ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ: ಸುಕೇಶ್ ಸನಿಲ್ (29)    ತಂದೆ: ಸತೀಶ್ ಸನಿಲ್ ವಾಸ: ಸುಬ್ರಹ್ಮಣ್ಯ ನಗರ, ಸರಕಾರಿ ಶಾಲೆಯ ಹತ್ತಿರ, ಪುತ್ತೂರು ಗ್ರಾಮ ಇವರು ಪುತ್ತೂರು ಶ್ರೀ ಬಬ್ಬು ಸ್ವಾಮೀ ದೈವಸ್ಥಾನದ ಬಳಿ ಅಜ್ಜ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿರುವುದಾಗಿದೆ. ದಿನಾಂಕ 01/03/2023 ರಂದು ಪಿರ್ಯಾದಿದಾರರು ಕ್ಯಾಂಟೀನ್‌ನಲ್ಲಿರುವಾಗ ಸಮಯ ಸುಮಾರು ಬೆಳಿಗ್ಗೆ 08:25 ಗಂಟೆಗೆ ತನ್ನ ಕ್ಯಾಂಟೀನು ಎದುರುಗಡೆ ಹಾದುಹೋಗಿರುವ ರಾಹೆ-66 ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ KA20HA1047 ನೇ ಮೋಟಾರ್ ಸೈಕಲ್ ಸವಾರ ಹರ್ಷಿತ್ ಎಂಬಾತನು ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಅದೇ ರಸ್ತೆಯಲ್ಲಿ ರಸ್ತೆ ದಾಟುವರೇ ರಸ್ತೆಯ ಮದ್ಯೆ ಇರುವ ಡಿವೈಡರ್ ಅಂಚಿನಲ್ಲಿದ್ದ ಮಲ್ಲಯ್ಯ (40) ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ  ಮಲ್ಲಯ್ಯ ರವರು ರಸ್ತೆಗೆ ಬಿದ್ದು, ಹಿಂಬದಿ ತಲೆಗೆ ಮತ್ತು ಎರಡೂ ಕಾಲುಗಳಿಗೆ ಮತ್ತು ಕೈಗಳಿಗೆ ಗಂಬೀರ ಸ್ವರೂಪದ ಗಾಯವಾಗಿರುತ್ತದೆ. ಅಲ್ಲದೇ ಅಫಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಹರ್ಷಿತ್ ರಸ್ತೆಗೆ ಬಿದ್ದು, ಆತನ ತಲೆಗೆ ಮತ್ತು ಕಾಲುಗಳು ರಕ್ತಗಾಯವಾಗಿರುತ್ತದೆ. ಗಾಯಾಳು ಮಲ್ಲಯ್ಯ ರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿದ್ದ ಮಲ್ಲಯ್ಯ ರವರು ಚಿಕಿತ್ಸೆಗೆ ಸ್ವಂದಿಸದೇ ಬೆಳಿಗ್ಗೆ 10:25 ಗಂಟೆಗೆ ಮೃತಪಟ್ಟಿರುವುದಾಗಿದೆ. ಅಲ್ಲದೇ ಆರೋಪಿ ಬೈಕ್ ಸವಾರ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ . ಈ ಬಗ್ಗೆ ಉಡುಪಿ ಸಂಚಾರ   ಠಾಣೆ  ಅಪರಾಧ ಕ್ರಮಾಂಕ 21/2023 ಕಲಂ: 279, 304(A) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ: .ಭಾಸ್ಕರ ಸೇರಿಗಾರ ಪ್ರಾಯ: 60 ವರ್ಷ ತಂದೆ:ಸೂರಪ್ಪ ಸೇರಿಗಾರ ವಾಸ: ಮನೆ ನಂಬ್ರ 8-72 ಎ, ಮಾತಶ್ರೀ, ಗುಂಡಿಬೈಲು ಇವರು ಕೆನರಾ ಬ್ಯಾಂಕ್, ಮಣಿಪಾಲ ಶಾಖೆಯಲ್ಲಿ ಖಾತೆ ನಂಬ್ರ 23322180004990 ನೇದನ್ನು ಹೊಂದಿದ್ದು, ದಿನಾಂಕ 01.03.2023 ರಂದು ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ 9707156864 ನೇದರಿಂದ ಪಿರ್ಯಾದಿದಾರರಿಗೆ ಕರೆ ಮಾಡಿ, ತಾನು ಬ್ಯಾಂಕ್ ಅಧಿಕಾರಿ, ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‌‌ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿ, ನಂಬಿಸಿ, ಪಿರ್ಯಾದಿದಾರರಿಂದ ಆಧಾರ್ ವಿವರ, ಬ್ಯಾಂಕ್ ವಿವರ, ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರವನ್ನು ಪಡೆದು, ಮೇಲಿನ ಖಾತೆಯಿಂದ ಕ್ರಮವಾಗಿ ರೂ. 99,000/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2023  ಕಲಂ 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಕಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 01-03-2023 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080