ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 24/02/2022 ರಂದು ಪಿರ್ಯಾದಿದಾರರಾದ ಯದುಗೋಪನ್ ಕೆ ಆರ್ (31), ತಂದೆ: ಕೆ.ಜಿ. ರಾಜು ಕುಟ್ಟಿ, ವಾಸ  ಕಾಪ್ಪಿಯಿಲ್ ಮನೆ, ಮಾಳ ಗ್ರಾಮ, ಕಾರ್ಕಳ ತಾಲೂಕು ಇವರು ಬಂಗ್ಲೆಗುಡ್ಡೆ  ಕಡೆಯಿಂದ ಪುಲ್ಕೇರಿ ಕಡೆಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ KA-20-EW-0662 ನಂಬ್ರದ ಹೋಂಡಾ ಶೈನ್ ಮೋಟಾರ್ ಸೈಕಲನ್ನು ಅದರ ಸವಾರ ಸುಂದರ ಶೆಟ್ಟಿ ಎಂಬುವವರು ನಿಖಿಲ್ ಶೆಟ್ಟಿ ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಂಗ್ಲೆಗುಡ್ಡೆ ಕಡೆಯಿಂದ ಪುಲ್ಕೇರಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ 18:15 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ಶಿವತಿಕೆರೆ ಬಳಿ ಶಿಲ್ಪಗ್ರಾಮ ಎಂಬಲ್ಲಿ ರಸ್ತೆ ಮಧ್ಯೆ ಇದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ಸವಾರ ಮತ್ತು ಸಹಸವಾರರಿಬ್ಬರೂ ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸ್ಪಂದನ ಆಸ್ಪತ್ರೆಗೆ ಪಿರ್ಯಾದಿದಾರರು ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ನಿಖಿಲ್ ಶೆಟ್ಟಿಯವರನ್ನು ಬೇರೆ  ಆಸ್ಪತ್ರೆಗೆ ಹೋಗಲು ತಿಳಿಸಿದಂತೆ ಮಂಗಳೂರು ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಪಘಾತದಿಂದ ನಿಖಿಲ್ ಶೆಟ್ಟಿಯವರಿಗೆ ಮುಖಕ್ಕೆ ಮತ್ತು ಬಲಕೈಗೆ ತೀವ್ರ ತರಹದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 28/02/2022 ರಂದು ಬೆಳಿಗ್ಗೆ 8:30 ಗಂಟೆಗೆ ಪಿರ್ಯಾದಿದಾರರಾದ ಕೃಷ್ಣ ಆಚಾರ್ಯ (65), ತಂದೆ: ವೆಂಕಟರಮಣ ಆಚಾರ್ಯ, ವಾಸ: ಅರಮನೆ ಕೊಡ್ಲು ಹಳ್ಳಿಹೊಳೆ ಗ್ರಾಮ ಬೈಂದೂರು ತಾಲೂಕು ಇವರು ಬೈಂದೂರು ತಾಲೂಕಿನ  ಹಳ್ಳಿಹೊಳೆ  ಗ್ರಾಮದ ಕಡೆಪಾಲು ಎಂಬಲ್ಲಿ KA-20-EK-5601 ನೇ ನಂಬ್ರದ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಚಕ್ರಾ ಮೈದಾನ ಕಡೆಗೆ  ಹೋಗುತ್ತಿರುವಾಗ ಆರೋಪಿ KA-20-N- 959 ನೇ ನಂಬ್ರದ ಗೂಡ್ಸ ವಾಹನವನ್ನು ಚಕ್ರಾ ಮೈದಾನ ಕಡೆಯಿಂದ ಸಿದ್ದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್‌ಗೆ  ಡಿಕ್ಕಿ  ಹೊಡೆದ ಪರಿಣಾಮ ಮೋಟಾರ್ ಸೈಕಲ್   ಸವಾರನ ಎಡ  ಭುಜದ  ಬಳಿ ಎದೆಯ ಎಡಭಾಗಕ್ಕೆ  ಮೂಳೆ ಮುರಿತದ  ಗಾಯವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022  ಕಲಂ: 279, 338 ಐಪಿಸಿ ಮತ್ತು 134(ಬಿ) ಜೊತೆಗೆ 187 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಕಿಶೋರ್ ಶೆಟ್ಟಿ (34), ತಂದೆ: ಶಂಕರ ಶೆಟ್ಟಿ, ವಾಸ: ಕಿಶೋರ್ ಆಟೋ ವರ್ಕ್ಸ್, ಕೊಲ್ಲೂರು  ಗ್ರಾಮ ಮತ್ತು  ಅಂಚೆ  ಬೈಂದೂರು   ತಾಲೂಕು ಇವರು ದಿನಾಂಕ 28/02/2022  ರಂದು ಮಧ್ಯಾಹ್ನ 13:00 ಗಂಟೆಗೆ ಕೊಲ್ಲೂರು ಗ್ರಾಮದ  ರಾಷ್ಟ್ರೀಯ ಹೆದ್ದಾರಿ  766 ಸಿ ನಲ್ಲಿ ಶುಕ್ಲ ತಿರ್ಥ ದೇವಸ್ಥಾನದ ಕಡೆಯಿಂದ  ಕೊಲ್ಲೂರು ಕಡೆಗೆ  ತನ್ನ ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾಗ ಅವರ  ಎದುರಿನಿಂದ ಕೊಲ್ಲೂರು ಕಡೆಯಿಂದ ಹಾಲ್ಕಲ್ ಕಡೆಗೆ ಒಂದು ಜೀಪ್ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ಶುಕ್ಲತೀರ್ಥ ದೇವಸ್ಥಾನದ ಬಳಿಯ ತಿರುವಿನಲ್ಲಿ ರಸ್ತೆಯ ತೀರಾ ಬಲ ಬದಿಗೆ  ಚರಂಡಿಗೆ  ಜೀಪನ್ನು ಚಲಾಯಿಸಿದ್ದು, ಪರಿಣಾಮ ಚರಂಡಿಯ  ಬದಿಯ ಮರಕ್ಕೆ  ಜೀಪ್ ಡಿಕ್ಕಿ ಹೋಡೆದಿರುತ್ತದೆ, ಕೂಡಲೇ ಅಪಘಾತ ಸ್ಥಳಕ್ಕೆ ಪಿರ್ಯಾದಿದಾರರು  ಹೋಗಿ ನೋಡಲಾಗಿ  ಜೀಪ್ ಚಾಲಕನು ಪಿರ್ಯಾದಿದಾರರ ಪರಿಚಯದ  ಸುಧೀರ್  ಭಂಡಾರಿ  ಆಗಿರುತ್ತಾರೆ. ಆತನ ಹಣೆಗೆ ಗಂಭೀರ  ಸ್ವರೂಪದ  ರಕ್ತಗಾಯ ಹಾಗೂ   ಎದೆಗೆ ಹಾಗೂ ಕೈಗಳಲ್ಲಿ  ರಕ್ತಗಾಯವಾಗಿರುತ್ತದೆ. ಅಪಘಾತಕ್ಕೆ  ಒಳಗಾದ ಜೀಪ್ ನಂಬ್ರ KA-20-A-3405 ಆಗಿರುತ್ತದೆ. ಕೂಡಲೇ  ಪಿರ್ಯಾದಿದಾರರು ಮತ್ತು  ಅಲ್ಲಿ ಸೇರಿದವರು ಒಂದು ಅಂಬ್ಯುಲೆನ್ಸ ವಾಹನದಲ್ಲಿ ಸುಧೀರ್  ಭಂಡಾರಿ ಯವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು  ಅಲ್ಲಿ ಮಧ್ಯಾಹ್ನ 02:00 ಗಂಟೆಗೆ ಪರೀಕ್ಷಿಸಿದ  ವೈದ್ಯರು ಮೃತ  ಪಟ್ಟಿರುವುದಾಗಿ  ತಿಳಿಸಿರುತ್ತಾರೆ.  