ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾಪು: 01/03/2021 ರಂದು 11:30 ಗಂಟೆಗೆ ಪಿರ್ಯಾದಿದಾರರಾದ ಗಣೇಶ್ ಎಂ (25), ತಂದೆ: ಮಲ್ಲಪ್ಪ ಎಳಬಣವಿ, ವಾಸ: ರಾಮಪುರ ಅಂಚೆ,ಬಳಕೆರೂರು ಗ್ರಾಮ ಬಾಗಲಕೋಟೆ ತಾಲೂಕು ಮತ್ತು ಜಿಲ್ಲೆ, ಹಾಲಿ ವಾಸ: ಯಶೋಧ ಕಾಂಪೌಂಡು  ನಯನ ಕಾಂಪ್ಲೆಕ್ಸ್‌‌ಬಳಿ ಫಾರೆಸ್ಟ್ ಗೇಟ್ ಕಟಪಾಡಿ  ಏಣಗುಡ್ಡೆ ಗ್ರಾಮ ಇವರು ಉಡುಪಿಗೆ  ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತನ್ನ KA-29-EB-3309 ನೇ ಮೋಟಾರು ಸೈಕಲ್‌‌ನಲ್ಲಿ ಹೋಗುತ್ತಿದ್ದಾಗ ಸಂಜೆ 4:45 ಗಂಟೆಗೆ ಫಾರೆಸ್ಟ್‌‌ಗೆಟ್ ಬಳಿ ತಲುಪಿದಾಗ ಪಿರ್ಯಾದಿದಾರರ ಎದುರಿನಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ KA-19-MC-1164 ನೇ ಕಾರು ಚಾಲಕ ತನ್ನ ಕಾರನ್ನು ಯಾವುದೇ ಸೂಚನೆಯನ್ನು ನೀಡದೇ ಒಮ್ಮೇಲೆ ರಸ್ತೆಯ ಪೂರ್ವಕ್ಕೆ ಚಲಾಯಿಸಿದ್ದು ಇದರಿಂದ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಕಾರಿನ ಮೇಲೆ ಬಿದ್ದು, ಪಿರ್ಯಾದಿದಾರರ ಬಾಯಿಗೆ, ಮುಖಕ್ಕೆ, ಎಡಕಾಲಿನ ಪಾದದ ಗಂಟಿಗೆ, ಮೂಗಿಗೆ, ಎದೆಗೆ ಗಾಯವಾಗಿದ್ದು, ಹಲ್ಲುಗಳು ಉದುರಿ ಕೆಳಗೆ ಬಿದ್ದಿದ್ದವು. ಅಲ್ಲದೇ ತಲೆಗೆ ಗುದ್ದಿದ ನೋವಾಗಿದ್ದು, ಈ ಬಗ್ಗೆ ಪಿರ್ಯಾದಿದಾರರು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021  ಕಲಂ: 279 338   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ 28/02/2021 ರಂದು ಪಿರ್ಯಾದಿದಾರರಾದ ರವೀಂದ್ರ ನಾಯ್ಕ್‌(45), ತಂದೆ: ನಾರಾಯಣ,  ವಾಸ: ಪಡುಕೋಣೆ, ನಾಡಾ ಅಂಚೆ, ಬೈಂದೂರು ತಾಲೂಕು ಇವರ ಬಾವ ನರಸಿಂಹ ಮೂರ್ತಿ ಎಂಬುವವರು ತೋಟಕ್ಕೆ ಹೋಗಿ ವಾಪಾಸು ಸಾಯಂಕಾಲ 7:20 ಗಂಟೆಗೆ ಅವರ ಸೈಕಲ್‌ನಲ್ಲಿ ಮರವಂತೆ ಕಡೆಯಿಂದ ನಾಡಾ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಮನೆಯ ಕಡೆಗೆ ಬರುತ್ತಿರುವಾಗ ಪಿರ್ಯಾದಿದಾರರ ಮನೆಯ ಸಮೀಪ ತಲುಪುವಾಗ ಸೈಕಲ್‌ನ ಹಿಂದಿನಿಂದ KA-20-C-9854ನೇ ಮಹೇಂದ್ರ ಪಿಕಪ್‌‌ ವಾಹನದ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾವನ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ನರಸಿಂಹ ಮೂರ್ತಿಯವರು ರಸ್ತೆಗೆ ಬಿದ್ದು ಎರಡು ಕೈಗೆ ಮತ್ತು