೋಪಿ ದಿನೇಶ್ ಮೆಂಡನ್  ಪಿರ್ಯಾದಿದಾರರನ್ನು ಅಡ್ಡ ಹಾಕಿ ಕೆಳಗೆ ಹೋಗದಂತೆ ತಡೆ ಹಿಡಿದು ಜೀವ ಬೆದರಿಕೆ ಹಾಕಿರುವುದಾಗಿದೆ. ಅಲ್ಲದೇ ದಿನಾಂಕ 31/05/2020 ರಂದು ಪಿರ್ಯಾದಿದಾರರಿಗೆ ಕೈಗಳಿಂದ ಹಲ್ಲೆ ನಡೆಸಿದ್ದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ: 323, 504, 506  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 01-04-2021 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