ಈ ಬಗ್ಗೆ ಕೊಲ್ಲೂರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2022  ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಉಮೇಶ ಎನ್ (36), ತಂದೆ: ಕೇಶವ ನಾಯ್ಕ್ ವಾಸ: 1-58 ಶ್ರೇಯಶ್ರೀ ನಿಲಯ ಸೂಜಿ ಹಿರೇಬೆಟ್ಟುಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಅಣ್ಣ ರಮೇಶ (38) ರವರಿಗೆ 4 ವರ್ಷಗಳ ಹಿಂದೆ ಹೃದಯಘಾತವಾಗಿದ್ದು ಈ ಬಗ್ಗೆ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ 28/02/2022 ರಂದು ಬೆಳಿಗ್ಗೆ 08:00 ಗಂಟೆಗೆ ಮನೆಯ ಮುಂಭಾಗದಲ್ಲಿನ  ಗಿಡಗಳಿಂದ ಹೂ  ಕೊಯ್ಯುತ್ತಿರುವಾಗ ಹಠತ್ತಾಗಿ ಕುಸಿದು ಬಿದ್ದು ಅಸೌಖ್ಯಗೊಂಡವರನ್ನು ಕೂಡಲೆ ಪ್ರಥಮ ಚಿಕಿತ್ಸೆ ಮಾಡಿ ಅಟೋ ರಿಕ್ಷಾದಲ್ಲಿ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ರಮೇಶ ನಾಯ್ಕ ರವರು ಹೃಧಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಡ್ಯಾನಿಶ್ ಮೊಹಮ್ಮದ್ (20), ತಂದೆ:ಮೂಸ, ವಾಸ:  ವನ್ನಾನ್ ಡೇವಿಡ್ ಹಸ್, ವಿಲಿಯಾ ಪಳ್ಳಿ ಅಂಚೆ,ವಡಗರ ತಾಲೂಕು, ಕೋಮಿಕೋಡ್ ಜಿಲ್ಲೆ, ಕೇರಳ ರಾಜ್ಯ ಇವರು ತನ್ನ ಸ್ನೇಹಿತ ಮೊಹಮ್ಮದ್ ನಿಹಾಲ್ ರೊಂದಿಗೆ ಅನಂತನಗರದ ಅಜಯ ಕುಮಾರ್ ಶೆಟ್ಟಿ ಎಂಬುವವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು ಮೊಹಮ್ಮದ್ ನಿಹಾಲ್ ನಿಗೆ ಕೆಲವು ವರ್ಷಗಳಿಂದ ಅಸ್ತಮಾ ಖಾಯಿಲೆ ಇದ್ದು ಅದರ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು, ನಿಹಾಲ್ ರವರು ಅಸ್ತಮಾ ಖಾಯಿಲೆ ಕಾರಣದಿಂದ ಅಥವಾ ಇನ್ನಾವುದೋ ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ  27/02/2022 ರಂದು ಮಧ್ಯಾಹ್ನ 02:00 ಗಂಟೆಯಿಂದ  ದಿನಾಂಕ 28/02/2022  ರಂದು ಬೆಳಿಗಿನ ಜಾವ 02:00 ಗಂಟೆಯ ಮಧ್ಯಾವಧಿಯಲ್ಲಿ ವಾಸವಿದ್ದ  ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ಇಸ್ತ್ರೀ ಪೆಟ್ಟಿಗೆಯ ಕೇಬಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಪುಷ್ಪ (40), ಗಂಡ:ವೆಂಕಪ್ಪ ಪೂಜಾರಿ, ವಾಸ-“ದುರ್ಗಾಶ್ರೀ”, ಮೇಲ್ಮನೆ, ಹೊನ್ನಾಳ, ಹಾರಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರೊಂದಿಗೆ ವಾಸವಾಗಿದ್ದ ಪಿರ್ಯಾದಿದಾರರ ತಾಯಿ ಅಕ್ಕಣಿ ಪೂಜಾರ್ತಿ(70) ಇವರು ದಿನಾಂಕ 26/02/2022 ರಂದು 20:30 ಗಂಟೆಯಿಂದ ಮನೆಯಿಂದ ಕಾಣೆಯಾಗಿದ್ದು, ನೆರೆಕೆರೆಯಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ದಿನಾಂಕ 28/02/2022 ರಂದು 17:45 ಗಂಟೆಗೆ ಪಿರ್ಯಾದಿದಾರರ ಸಂಬಂಧಿ ಹೊನ್ನಾಳ ನಿವಾಸಿ ಮಾಲಿನಿ ಎಂಬುವವರು ಮನೆ ಸಮೀಪದ  ಸಂಬಂಧಿಕರಾದ ದಿ.ಅಣ್ಣಯ್ಯ ಪೂಜಾರಿ ರವರ ಮನೆಯ ಬಾವಿಯಲ್ಲಿ ನೀರನ್ನು ಸೇದುವಾಗ ಅಕ್ಕಣಿ ಪೂಜಾರ್ತಿ ರವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿರುತ್ತದೆ. ಸುಮಾರು 15 ದಿನಗಳ ಹಿಂದೆ ಮೃತರಿಗೆ ಜ್ವರ ಬಂದು ಸುಮಾರು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮನೆಗೆ ಬಂದು ಆರೈಕೆಯಲ್ಲಿದ್ದವರು, ಈ ಹಿಂದಿನಂತೆ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಲಾಗದೇ ಇರುವ ಬಗ್ಗೆ ತುಂಬಾ ನೊಂದುಕೊಂಡಿದ್ದು, ಅಲ್ಲದೇ ಪಿರ್ಯಾದಿದಾರರ ಗಂಡನ ಕಾಲಿನ ಸಮಸ್ಯೆಯ ಬಗ್ಗೆ ಕೂಡಾ ತುಂಬಾ ಚಿಂತಿತರಾಗಿದ್ದು, ಇದೇ ಕಾರಣಗಳಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2022 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಮುಮ್ತಾಜ್ (35), ಗಂಡ : ಅಬ್ದುಲ್ ಸಲಾಂ ವಾಸ : ಅಲಿಯಬ್ಬ ಕಂಪೌಂಡ, ಉಚ್ಚಿಲ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರಿಗೆ 1 ನೇ ಆರೋಪಿಯ ಪರಿಚಯವಿದ್ದು, ಪಿರ್ಯಾದಿದಾರರು 1 ನೇ ಆರೋಪಿ ಅನ್ವರ್  ಬಳಿ ಸಾಲ ಕೇಳಲು ಆತನ ಕಾಪು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಕಛೇರಿಗೆ ಭೇಟಿಯಾಗಿದ್ದು, ಆಗ ಪಿರ್ಯಾದಿದಾರರು ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಗುರುತಿನ ಚೀಟಿ, 6 ಫೊಟೋ ನೀಡಿದ್ದು, ಹಾಗೂ ಪಿರ್ಯಾದಿದಾರರಿಗೆ ಸಾಲ ಮಾಡಿಸಿಕೊಡಲು ಒಟ್ಟು ರೂಪಾಯಿ 35,000/- ಕೊಡಬೇಕಾಗಿ ತಿಳಿಸಿ, ಕೆಲವೊಂದು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದು, ನಂತರ ಅದೇ ದಿನ ರೂಪಾಯಿ 20,000/-  ಆತನಿಗೆ ಪಿರ್ಯಾದಿದಾರರು ನೀಡಿದ್ದು, ಪಿರ್ಯಾದಿದಾರರ ಬ್ಯಾಂಕ್  ಖಾತೆಯನ್ನು ಉಡುಪಿ ಉಜ್ವನ್ ಬ್ಯಾಂಕ್ ತೆರೆಸಿದ್ದು ಈ ಮೊದಲೆ ಹೇಳಿದಂತೆ ಪಿರ್ಯಾದಿದಾರರು ಆತನಿಗೆ ರೂಪಾಯಿ 15,000/- ವನ್ನು ಆತನ ಶುಲ್ಕ, ಸಾಲದ ಬಾಬ್ತು ಹಾಗೂ ದಾಖಲೆಗಳ ತಯಾರಿಕೆ ವೆಚ್ಚವೆಂದು  ನೀಡಿರುತ್ತಾರೆ. ಒಂದು ವಾರ ಆದರೂ ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ ಹಣ ಬಂದಿರುವುದಿಲ್ಲ,  ನಂತರ  ಪಿರ್ಯಾದಿದಾರರು ಆತನಿಗೆ 3 ತಿಂಗಳ ಕಾಲ ಕರೆ ಮಾಡಿ ಸಾಲದ ಹಣವನ್ನು ಕೇಳಿದ್ದು, ಒಂದಲ್ಲ ಒಂದು ಕಾರಣ ಹೇಳಿ ಮುಂದೂಡದ್ದು . ಒಂದು ದಿನ ಈ ಬಗ್ಗೆ ಉಚ್ಚಿಲದ ಬಳಿ ಸಿಕ್ಕಿದಾಗ ಸಾಲದ ಹಣ ಪಿರ್ಯಾದಿದಾರರ ಬಳಿ  ನಿನ್ನ ಚೆಕ್ ನನ್ನ ಬಳಿ ಇದೆ. ಅದು ಈಗ ಬೇರೊಬ್ಬರ ಬಳಿ ಇರುವುದಾಗಿ ತಿಳಿಸಿದ್ದು   ಅಲ್ಲದೇ  ಆ ಸಮಯ ಆತ ಹೆಚ್ಚುವರಿ ರೂಪಾಯಿ 50,000/- ನೀಡಿದಲ್ಲಿ ಮಾತ್ರ ಸಾಲ ನೀಡುವುದಾಗಿ ಹಾಗೂ ಚೆಕ್ಕುಗಳನ್ನು ಹಿಂದೆ ನೀಡುವುದಾಗಿ ತಿಳಿಸಿದ್ದು . ನಂತರ ಪಿರ್ಯಾದಿದಾರರು ಈಗಾಗಲೇ ನೀಡಿದ ರೂಪಾಯಿ 35,000/- ಹಿಂತಿರಿಗಿಸುವಂತೆ ಕೇಳಿದ್ದು, ಆತ ಚೆಕ್,  ಹಣ ನೀಡಿರುವುದಿಲ್ಲ. ಒಂದು ದಿನ ಸಂಜೆ 8:00 ಗಂಟೆಗೆ 2 ನೇ ಆರೋಪಿ  ಮಿನಾಜ್  ಹಾಗೂ 1 ನೇ ಆರೋಪಿಯ ಅಣ್ಣನ ಹೆಂಡತಿ, ಪಿರ್ಯಾದಿದಾರರ ತಾಯಿಯ  ಮನೆಯಾದ ಕೊಪ್ಪಲಂಗಡಿಗೆ ಬಂದು ಒಂದು ಬೆದರಿಕೆ ಹಾಕಿರುತ್ತದೆ. ಅಲ್ಲದೇ ಚೆಕ್‌ ಬೇಕಾದಲ್ಲಿ ರೂಪಾಯಿ 45,000/- ನೀಡಬೇಕು ಎಂದು ಬೆದರಿಕೆ ಹಾಕಿ ಪಿರ್ಯಾದಿದಾರರ ಚೆಕ್‌ನ್ನು ಹಿಡಿದು ದುರ್ಬಳಕೆ ಮಾಡಿ, ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2022 ಕಲಂ: 384, 406, 420, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 01-03-2022 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080