ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ವಿವೇಕಾನಂದ (49), ತಂದೆ: ದಿ. ವೈ ನಾಗಪ್ಪ, ವಾಸ: : 6-80ಎ 76 ಬಡಗುಬೆಟ್ಟು ಬೈಲೂರು ಉಡುಪಿ ತಾಲೂಕು ಇವರು ದಿನಾಂಕ 25/02/2023 ರಂದು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳದ ಹಳೇ ಪಾಟೀಲ್ ಟೆಕ್ಸ್ ಟೈಲ್ ಅಂಗಡಿಯ ಬಳಿ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಪಾಟೀಲ್ ಟೆಕ್ಸ್ ಟೈಲ್ ಅಂಗಡಿಯ ಬಳಿ ರಸ್ತೆಯನ್ನು ದಾಟಿ ರಸ್ತೆಯ ದಕ್ಷಿಣಬದಿ ಅಂಚಿನಲ್ಲಿರುವಾಗ ಕಾರ್ಕಳ ಕಡೆಯಿಂದ ಓರ್ವ ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್‌ ಸೈಕಲ ನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ತೀರಾ ಎಡ ಬದಿಗೆ ಚಲಾಯಿಸಿ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡ ಕಾಲಿನ ಮೋಣಗಂಟಿನಲ್ಲಿ ಮೂಳೆ ಮುರಿತ ಉಂಟಾಗಿರುತ್ತದೆ, ಅಪಘಾತ ಪಡಿಸಿದ ನಂತರ ಮೋಟಾರ್ ಸೈಕಲ್ ಸವಾರ ಅಪಘಾತ ಪಡಿಸಿದ ನಂತರ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023 ಕಲಂ: 279, 338 ಐಪಿಸಿ ಮತ್ತು 134(A)&(B) R/w 187 ಐಎಂವಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ:   ದಿನಾಂಕ 28/02/2023 ರಂದು ಪಿರ್ಯಾದಿದಾರರಾದ  ತುಕರಾಮ (42), ತಂದೆ: ರಾಜು ಪೂಜಾರಿ, ವಾಸ: ಮನೆ ನಂ 11-27, ಕಾವೇರಿ ನಿಲಯ, ಅಂಬಾಗಿಲು, ಕಕ್ಕುಂಜೆ, ಶಿವಳ್ಳಿ ಗ್ರಾಮ, ಸಂತೆಕಟ್ಟೆ ಅಂಚೆ, ಉಡುಪಿ ತಾಲೂಕು ರವರು ಅವರ ಹೆಂಡತಿ ಮನೆಯಾದ ಆರೂರು ಗ್ರಾಮದ, ಆರೂರು ಮೇಲ್ಮಠ ಎಂಬಲ್ಲಿ ಮನೆಯ ಬಳಿ ನಿಂತು ಮನೆಯ ಹತ್ತಿರದ ರಸ್ತೆಯಲ್ಲಿ ನಡೆಯುತ್ತಿದ್ದ ಕಾಂಕ್ರೀಟ್‌ ಹಾಕುವ ಕೆಲಸವನ್ನು ನೋಡುತ್ತಿದ್ದಾಗ ಬೆಳಿಗ್ಗೆ 11:30 ಗಂಟೆಯ ಸಮಯಕ್ಕೆ ಆರೋಪಿ ಸಮೀರ್‌ ಅವರ ಕಾಂಕ್ರೀಟ್ ಅನ್ಲೋಡ್‌ ಮಾಡಿದ KA16N7966 ನಂಬ್ರದ  ATAX ARGO 2000 ಕಾಂಕ್ರೀಟ್‌ ಯಂತ್ರ ಇರುವ ವಾಹನವನ್ನು ಅತೀವೇಗ ಹಾಗೂ ನಿಲರ್ಕ್ಷತನದಿಂದ ಏಕಾ ಎಕಿ ಹಿಮ್ಮುಖವಾಗಿ ಅಡ್ಜಿಲ್ಕಡೆಯಿಂದ ಆರೂರು ಕಡೆಗೆ ಚಲಾಯಿಸಿ ಸ್ವಲ್ಪ ದೂರದ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರ ಮಾವ ಶ್ಯಾಮ ಪೂಜಾರಿ (75) ರವವರಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಶ್ಯಾಮ ಪೂಜಾರಿ ರವರು ಅಲ್ಲೇ ರಸ್ತೆ ಮೇಲೆ ಬಿದ್ದು, ಅಪಘಾತವೇಸಗಿದ ವಾಹನದ ಟಯರ್ ಅವರ ಬಲಕಾಲಿನ ಮೇಲೆ ಹಾಗೂ ಬಲಕೈಯ ಮೇಲೆ ಹಾದು ಹೋಗಿ ಬಲಕಾಲಿನ ಮೂಳೆ ಮುರಿದು, ಜಜ್ಜಿ ಹೋಗಿದ್ದು ಹಾಗೂ ಬಲಕೈಯ ಮೂಳೆ ಕೂಡ ಮುರಿತ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ವಿನೇಶ್ (28), ತಂದೆ: ಜಯರಾಮ ಪೂಜಾರಿ, ವಾಸ: ಮಾರ್ಕೋಡು, ಕೊಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರ ಸೋದರ ಮಾವ ಶಂಕರ್‌ ಪೂಜಾರಿ (50)  ಇವರು   ದಿನಾಂಕ 28/02/2023 ರಂದು ಮದ್ಯಾಹ್ನ 2.00 ಗಂಟೆಗೆ ವಾಸದ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಹಾಲ್‌ ನಲ್ಲಿರುವ ಪ್ಯಾನಿಗೆ ಚೂಡಿದಾರದ ವೇಲನ್ನು ಕಟ್ಟಿ ಕುತ್ತಿಗೆಗೆ ನೇಣಿ ಹಾಕಿಕೊಂಡಿದ್ದು, ನಂತರ ಕಾಲೇಜು ಮುಗಿಸಿಕೊಂಡು ಬಂದ ಅವರ ಮಕ್ಕಳಾದ ಕುಮಾರಿ ಸಿಂಚನಾ ಮತ್ತು ಸಿಂಧೂ ರವರು ನೆರೆಕೆರೆಯವರ ಸಹಾಯದಿಂದ ಇಳಿಸಿ ಒಂದು ಆಟೋ ರಿಕ್ಷಾದಲ್ಲಿ ಕೊಟೇಶ್ವರದ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ 14:35 ಗಂಟೆಗೆ ಕರೆದುಕೊಂಡು ಬಂದಿದ್ದು,  ಅಲ್ಲಿ ಪರೀಕ್ಷೀಸಿದ ವೈಧ್ಯರು ಶಂಕರ ಪೂಜಾರಿ ಆವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅವರು ಟೈಲ್ಸ್ ಕೆಲಸ ಮಾಡಿಕೊಂಡಿದ್ದು,  ವೀಪರಿತ ಮದ್ಯಪಾನ ಮಾಡುವ ಚಟ ಹೊಂದಿದ್ದು,  ಹಣಕಾಸಿನ ಸಮಸ್ಯೆಯು ಇತ್ತು ಇದೇ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆ ಗೊಂಡು  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2023 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ವಿಜಯ ಸುಚಿತ್ರ (73) , ತಂದೆ: ಮಥ್ಥಾಯ ಸುಚಿತ್ತ, ವಾಸ: ಜನತಾ ಕಾಲೋನಿ, ಕುತ್ಪಾಡಿ ಗ್ರಾಮ, ಉಡುಪಿ ತಾಲೂಕು ಇವರ ಮಗ ರೊನಾಲ್ಡ್ ಜೆ. ಸುಚಿತ್ತ ಇವರು ಕೆನರಾ ಬ್ಯಾಂಕ್, ಉದ್ಯಾವರ ಶಾಖೆಯಲ್ಲಿ ಖಾತೆ ಹೊಂದಿದ್ದು, ದಿನಾಂಕ 28/02/2023 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಮಗ ರೊನಾಲ್ಡ್ ಜೆ. ಸುಚಿತ್ತ ರವರಿಗೆ ಕರೆ ಮಾಡಿ, ತಾನು ಬ್ಯಾಂಕ್ ಅಧಿಕಾರಿ, ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‌‌ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿ, ನಂಬಿಸಿ, ಪಿರ್ಯಾದಿದಾರ ಮಗ ರೊನಾಲ್ಡ್ ಜೆ. ಸುಚಿತ್ತ ರವರಿಂದ ಬ್ಯಾಂಕ್ ವಿವರ, ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರವನ್ನು ಪಡೆದು, ಮೇಲಿನ ಖಾತೆಯಿಂದ ಕ್ರಮವಾಗಿ ರೂಪಾಯಿ 94,000/- ಮತ್ತು ರೂಪಾಯಿ 1,00,000/- ರಂತೆ ಒಟ್ಟು ರೂಪಾಯಿ 1,94,000/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಕ್ರಮಾಂಕ 27/2023  ಕಲಂ: 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-03-2023 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080