ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೋಟ: ಪಿರ್ಯಾದಿದಾರರಾದ ಗಂಗಾಧರ ಆಚಾರ್ಯ ಪ್ರಾಯ 56 ವರ್ಷ, ತಂದೆ: ರುದ್ರಯ್ಯ ಆಚಾರ್ಯ, ವಾಸ: ಕಲಾ ಕಿರಣ ಕಾರ್ಕಡ ಪೋಸ್ಟ ನೆಲ್ಲಿಬೆಟ್ಟು ಉಡುಪಿ ಜಿಲ್ಲೆ ಇವರು ದಿನಾಂಕ 28/02/2022 ರಂದು ಸಂಜೆ ತನ್ನ KA-20-EF -3355 ನೆ ಡಿಯೋ ಸ್ಕೂಟಿಯಲ್ಲಿ ಉಪ್ಲಾಡಿಯ ಬೆಟ್ಲಕ್ಕಿ ಎಂಬಲ್ಲಿಗೆ ಹೋಗಲು ಸಾಲಿಗ್ರಾಮದಿಂದ ಹೊರಟು ಕೋಟ ಹೈಸ್ಕೂಲ್ ಕಡೆಯಿಂದ ಸೈಬ್ರಕಟ್ಟೆ ಕಡೆಗೆ ಹೋಗುತ್ತಿರುವಾಗ ಸಂಜೆ 5:15 ಗಂಟೆಯ ಸಮಯಕ್ಕೆ ತಸ್ಮಯಿ ಅಪಾರ್ಟ ಮೆಂಟಿನಿಂದ ಸ್ವಲ್ಪ ಮುಂದಕ್ಕೆ ಬಂದಾಗ ಪಿರ್ಯಾದಿದಾರರ ಎದುರುಗಡೆಯಿಂದ ಸೈಬ್ರಕಟ್ಟೆ ಕಡೆಯಿಂದ ಕೋಟ ಹೈಸ್ಕೂಲ್ ಕಡೆಗೆ KA-20-EU-8864 ನೇದರ ಮೋಟಾರ್ ಸೈಕಲ್ ಸವಾರ ಸಚಿನ್ ಹಿಂಬದಿ ಸಹ ಸವಾರನನ್ನಾಗಿ ಮನೋಜ ಎಂಬಾತನನ್ನು ಕುಳ್ಳಿರಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದಚಲಾಯಿಸಿಕೊಂಡು ಬಂದು ತನ್ನ ಬೈಕನ್ನು ನಿಯಂತ್ರಿಸಲಾಗದೇ ರಸ್ತೆಯ ವಿರುದ್ದ ದಿಕ್ಕಿಗೆ ಬಂದು ಪಿರ್ಯಾದಿದಾರರಿಗೆ ಮುಖಾ ಮುಖಿ ಢಿಕ್ಕಿ ಹೊಡೆದನು ಪರಿಣಾಮ ಮೋಟಾರ್ ಸೈಕಲಿನಲ್ಲಿದ್ದವರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ತಲೆಗೆ ಹಾಗೂ ಕೈ ಕಾಲುಗಳಿಗೆ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ ಹೋಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕಾರ್ಕಳ : ಕಾರ್ಕಳ ತಾಲೂಕು ಈದು ಗ್ರಾಮದ ತಾರೆದಡ್ಡು ದರ್ಖಾಸು ಮನೆ ನಿವಾಸಿ ಪಿರ್ಯಾದಿದಾರರಾದ ಅನಿತಾಶ್ರೀ ಇವರ ಅಕ್ಕ ಮಮತಾಶ್ರೀ ಪ್ರಾಯ 34 ವರ್ಷ ಇವರು ತಮ್ಮ ಗಂಡ ಮೃತಪಟ್ಟ ಬಳಿಕ 2019 ನೇ ಸಾಲಿನಿಂದ ಪಿರ್ಯಾದಿದಾರರ ಜೊತೆಯಲ್ಲಿ ವಾಸವಾಗಿದ್ದು, ಇವರು ಹೃದಯ ಸಂಭಂದಿ, ವಾತ, ಮಧುಮೇಹ, ರಕ್ತದೊತ್ತಡ ತಲೆನೋವಿನಿಂದ ಬಳಲುತ್ತಿದ್ದು, ದಿನಾಂಕ 28/02/2022 ರಂದು ರಾತ್ರಿ 8:00 ಗಂಟೆಗೆ ತೀವೃ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಬಗ್ಗೆ ದಿನಾಂಕ 01/03/2022 ರಂದು ಬೆಳಗ್ಗಿನ ಜಾವ ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್‌ಗೆ ದಾಖಲಿಸಿದ್ದು, ಮಮತಾಶ್ರೀ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೆ ಬೆಳಗ್ಗೆ 6:00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/ 2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಫಿರ್ಯಾದಿದಾರರಾದ ಬೋಜ ಪೂಜಾರಿ (71) ತಂದೆ: ದಿ. ರಾಮ ಪೂಜಾರಿ ವಾಸ: ಕೆಳಂಗಡಿ ಪಾಡಿಗಾರ ಪೆರ್ಡೂರು ಗ್ರಾಮ ಉಡುಪಿ ಇವರು ಕೆಳಂಗಡಿ ಪಾಡಿಗಾರ ಪೆರ್ಡೂರು ಗ್ರಾಮದಲ್ಲಿರುವ ತನ್ನ ಜಾಗದಲ್ಲಿ ದಿನಾಂಕ: 