ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಅಮಾಸೆಬೈಲು: ದಿನಾಂಕ 31/03/2021 ರಂದು 17:30 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಗೋಪಾಲ ಶೆಟ್ಟಿಗಾರ್ (47) ತಂದೆ:ಮಹಾಲಿಂಗ ಶೆಟ್ಟಿಗಾರ್ ವಾಸ: ರಂಗನಕೆರೆ ಬಾರಕೂರು ಹೇರಾಡಿ ಗ್ರಾಮ ಉಡುಪಿ ಇವರು ತನ್ನ ಮೋಟಾರು ಸೈಕಲ್ಲು ನಂಬ್ರ KA-20-EC-6941 ರಲ್ಲಿ ಅಮಾಸೆಬೈಲುವಿನಿಂದ ಬೊಳ್ಮನೆ ಕಡೆಗೆ ಹೋಗುತ್ತಿರುವಾಗ ಅಮಾಸೆಬೈಲು ಗ್ರಾಮದ ಅಮಾಸೆಬೈಲು ಗರಡಿ ಬಳಿ ತಿರುವಿನಲ್ಲಿ ಅಮಾಸೆಬೈಲು- ಜಡ್ಡಿನಗದ್ದೆ ರಸ್ತೆಯಲ್ಲಿ ಎದುರುಗಡೆಯಿಂದ KA-06-D-7027 ನೇ ಈಚರ್ ವಾಹನವನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋಪಾಲ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ಲು ಸಮೇತ ರಸ್ತೆಗೆ ಬಿದ್ದು ಎಡಭುಜ ಬಲ ಕಾಲು ಬಲ ಕೈಬೆರಳಿಗೆ ರಕ್ತ ಗಾಯವುಂಟಾಗಿದ್ದು ಗೋಪಾಲ ಇವರು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯೀ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಗೋವಿಂದ ಕಾಮತ್ (63), ತಂದೆ: ದಿ. ಸುಬ್ರಾಯ ಕಾಮತ್, ವಾಸ: ಮೇಲ್ ಪೆರ್ಣೆ ಮನೆ ಕಾಜ ರಗುತ್ತು ಅಂಜಾರು ಗ್ರಾಮ ಉಡುಪಿ ತಾಲೂಕು ಇವರ ಮಗ ಶ್ರೀಕಾಂತ (35) ಇವರು ದಿನಾಂಕ 31/03/2021 ರ ಮದ್ಯಾಹ್ನ 2:00 ಗಂಟೆಯಿಂದ ದಿನಾಂಕ 01/04/2021 ರ ಬೆಳಿಗ್ಗೆ 5:45 ಗಂಟೆಯ ಮದ್ಯಾವದಿಯಲ್ಲಿ ತನ್ನ ಮನೆಯ ಕೊಟ್ಟಿಗೆಯ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಶಂಕರ್ ಭೋರ್ಕಾರ್ (40), ತಂದೆ: ಮೋಹನ್‌ ದಾಸ್‌ ಬೋರ್ಕಾರ್‌,‌ ವಾಸ: “ಧನ್ಯ”1-125ಸಿ , ಎಂಜಿಎಂ-ಡಯಾನ ರೋಡ್ , ವೀಣಾ ಇಂಟಸ್ಟ್ರೀಸ್ ಬಳಿ, 76 ಬಡಗುಬೆಟ್ಟು , ಇಂದಿರಾನಗರ ಉಡುಪಿ ಇವರ ತಂದೆ ಮೋಹನ್ ದಾಸ್ ಬೋರ್ಕಾರ್‌(73)ರವರು ದಿನಾಂಕ 29/03/2021 ರಂದು ಬೆಳಿಗ್ಗೆ 8:00 ಗಂಟೆಗೆ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು ಪರೀಕ್ಷಿಸಿದ ವೈದ್ಯರು 10:45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಸಚಿನ್, (25),ತಂದೆ: ನಾರಾಯಣ ಪೂಜಾರಿ, ವಾಸ: ಜಡ್ಡು ಮನೆ, ರಂಗನಪಲ್ಕೆ ಅಂಚೆ, ಕೌಡೂರು ಗ್ರಾಮ, ಕಾರ್ಕಳ ಇವರ ದೊಡ್ಡಪ್ಪ ಸಾಧು ಪೂಜಾರಿ (65) ಎಂಬವರು ಸಚಿನ್‌ ರವರ ಮನೆಯ ಪಕ್ಕದಲ್ಲಿ ಪ್ರತ್ಯೇಕವಾಗಿ ಒಬ್ಬಂಟಿಯಾಗಿ ವಾಸ್ತವ್ಯ ಇದ್ದವರು ದಿನಾಂಕ 01/04/2021 ರಂದು ಬೆಳಿಗ್ಗೆ 7:30 ಗಂಟೆಗೆ ತಾವು ವಾಸ್ತವ್ಯ ಇರುವ ಮನೆಯೊಳಗೆ ತೀವೃ ಅಸ್ವಸ್ಥಗೊಂಡು ನೆಲದಲ್ಲಿ ಹೊರಳಾಡುತ್ತಿದ್ದು, ಅವರ ಬಾಯಿಯಿಂದ ಯಾವುದೋ ಕೆಟ್ಟ ವಾಸನೆ ಮತ್ತು ಬಿಳಿ ಬಣ್ಣದ ನೊರೆ ಬರುತಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯರು ಸಾಧು ಪೂಜಾರಿಯವರನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-04-2021 05:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080