ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ದಿನಾಂಕ 30/01/2023 ರಂದು ಬೆಳಿಗ್ಗೆ  09:45 ಗಂಟೆಗೆ ಪಿರ್ಯಾದಿದಾರರಾದ ಆನಂದ ಸುವರ್ಣ,ತಂದೆ: ಶಿವ ಸುವರ್ಣ ,  ವಾಸ:  ಬಾರ್ಕೂರು ಕಚ್ಚೂರು ಗ್ರಾಮ ಬ್ರಹ್ಮಾವರ  ಇವರು  ಕೊಡವೂರು ಗ್ರಾಮದ ಬಾಪುತೋಟ 2ನೇ ಟೀ ದಕ್ಕೆಯ ಬಳಿ ರಸ್ತೆ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ  KA-20-AA-4889 ಬಿಳಿ  ಬಣ್ಣದ ಪಿಕ್‌ಪ್‌ ವಾಹನವನ್ನು ಅದರ ಚಾಲಕನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಪಡುಕೆರೆಯಿಂದ  ಮಲ್ಪೆ ಕಡೆಗೆ ಚಲಾಯಿಸಿಕೊಂಡು ಬಂದು ಮಲ್ಪೆ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಿಗೆ ಡಿಕ್ಕಿ  ಹೊಡೆದಾಗ ಪಿಕಪ್‌ ವಾಹನದ  ಎಡ ಚಕ್ರವು ಪಿರ್ಯಾದಿದಾರರ ಬಲಕಾಲಿನ ಪಾದದ ಮೇಲೆ  ಹರಿದಿದ್ದು ಪರಿಣಾಮ  ಪಾದದ ಬಳಿ ಮೂಳೆ ಮುರಿತದ ಜಖಂ ಆಗಿದ್ದು ಹಾಗೂ ತುಟಿಗೆ ರಕ್ತ ಗಾಯ ಆಗಿದ್ದು ಗಾಯಗೊಂಡ  ಅವರನ್ನು ಸಾರ್ವಜನಿಕರು ಉಪಚರಿಸಿ ಚಿಕಿತ್ಸೆ ಬಗ್ಗೆ ಆಂಬುಲೆನ್ಸ್‌  ನಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕುಂದಾಪುರ: ದಿನಾಂಕ 31/01/2023 ರಂದು ಸಂಜೆ  ಪವನ್‌ನಾಯಕ್‌, ಪೊಲೀಸ್ ಉಪ ನಿರೀಕ್ಷಕರು,ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಚೆರಿಯಬ್ಬ ಸಾಹೇಬರ ಗೇರು ಬೀಜ ಪ್ಯಾಕ್ಟರಿ ಬಳಿಯಿರುವ ಬಸ್ಸು ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕವಾಗಿ ಮದ್ಯವನ್ನು ಸೇವನೆ ಮಾಡುತ್ತಿರುವ ಬಗ್ಗೆ  ಬಂದ ಮಾಹಿತಿಯಂತೆ  ದಾಳಿ ನಡೆಸಿದಾಗ ಆ ವ್ಯಕ್ತಿಯು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ನಂತರ ಆತನನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಸುರೇಂದ್ರ ಶೆಟ್ಟಿ (51), ತಂದೆ: ದಿ. ಕುಷ್ಟಪ್ಪ ಶೆಟ್ಟಿ, ವಾಸ: ನಂ 2-89, ಶ್ರೀ ಮಂಜುನಾಥ ನಿಲಯ, ಜಡ್ಡಿನಕೊಡ್ಲು, ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು,  ಪರಿಶೀಲಿಸಿದಲ್ಲಿ 1) HAYWARDS Whisky 180 ml ಟೆಟ್ರಾ ಪ್ಯಾಕ್‌- 1, 2) HAYWARDS Whisky 90 ml ಟೆಟ್ರಾ ಪ್ಯಾಕ್‌- 1, 3) HAYWARDS Whisky 180 ml ಟೆಟ್ರಾ ಖಾಲಿ ಪ್ಯಾಕ್‌- 1 ಇದ್ದಿರುವುದು ಕಂಡು