ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಬ್ರಹ್ಮಾವರ: ದಿನಾಂಕ 28/02/2021 ರಂದು ಪಿರ್ಯಾದಿದಾರರಾದ ಹರ್ಷೆಂದ್ರ (21), ತಂದೆ: ದಿ. ನಾಗರಾಜ ಆಚಾರ್ಯ,ವಾಸ: ಮುಂಡ್ಕಿನ್‌ಜೆಡ್ಡು, ಶಾರದಾ ಹೈಸ್ಕೂಲ್ ಹತ್ತಿರ, ಚೇರ್ಕಾಡಿ ಗ್ರಾಮ, ಪೇತ್ರಿ ಅಂಚೆ, ಬ್ರಹ್ಮಾವರ ತಾಲೂಕು ಇವರು ತನ್ನ ಸ್ಕೂಟರ್‌ನಲ್ಲಿ ಹೆಬ್ರಿ ಕಡೆಯಿಂದ ಪೇತ್ರಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಮಧ್ಯಾಹ್ನ 4:30 ಗಂಟೆಗೆ ಬ್ರಹ್ಮಾವರ ತಾಲೂಕು ಹಲುವಳ್ಳಿ ಗ್ರಾಮದ ಧಾರಣ-ಕಂಬಳ ಎಂಬಲ್ಲಿ ತಲುಪುವಾಗ ಅವರ ಹಿಂದಿನಿಂದ ಹೆಬ್ರಿ ಕಡೆಯಿಂದ ಆರೋಪಿ ಅಬುಬಕ್ಕರ್ ತನ್ನ KA-19-AB-0016 ನೇ ನಂಬ್ರದ ಕಂಟೈನರ್ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ನ್ನು ಓವರ್‌ಟೇಕ್ ಮಾಡಿ ಸ್ವಲ್ಪ ಮುಂದೆ ಹೋಗಿ ಸ್ವಲ್ಪ ತಿರುವು ರಸ್ತೆಯಲ್ಲಿ ಆತನ ತೀರಾ ಎಡಬದಿಗೆ ಚಲಾಯಿಸಿ ಪೇತ್ರಿ ಕಡೆಯಿಂದ ಹೆಬ್ರಿ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಕೃಷ್ಣ ಮರಕಾಲ (60) ರವರಿಗೆ ಡಿಕ್ಕಿ ಹೊಡೆದು, ಬಳಿಕ ಆರೋಪಿಯ ಹತೋಟಿ ತಪ್ಪಿ ರಸ್ತೆ ಬದಿಯ ಕಬ್ಬಿಣದ ತಡೆಗೋಡಿಗೆ ಡಿಕ್ಕಿ ಹೊಡೆದು ಎಡ ಬದಿಯ ಗದ್ದೆಗೆ ಕಂಟೈನರ್ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಈ ಅಪಘಾತದಿಂದ ಕೃಷ್ಣ ಮರಕಾಲರವರು ತಡೆಗೋಡೆ ಸಮೇತ ಚರಂಡಿಯಲ್ಲಿ ಬಿದ್ದುಕೊಂಡಿದ್ದು, ಅವರ ಸೊಂಟದಿಂದ ಕೆಳಗೆ ತೊಡೆ ಹಾಗೂ ಎರಡೂ ಕಾಲುಗಳಿಗೆ ತೀವ್ರ ಮೂಳೆ ಮುರಿತ ರಕ್ತಗಾಯ ಮತ್ತು ತಲೆಗೆ ರಕ್ತಗಾಯವಾಗಿರುತ್ತದೆ. ತೀವ್ರ ಗಾಯಗೊಂಡ ಕೃಷ್ಣ ಮರಕಾಲರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅಲ್ಲಿಂದ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ಸಂಜೆ 6:00 ಗಂಟೆಗೆ ಕರೆದು ಕೊಂಡು ಹೋದಲ್ಲಿ ಪರೀಕ್ಷಿಸಿದ ವೈಧ್ಯರು ಸದರಿ ಕೃಷ್ಣ ಮರಕಾಲರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಅಲ್ಲದೇ ಈ ಅಪಘಾತದಿಂದ ಆರೋಪಿಗೂ ಸಣ್ಣಪುಟ್ಟಗಾಯಗಳಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಅಶೋಕ ದೇವಾಡಿಗ (42),  ತಂದೆ: ಸುಬ್ಬು ದೇವಾಡಿಗ, ವಾಸ: ಆರೂರು ಜೆ.ಪಿ ನಗರ,  ಕುಂಜಾಲು , ಆರೂರು ಗ್ರಾಮ, ಬ್ರಹ್ಮಾವರ ತಾಲೂಕು  ಇವರು ಬ್ರಹ್ಮಾವರ ಸಿಟಿಸೆಂಟರ್‌ನಲ್ಲಿರುವ ಹರ್ಷ ಶೋರೂಮ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರು ದಿನಾಂಕ 27/02/2021 ರಂದು ಶೋರೂಮ್‌ನಲ್ಲಿ ಇರುವಾಗ ಮನೋಜ್ ರೆಡ್ಡಿ ಎಂಬುವವರು ತನ್ನ AP-10-BG-1140 ನೇ ನಂಬ್ರದ ಹೊಂಡಾ ಡ್ರೀಮ್ ನಿವೊ ಮೋಟಾರ್ ಸೈಕಲ್‌ನಲ್ಲಿ ಶೋರೂಮ್‌ನ ಎದುರಿನ ಪಾರ್ಕಿಂಗ್ ಸ್ಥಳದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ ಕಡೆಗೆ ಹೋಗಲು ಸಿಟಿ ಸೆಂಟರ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ  6:00 ಗಂಟೆಗೆ ಆರೋಪಿ ಚಂದ್ರಶೇಖರ್ ಶೆಟ್ಟಿರವರು ತನ್ನ KA-20-Z-4635 ನೇ ನಂಬ್ರದ ಕಾರನ್ನು  ಉಡುಪಿ ಕಡೆಯಿಂದ ಸಿಟಿ ಸೆಂಟರ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಬಂದು ಸಿಟಿ ಸೆಂಟರ್ ರಸ್ತೆ ಕಡೆಗಿನ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ತನ್ನ ಕಾರನ್ನು ನಿರ್ಲಕ್ಷತನದಿಂದ ಒಮ್ಮೇಲೆ ಅವರ ಎಡಕ್ಕೆ ತಿರುಗಿಸಿದ ಪರಿಣಾಮ ಕಾರಿನ ಎಡಭಾಗದಲ್ಲಿ ಹೋಗುತ್ತಿದ್ದ ಮನೋಜ್ ರೆಡ್ಡಿರವರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಮನೋಜ್ ರೆಡ್ಡಿ ರವರು ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಕೋಲು ಕಾಲಿನ ಭಾಗಕ್ಕೆ ಮೂಳೆ ಮುರಿತವುಂಟಾಗಿರುತ್ತದೆ. ಗಾಯಾಳು ಮನೋಜ್ ರೆಡ್ಡಿ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 28/02/2021 ರಂದು  ಸಂಜೆ 4:45  ಗಂಟೆಗೆ  ಕಾರ್ಕಳ ತಾಲೂಕು ಮಾಳ ಗ್ರಾಮದ ಹೇರಿಂಜೆ ಎಂಬಲ್ಲಿ KA-18-B-9949  ನೇ ನಂಬ್ರದ KKB ಬಸ್ಸಿನ ಚಾಲಕ ತನ್ನ ಬಸ್ಸನ್ನು ಶೃಂಗೇರಿ ಕಡೆಯಿಂದ ಕಾರ್ಕಳ  ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ತೀರ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು, ಕೆಟ್ಟು ರಸ್ತೆಯ ಎಡಭಾಗದಲ್ಲಿ ನಿಂತಿದ್ದ KA-42-1412 ನೇ ನಂಬ್ರದ ಟಿಪ್ಪರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರಿನ ಚಾಲಕ ಗೌಸ್ ಬಾಷ ರವರಿಗೆ ಬಲಕಾಲಿಗೆ ತೀವ್ರ ತರಹದ ನೋವು , ಮೆಕಾನಿಕ್ ಭಾರ್ಗವ ರವರಿಗೆ ಎದೆಯ ಬಲಭಾಗದಲ್ಲಿ ಒಳನೋವು  ಮತ್ತು ಸಂತೋಷ ರವರ ತಲೆ ಮತ್ತು ಬಲಕಾಲಿನ ಮೊಣಗಂಟಿನ ಬಳಿ ರಕ್ತ ಗಾಯ  ಹಾಗೂ ಬಸ್ಸಿನಲ್ಲಿರುವ ಗಣೇಶ ರವರ ಮೂಗಿನ ಬಳಿ ರಕ್ತ  ಗಾಯವಾಗಿ ಚಿಕಿತ್ಸೆ ಬಗ್ಗೆ  ಕಾರ್ಕಳ ಸರಕಾರಿ ಆಸ್ಪತ್ರೆಗೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: 279,337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ  28/02/2021  ರಂದು  14:45  ಗಂಟೆಗೆ  ಗಾಯಾಳು ಪ್ರಶಾಂತ ಕುಲಾಲ್‌ ಎಂಬುವವರು ಅವರ ನೊಂದಣಿ ಆಗದ ಹೊಸ ಟಿ.