01/03/2022ರಂದು 10:30 ಗಂಟೆಗೆ ಬೇಲಿ ಬದಿಯ ಮುಳ್ಳುಗಂಟಿಗಳನ್ನು ಕಡಿಯುತ್ತಿದ್ದಾಗ ಕುಂದರ್ ಬೂಡು ಎಂಬುವವರಿಗೆ ಸೇರಿದ ಜಾಗದಲ್ಲಿ ಮವಿನ ಮರವೊಂದಕ್ಕೆ ವ್ಯಕ್ತಿ ಒರ್ವ ನೇಣು ಹಾಕಿಕೊಂಡು ನೇತಾಡುತ್ತಿದ್ದು , ಪಿರ್ಯಾದಿದಾರರಿಗೆ ಪರಿಚಯ ಇಲ್ಲದೆ ಇದ್ದು ಪಿರ್ಯಾದಿದಾರರು ಅವರ ಪರಿಚಯದ ಬಾಸ್ಕರ ಪೂಜಾರಿಯವರಲ್ಲಿ ವಿಚಾರಿಸಲಾಗಿ ನೇಣು ಹಾಕಿಕೊಂಡ ವ್ಯಕ್ತಿ ಶಿವಪುರದ ಕೊಳಗುಡ್ಡೆಯ ಉದಯ ನಾಯ್ಕ್ (52) ಎಂಬುದಾಗಿ ತಿಳಿಸಿದ್ದರು. ಉದಯ ನಾಯ್ಕ್ ರವರು ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 01/03/2022 ರ ಬೆಳಿಗ್ಗೆ 8:00 ಗಂಟೆಯಿಂದ 10: 30 ಗಂಟೆಯ ಮಧ್ಯಾವಾದಿಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 09/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಉಡುಪಿ : ಪಿರ್ಯಾದಿದಾರರಾದ ಶ್ರೀಮತಿ ಆಶಾ, ಪ್ರಾಯ 38, ತಂದೆ; ಗುಂಡು ನಾಯ್ಕ, ವಾಸ: ಮೈತುಗುಳಿ, ಚೇರ್ಕಾಡಿ ಗ್ರಾಮ ಮತ್ತು ಅಂಚೆ. ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು 1ನೇ ಆರೋಪಿತ ರವಿರಾಜ್.ಬಿ(38) ಎಂಬಾತನನ್ನು ದಿನಾಂಕ: 10/11/2017 ರಂದು ಉಡುಪಿ ಕಿದಿಯೂರು ಶೇಷಶಯನ ಸಭಾ ಭವನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದು, ಮದುವೆ ಸಂಪೂರ್ಣ ಖರ್ಚು ನ್ನು ಪಿರ್ಯಾದಿದಾರರ ಮನೆಯವರು ಭರಿಸಿರುತ್ತಾರೆ. ಮದುವೆಯಾದ ಒಂದು ವಾರ ನಂತರ ಆರೋಪಿತರುಗಳು ಪಿರ್ಯಾದಿದಾರರು ಬೆಂಗಳೂರಿನಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರು ಕೆಲಸಕ್ಕೆ ಹೋಗದಂತೆ ನಿರ್ಭಂದಿಸಿ ಸಣ್ಣ ಸಣ್ಣ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ. ದಿನಾಂಕ: 01/02/2019 ರಂದು ಆರೋಪಿತರುಗಳ ಕುಕ್ಕಿಕಟ್ಟೆಯ ಮೂಲ ಮನೆಗೆ ಪೂಜಾ ಕಾರ್ಯಕೃಮಕ್ಕೆ ಬಂದಾಗ 1 ಮತ್ತು 2 ನೇ ಆರೋಪಿ ವಸಂತಿ(64) ಇವರು ಪಿರ್ಯಾದಿದಾರರಿಗೆ ಕೆಟ್ಟದ್ದಾಗಿ ಬೈದು ಕೈಯಿದ ಹೊಡೆದಿರುತ್ತಾರೆ. ದಿನಾಂಕ: 05/01/2022 ರಂದು ಆರೋಪಿತ ರುಗಳು ಪಿರ್ಯಾದಿದಾರರ ಕರಿಮಣಿ ಸರವನ್ನು ತೆಗೆದುಕೊಂಡು ಎಲ್ಲಿ ಬೇಕಾದರೂ ಹೋಗು ಎಂದು ಗದರಿಸಿದ್ದು, ಪಿರ್ಯಾದಿದಾರರು ಬೇರೆ ದಾರಿ ಕಾಣದೇ ಮನೆಗೆ ಬಂದಿರುವುದಾಗಿದೆ. ಪಿರ್ಯಾದಿದಾರರಿಗೆ ಆರೋಪಿತರುಗಳು ಸಣ್ಣ ಪುಟ್ಟ ವಿಷಯಕ್ಕೆ ತಕರಾರು ತೆಗೆದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವುದಾಗಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 498(ಎ), 323,504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 01-03-2022 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080