ಬಂದಿದ್ದು ಸ್ವತ್ತುಗಳನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023, ಕಲಂ: 15 (a) KE Act ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಗಂಗೊಳ್ಳಿ: ಪಿರ್ಯಾದಿದಾರರಾದ ರತ್ನ (46), ಗಂಡ: ಗಣೇಶ ಮೊಗವೀರಾ, ವಾಸ: ತೊರಳ್ಳಿ ನಡುಮನೆ, ಕುಂದಬಾರಂದಾಡಿ ಗ್ರಾಮ ಕುಂದಾಪುರ ತಾಲೂಕು ಇವರು  ಪದ್ಮಾ ಹೆಗ್ಡೆಯವರ K.M.P.K.W.W.A (Padma Royal Challenge Scheme) ಉದ್ಯಮದಲ್ಲಿ ಸದಸ್ಯರಾಗಿದ್ದು, ಪದ್ಮಾ ಹೆಗ್ಡೆ ಹಾಗೂ ಮೂಕಾಂಬು ರವರು ಸೇರಿ ತಮ್ಮ ಉದ್ಯಮದಲ್ಲಿ ನೀವು ಸದಸ್ಯರಾದರೆ ನಿಮಗೆ ಕ್ಯಾಶಿಯರ್‌ ಆಗಿ ನೇಮಕ ಮಾಡುತ್ತೇವೆ ನೀವು 2,00,000/- ರೂಪಾಯಿ ಡೆಪಾಸಿಟ್‌ ಅಲ್ಲದೆ ನಿಮಗೆ 20,000/- ಸಂಬಳ ನೀಡುವುದಾಗಿ ನಂಬಿಸಿದ್ದು, ಪಿರ್ಯಾದಿದಾರರು 2,00,000/- ಡೆಪಾಸಿಟ್‌ ಇಟ್ಟಿದ್ದು ಅಲ್ಲದೆ ಸಂಸ್ಥೆಗೆ ಗ್ರಾಹಕರನ್ನು ಮಾಡುವಂತೆ ಗ್ರಾಹಕರು ವಾರಕ್ಕೆ 500/- ರೂಪಾಯಿಯಂತೆ ಗ್ರಾಹಕರು 50 ಕಂತು ಕಟ್ಟಿದಲ್ಲಿ ಅವರಿಗೆ 34,000/- ರೂಪಾಯಿ ನೀಡುವುದಾಗಿಯೂ, ಗ್ರಾಹಕರು ವಾರಕ್ಕೆ 950/- ರೂಪಾಯಿಯಂತೆ 50 ಕಂತು ಕಟ್ಟಿದಲ್ಲಿ 68,000/- ರೂಪಾಯಿ, ಗ್ರಾಹಕರು ತಿಂಗಳಿಗೆ 1,000/- ರೂಪಾಯಿಯಂತೆ ಗ್ರಾಹಕರು 12 ಕಂತು ಕಟ್ಟಿದರೆ 17,000/- ರೂಪಾಯಿ ಕೊಡುವುದಾಗಿಯೂ ಹಾಗೂ ಗ್ರಾಹಕರು ತಿಂಗಳಿಗೆ 2,000/- ರೂಪಾಯಿಯಂತೆ 12 ತಿಂಗಳು ಕಟ್ಟಿದರೆ 34,000/- ರೂಪಾಯಿ ನೀಡುವುದಾಗಿಯೂ, ಗ್ರಾಹಕರು 50,000/- ರೂಪಾಯಿ ಒಂದು ವರ್ಷ ಡೆಪೋಸಿಟ್‌ ಇಟ್ಟರೆ 80,000/- ರೂಪಾಯಿ ಕೊಡುವುದಾಗಿಯೂ, ಗ್ರಾಹಕರು 1,00,000/- ರೂಪಾಯಿ ಒಂದು ವರ್ಷ ಡೆಪೋಸಿಟ್‌ ಇಟ್ಟರೆ 1,60,000/-ರೂಪಾಯಿ ಕೊಡುವುದಾಗಿಯೂ, ಅಲ್ಲದೇ ನಿಮಗೆ ಒಬ್ಬ ಗ್ರಾಹಕರನ್ನು ಸೇರ್ಪಡೆ ಮಾಡಿದರೆ 100/- ರೂಪಾಯಿ ಕಮಿಷನ್ ನೀಡುವುದಾಗಿಯೂ ನಮ್ಮನ್ನು ನಂಬಿಸಿದ್ದು, ಅದರಂತೆ ಪಿರ್ಯಾದಿದಾರರು 131 ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು ಕೆಲವು ಗ್ರಾಹಕರಲ್ಲಿ ವಾರಕ್ಕೆ 500 ರೂಪಾಯಿ ಹಾಗೂ ಇನ್ನು ಕೆಲವು ಗ್ರಾಹಕರಲ್ಲಿ 1,000/-ರೂಪಾಯಿಯನ್ನು ಸಂಗ್ರಹಿಸುತ್ತಿದ್ದು,  ಹಣವನ್ನು ಬಗ್ವಾಡಿಯಲ್ಲಿರುವ ಪದ್ಮಾಹೆಗ್ಡೆಯವರ ಕಛೇರಿಯಲ್ಲಿ ಪದ್ಮಾ ಹೆಗ್ಡೆ, ಸೆಲ್ವಾರಾಜ, ಪದ್ಮಾ ಹೆಗ್ಡೆ ರವರ ಮಗ ದಿಶಾಂತ್ ಹೆಗ್ಡೆ, ಮಗಳು ಸುಹಾನಿ ಹೆಗ್ಡೆ ಯವರು ಸಹಿ ಹಾಕಿ ಹಣ ಸ್ವೀಕರಿಸುತ್ತಿದ್ದರು. ಪಿರ್ಯಾದಿದಾರರು ಗ್ರಾಹಕರಿಂದ ಹಣ ಸಂಗ್ರಹಿಸುವ ಬಗ್ಗೆ ಪದ್ಮಾ ಹೆಗ್ಡೆ ಯವರು ನೀಡಿದ ಕಾರ್ಡ್‌ಗೆ ಹಣ ಸ್ವೀಕರಿಸಿದ ಬಗ್ಗೆ ಸಹಿ ಹಾಕುತ್ತಿದ್ದರು ಅಲ್ಲದೆ ಸಂಸ್ಥೆಗೆ ಗ್ರಾಹಕರಿಂದ ಹಣ ಡೆಪಾಸಿಟ್‌ ಇರಿಸಿಕೊಂಡು ಅವರಿಗೆ ಕರಾರು ಪತ್ರ ನೀಡುತ್ತಿದ್ದು ಅಲ್ಲದೆ ಸುಜಾತಾ ಹಾಗೂ ಅವರ ಗ್ರಾಹಕರಿಗೆ 24,05,000/- ರೂಪಾಯಿ ಸುಭಾಷ ಹಾಗೂ ಅವರ ಗ್ರಾಹಕರಿಗೆ 5,92,500/- ರೂಪಾಯಿ ಭಾಗ್ಯಶ್ರೀ ಹಾಗೂ ಅವರ ಗ್ರಾಹಕರಿಗೆ 7,87,500/- ರೂಪಾಯಿ ಹಾಗೂ ಯಶೋಧಾ ಹಾಗೂ ಅವರ ಗ್ರಾಹಕರಿಗೆ 9,12,000/- ರೂಪಾಯಿ ರೇವತಿ ಹಾಗೂ ಅವರ ಗ್ರಾಹಕರಿಗೆ 4,05,800/- ದೀಪಾ ಹಾಗೂ ಅವರ ಗ್ರಾಹಕರಿಗೆ 3,94,000/- ರಾಘವೇಂದ್ರ ಪೂಜಾರಿ ಹಾಗೂ ಅವರ ಗ್ರಾಹಕರಿಗೆ 11,00,515/- ರೂಪಾಯಿ ಭಾರತಿ ಹಾಗೂ ಅವರ ಗ್ರಾಹಕರಿಗೆ 2,14,000/- ಸರೋಜಾ ಹಾಗೂ ಅವರ ಗ್ರಾಹಕರಿಗೆ 3,90,000/- ರೂಪಾಯಿ ಸವಿತಾ ಹಾಗೂ ಅವರ ಗ್ರಾಹಕರಿಗೆ 76,300/- ರೂಪಾಯಿ ಸುಶೀಲಾ ಹಾಗೂ ಅವರ ಗ್ರಾಹಕರಿಗೆ 2,50,000/- ರೂಪಾಯಿ ಒಟ್ಟು 1,07,60,615/- ರೂಪಾಯಿ ಹಾಗೂ 2022 ನೇ ಸಾಲಿನ ಜೂನ್‌ ತಿಂಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಬಾರಂದಾಡಿ ಶಾಲೆಯನ್ನು 5 ವರ್ಷಗಳ ವರೆಗೆ ದತ್ತು ಪಡೆದು 6 ಜನ ಗೌರವ ಶಿಕ್ಷಕಿಯರನ್ನು ಹಾಗೂ ಇಬ್ಬರು ಆಯಾರನ್ನು ನೇಮಿಸಿ ಸಂಬಳ ಕೊಡುವುದಾಗಿ ಹೇಳಿದ್ದು, ಅಲ್ಲದೆ ಶಾಲಾ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದಾಗಿ ಹೇಳಿ ಮಕ್ಕಳಿಗೂ ಮೂಲ ಸೌಕರ್ಯವನ್ನು ಒದಗಿಸದೇ  ಶಿಕ್ಷಕರಿಗೆ  ಹಾಗೂ ಆಯಾಗಳಿಗೆ ಸಂಬಳ ಕೊಡದೇ ನಂಬಿಸಿ ಮೋಸ ಮಾಡಿದ್ದು, ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಹಿಂದಿರುಗಿಸ ಬೇಕಾದ ಹಣವನ್ನು ನೀಡದೇ ಅವರ ಕಛೇರಿಗಳನ್ನು ಬಂದ್‌ ಮಾಡಿ  ಸದಸ್ಯರು ಹಾಗೂ ಗ್ರಾಹಕರಿಗೆ ನಂಬಿಸಿ ಮೋಸ ಮಾಡಿದ್ದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2023 ಕಲಂ: 406, 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .      

ಇತ್ತೀಚಿನ ನವೀಕರಣ​ : 01-02-2023 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080