ವಿ,ಎಸ್‌ ಕಂಪೆನಿಯ ಮೋಟಾರು ಸೈಕಲ್‌ನ್ನು ಕುಂದಾಪುರ  ತಾಲೂಕಿನ  28  ಹಾಲಾಡಿ   ಗ್ರಾಮದ ಹಾಲಾಡಿ ಸೇತುವೆ ಮೇಲೆ  ಶಂಕರನಾರಾಯಣ ಕಡೆಯಿಂದ  ಹಾಲಾಡಿ  ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸೇತುವೆ ಎಡ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ  ಪರಿಣಾಮ ಮೋಟಾರು ಸೈಕಲ್‌ ಸವಾರ ಪ್ರಶಾಂತ ಕುಲಾಲ್‌ ರವರ ತಲೆಗೆ ಬಲ ಕೈಗೆ ಎಡ ಕಾಲಿಗೆ ರಕ್ತಗಾಯಗೊಂಡಿದ್ದು, ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಮ್.ಸಿ, ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ  ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021  ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಸುಂದರಿ (60), ಗಂಡ: ದಿ. ಚಂದು, ವಾಸ: ದರ್ಖಾಸು ಮನೆ, ಇಂದಿರಾ ನಗರ , ಸಾಣೂರು ಗ್ರಾಮ  ಇವರ ಮಗ ಪ್ರಕಾಶ (40) ಇವರು ಒಂದು ವರ್ಷದಿಂದ ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದವರು ಯಾವುದೇ ಕೆಲಸ ಮಾಡಲು ಆಗದೇ ಮನೆಯಲ್ಲಿದ್ದವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 27/02/2021 ರಂದು ಸಂಜೆ 7:00 ಗಂಟೆಯಿಂದ 7:30 ಗಂಟೆಯ ಮಧ್ಯೆ ತನ್ನ ವಾಸ್ತವ್ಯದ ಮನೆಯ ಹಾಲ್‌‌ನಲ್ಲಿರುವ ಮಾಡಿನ ಜಂತಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 04/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ಪಿರ್ಯಾದಿದಾರರಾದ ಕ್ಲಿಂಟನ್ ಕಸ್ತಲಿನೋ (25), ತಂದೆ: ಗ್ರೆಗೊರಿ ಕೊನ್ರಾಡ್ ಕಸ್ತಲಿನೋ, ಇಲ್ಲ್ ವಿಹ್ನು, ಕೋಡುಗುಡ್ಡೆ,  ಶಿರ್ವಾ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು , ಉಡುಪಿ ಜಿಲ್ಲೆ ಇವರ ತಂದೆ: ಗ್ರೆಗೊರಿ ಕೊನ್ರಾಡ್ ಕಸ್ತಲಿನೋ(55) ರವರು ಶಿರ್ವ ಗ್ರಾಮದ ಗ್ರಾಮ ಪಂಚ್ಯಾತಿನ ಅಧ್ಯಕ್ಷರಾಗಿದ್ದು, ದಿನಾಂಕ 28/02/2021 ರಂದು ಮದ್ಯಾಹ್ನ 12:25 ಗಂಟೆಗೆ ಶಿರ್ವಾ ಗ್ರಾಮದ ತೊಟ್ಲಗುರಿ ಎಂಬಲ್ಲಿ ನೀರಿನ ಸಮಸ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ವಿಚಾರ  ವಿನಿಮಯ ಮಾಡುತ್ತಿರುವಾಗ ಆಯತಪ್ಪಿ ಕುಸಿದು ಬಿದ್ದಿದ್ದು ಕೂಡಲೇ ಸಾರ್ವಜನಿಕರು ಸೇರಿ ಚಿಕಿತ್ಸೆಯ  ಬಗ್ಗೆ ಶಿರ್ವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದು, ನಂತರ ಆಸ್ಪತ್ರೆಯ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ  ದೃಢೀಕರಿಸಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

      

ಇತ್ತೀಚಿನ ನವೀಕರಣ​ : 01-03-2021 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