ಎಡಕಾಲಿಗೆ, ಬೆನ್ನಿಗೆ ಗಾಯಗಳಾಗಿದ್ದು, ಕೈ ಮತ್ತು ಎಡಕಾಲಿನ ಮೂಳೆ ಮುರಿತ ಉಂಟಾಗಿರುತ್ತದೆ. ಪಿರ್ಯಾದಿದಾರರು ಮತ್ತು ಪಿಕಪ್‌ ವಾಹನದ ಚಾಲಕ ಸೇರಿ ನರಸಿಂಹ ಮೂರ್ತಿಯವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ : 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಬೈಂದೂರು: ಪಿರ್ಯಾದಿದಾರರಾದ ಪ್ರವೀಣ ಪೂಜಾರಿ (23), ತಂದೆ:ಸುರೇಶ ಪೂಜಾರಿ, ವಾಸ:ಪುಟ್ಟಿ ಮನೆ ಹೊಳೆಬಾಗಿಲು, ಕಂಬದ ಕೋಣೆ ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ಸುರೇಶ ಪೂಜಾರಿ (51) ರವರು ದಿನಾಂಕ  28/02/2021 ರಂದು ಕೃಷಿ ಕೆಲಸದ ಬಗ್ಗೆ ಹೋಗಿದ್ದು ಸಂಜೆ ಮನೆಗೆ ಬಾರದೇ ಇದ್ದು ಈ ಬಗ್ಗೆ ಪಿರ್ಯಾದಿದಾರರು ಆಸುಪಾಸಿನಲ್ಲಿ ಹುಡುಕಾಡಿ ನೆರೆಕೆರೆಯವರಲ್ಲಿ ವಿಚಾರಿಸಿದಲ್ಲಿ ಸಿಗದೇ ಇದ್ದು ದಿನಾಂಕ 01/03/2021 ರಂದು ಬೆಳಿಗ್ಗೆ 7:00 ಗಂಟೆಗೆ ಪಿರ್ಯಾದಿದಾರರ ದೊಡ್ಡಮ್ಮನ ಮಗ ಸುಬ್ರಹ್ಮಣ್ಯ ಕಂಬದಕೋಣೆ ಗ್ರಾಮದ ಎಡಮಾವಿನ ಹೊಳೆ ತೀರದಲ್ಲಿ ಹುಡುಕುತ್ತಿರುವಾಗ ಪಿರ್ಯಾದಿದಾರರ ತಂದೆಯ ಮೃತದೇಹವು ತೇಲಾಡುತ್ತಿರುವುದಾಗಿ ಕರೆ ಮಾಡಿ ತಿಳಿಸಿದ್ದು ಪಿರ್ಯಾದಿದಾರರು ಬಂದು ನೋಡಿದಾಗ ಮೃತ ದೇಹವು ಪಿರ್ಯಾದಿದಾರರ ತಂದೆ ಸುರೇಶ ಪೂಜಾರಿಯವರ ಮೃತ ಶರೀರವಾಗಿರುತ್ತದೆ. ದಿನಾಂಕ 28/02/2021 ರಂದು ಸಂಜೆ ಸುರೇಶ ಪೂಜಾರಿ ಯವರು ಕೃಷಿ ಕೆಲಸ ಮುಗಿಸಿ ಮನೆಗೆ ಬರಲು ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಯ ತಪ್ಪಿ ಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಸಂದೀಪ ಮೂಲ್ಯ (36),  ತಂದೆ: ಸಂಜೀವ ಮೂಲ್ಯ, ವಾಸ: H.99C, ಗೌರಿ ನಿವಾಸ್  ಕಬ್ಯಾಡಿ ಹೌಸ್ ,80 ಬಡಗುಬೆಟ್ಟು ಉಡುಪಿ ಇವರ ತಮ್ಮ ವಿಶ್ವನಾಥ (33) ರವರು ದಿನಾಂಕ 28/02/2021 ರಂದು ಮಣಿಪಾಲದ ಎಂಐಟಿಯಲ್ಲಿ  ಕೆಲಸ ಮಾಡುವಾಗ  ಬೆಳಗ್ಗೆ  8:00 ಗಂಟೆಗೆ  ಮೂರ್ಛೆ ತಪ್ಪಿ ಬಿದ್ದವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 01/03/2021 ರಂದು ಬೆಳಗ್ಗೆ 11:50 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಮೃತರು ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-03-2021 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