ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣಗಳು

 • ಬೈಂದೂರು: ದಿನಾಂಕ 31/01/2023 ರಂದು ಪಿರ್ಯಾದಿ: ನಿರಂಜನ ಗೌಡ ಬಿ ಎಸ್ ಪೊಲೀಸ್ ಉಪ ನಿರೀಕ್ಷಕರು (ಕಾ ಮತ್ತು ಸು ) ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನ  KA20G-338 ನೇದರಲ್ಲಿ  ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಕಾಲ್ತೋಡು ಗ್ರಾಮ ಪಂಚಾಯತ್ ಬಳಿಯ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ  ಖಚಿತ ಮಾಹಿತಿ ಮೇರೆಗೆ ಮಾಹಿತಿ ಬಂದ ಸ್ಥಳಕ್ಕೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಹೋಗಿ ಕಾಲ್ತೋಡು ಗ್ರಾಮದ ಕಾಲ್ತೋಡು ಗ್ರಾಮ ಪಂಚಾಯತ್ ಬಳಿಯ ಹಾಡಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಲ್ಲಿಗೆ ಸಮಯ ಸುಮಾರು 15:30 ಗಂಟೆಗೆ  ದಾಳಿ ನಡೆಸಿ ಇಸ್ಪೀಟು ಆಟವಾಡುತ್ತಿದ್ದ 5 ಆರೋಪಿಗಳಾದ  1. ಸುಂದರ ಗೌಡ ಪ್ರಾಯ 39 ವರ್ಷ, ತಂದೆ ವೆಂಕ ಗೌಡ, ವಾಸ ಮಹಾಲಿಂಗಗೇಶ್ವರ  ಕಾಲೋನಿ,  ಹೆರೆಂಜಾಲು, ಬೈಂದೂರು  ತಾಲೂಕು   2.ರಾಜೇಶ ಪ್ರಾಯ 29 ವರ್ಷ, ತಂದೆ  ದಾರ ವಾಸ ಕಲ್ಗೇರಿ ಮನೆ, ಹೆರೆಂಜಾಲು, ಬೈಂದೂರು ತಾಲೂಕು. 3.ಸುಬ್ರಹ್ಮಣ್ಯ  ಪ್ರಾಯ 32  ವರ್ಷ  ತಂದೆ ನಾಗಪ್ಪ, ವಾಸ ಗುಡ್ಡೆ ಮಹಾಲಿಂಗೇಶ್ವರ ಕಾಲೋನಿ, ಹೆರೆಂಜಾಲು, ಬೈಂದೂರು ತಾಲೂಕು, 4}.ಮಂಜುನಾಥ  ಪ್ರಾಯ 42  ವರ್ಷ ತಂದೆ  ಬಾಲ , ವಾಸ ಹಾಡಿಮನೆ,  ಚಿಪ್ ಕೇರಿ ಪೇಟೆ, ಕಾಲ್ತೋಡು  ಗ್ರಾಮ ಬೈಂದೂರು ತಾಲೂಕು 5. ರಮೇಶ್   ಪೂಜಾರಿ  ಪ್ರಾಯ  32  ವರ್ಷ  ತಂದೆ ಶೀನ ಪೂಜಾರಿ  ಸುಕ್ರಾಸನ ಮನೆ  ಹೆರೆಂಜಾಲು  ಜನರನ್ನು ಹಿಡಿದುಕೊಂಡಿದ್ದು 05 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು  ಆಟಕ್ಕೆ ಬಳಸಿದ ಹಳೆಯ ನ್ಯೂಸ್‌ಪೇಪರ್‌, ಇಸ್ಪಿಟ್‌ಕಾರ್ಡ್- 52, ಹಾಗೂ 3960/- ರೂಪಾಯಿ ನಗದನ್ನು ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡಿದ್ದಾಗಿದೆ. ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2023 ಕಲಂ. 87 KP ACT ರಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

 • ಕಾರ್ಕಳ: ಪ್ರಥಮ್‌ ಎಸ್‌ ಶೆಟ್ಟಿ, ಪ್ರಾಯ: 22 ವರ್ಷ, ತಂದೆ: ಸತೀಶ್‌ ಶೆಟ್ಟಿ, ವಾಸ: ಸಿದ್ದಿ ಕಾಂಪ್ಲೆಕ್ಸ್‌, ಮಾರಿಗುಡಿ ಎದುರು, ಕೌಡೂರು ಗ್ರಾಮ ರವರು ದಿನಾಂಕ: 31.01.2023 ರಂದು ತನ್ನ ಬಾಬ್ತು KA20EW5896 ನೇ ನೋಂದಣಿ ಸಂಖ್ಯೆಯ ರಾಯಲ್‌ ಎನ್‌ ಪೀಲ್ಡ್‌ ಬುಲೆಟ್‌ ಮೋಟಾರ್‌ ಸೈಕಲ್‌ ನಲ್ಲಿ ಕುಂಟಲ್ಪಾಡಿಯಿಂದ ಸಾಣೂರು ಗರಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ ಎದುರುಗಡೆಯಿಂದ ಒಂದು ಗೂಡ್ಸ್‌ ಟೆಂಪೋ ಹೋಗುತ್ತಾ ಇದ್ದು ಸಮಯ ಸುಮಾರು ಬೆಳಗ್ಗೆ 10:30 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ತೆಂಗುರಾಜ ಕೋಕೋ ಪ್ರೋಡಕ್ಟ್ ಪ್ಯಾಕ್ಟರಿಯ ಗೇಟಿನ ಎದುರು ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ KA18B0451 ನೇ ನೋಂದಣಿ ಸಂಖ್ಯೆಯ ಗೂಡ್ಸ್‌ ಟೆಂಪೋ ವಾಹನವನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೇ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ ಸೈಕಲ್‌ ಸಮೇತ ನೆಲಕ್ಕೆ ಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ಎಡಕಾಲಿನ ಪಾದದ ಬಳಿ ಒಳಜಖಂ ಆಗಿದ್ದು ಹಾಗೂ ಎರಡೂ ಭುಜಗಳಿಗೂ ಕೂಡಾ ಒಳಜಖಂ ಆಗಿರುತ್ತದೆ. ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರನ್ನು ಕಾರ್ಕಳ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 15/2023 ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ  ಪ್ರಕರಣ

 • ಕಾರ್ಕಳ:  ಫಿರ್ಯಾದಿ ಶಕುಂತಲಾ, ಪ್ರಾಯ 52 ವರ್ಷ ಗಂಡ ಬಾಲಕೃಷ್ಣ  ಪೂಜಾರಿ  ವಾಸ ನಿತೇಶ ಕೃಪಾ, ಮಂಗಳಪಾದೆ ,  ಮಿಯಾರು ಗ್ರಾಮ ಇವರು ಮಿಯಾರು  ಗ್ರಾಮದ ಮಂಗಳ ಪಾದೆ ಎಂಬಲ್ಲಿ  ಗಂಡ  ಬಾಲಕೃಷ್ಣ  ಪೂಜಾರಿ  ಎಂಬವರೊಂದಿಗೆ  ವಾಸವಾಗಿದ್ದು  1 ನೇ ಅಪಾದಿತ ನಿತೇಶ್ ಕುಮಾರ್ ಎಂಬಾತನು ಫಿರ್ಯಾದುದಾರರ  ಗಂಡನ ಮೊದಲನೇ   ಹೆಂಡತಿಯ  ಮಗನಾಗಿದ್ದು ಸದ್ರಿ ಅಪಾದಿತನು ಆಗಾಗ ತನ್ನ ಹೆಂಡತಿಯೊಂದಿಗೆ ಬಂದು ಆಸ್ತಿಯಲ್ಲಿ ಪಾಲು ಕೊಡಬೇಕೆಂದು ತಕರಾರು  ತೆಗೆಯುತ್ತಿದ್ದು, ದಿನಾಂಕ  01-02-2023 ರಂದು ರಾತ್ರಿ  01-15 ಗಂಟೆಗೆ  ಅಪಾದಿತ ನಿತೇಶ ಎಂಬಾತನು ತನ್ನ ಹೆಂಡತಿ ದೀಪಾ ಮತ್ತು ರೋಶನ್ ಎಂಬವರೊಂದಿಗೆ ಸಮಾನ ಉದ್ದೇಶದಿಂದ ಫಿರ್ಯಾದುದಾರರ ಮನೆಗೆ ಬಂದು  ಅವಾಚ್ಯ ಶಬ್ದಗಳಿಂದ ಬೈದು ,ನೀವು ಆಸ್ತಿಯನ್ನು ನಮಗೆ ಬಿಟ್ಟುಕೊಡದಿದ್ದರೆ  ನಿಮ್ಮಿಬ್ಬರನ್ನು  ಕೊಚ್ಚಿಕೊಚ್ಚಿ  ಕೊಂದು ಹಾಕುತ್ತೇವೆ ಎಂದು ಅಪಾದಿತ  1 ನಿತೇಶ ತಂದೆ ಬಾಲಕೃಷ್ಣ  ಪೂಜಾರಿ ಮತ್ತು 3 ನೇ  ರೋಶನ್ ರವರು ಫಿರ್ಯಾದುದಾರರ ಮೈಮೇಲೆ  ಕೈಹಾಕಿ ಮಾನಭಂಗವುಂಟು  ಮಾಡಿ, ಫಿರ್ಯಾದುದಾರರಿಗೆ ಮತ್ತು ಅವರ ಗಂಡನಿಗೆ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದುದಲ್ಲದೇ 2 ನೇ ಅಪಾದಿತೆ ದೀಪಾ ಗಂಡ ನಿತೇಶ ನು ಫಿರ್ಯಾದುದಾರರಿಗೆ ಮತ್ತು ಅವರ  ಗಂಡನಿಗೆ ಟಾರ್ಚ್ ನಿಂದ ಹಲ್ಲೆ ಮಾಡಿ  ಗಾಯಗೊಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 16/2023  ಕಲಂ 323,324,354 504,506, R/W 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಮಾದಕ ವಸ್ತು ಸೇವನೆ ಪ್ರಕರಣ

 • ಮಣಿಪಾಲ:  ದಿನಾಂಕ: 30.01.2023 ರಂದು ಉಡುಪಿ ತಾಲೂಕು, ಹೆರ್ಗಾ ಗ್ರಾಮದ ಮಾವಿನಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಸಿಬ್ಬಂದಿಗಳಾದ ಹೆಚ್.ಸಿ. 74 ಮತ್ತು ಪಿ.ಸಿ. 305 ನೇಯವರು ಬೆಳಿಗ್ಗೆ 11:00 ಗಂಟೆಗೆ ವಶಕ್ಕೆ ಪಡೆದ್ದು, ಠಾಣೆಗೆ ಹಾಜರುಪಡಿಸಿದ್ದು, ಪೊಲೀಸ್ ನಿರೀಕ್ಷಕರು  ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ.  ದಿನಾಂಕ 01.02.2023  ರಂದು ಪಿರ್ಯಾದಿದಾರರು  ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿದ್ದು, ಈ ಬಗ್ಗೆ ಅಶೋಕ,ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ರವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 14/2023  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ:  ದಿನಾಂಕ: 30.01.2023 ರಂದು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಉಪೇಂದ್ರ ಪೈ ಮೆಮೋರಿಯಲ್ ಸರ್ಕಲ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಸಿಬ್ಬಂದಿಗಳಾದ ಹೆಚ್.ಸಿ. 74 ಮತ್ತು ಪಿ.ಸಿ. 305 ನೇಯವರು ಬೆಳಿಗ್ಗೆ 12:00 ಗಂಟೆಗೆ ವಶಕ್ಕೆ ಪಡೆದ್ದು, ಠಾಣೆಗೆ ಹಾಜರುಪಡಿಸಿದ್ದು, ಪೊಲೀಸ್ ನಿರೀಕ್ಷಕರು  ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ. ಈ ದಿನ ದಿನಾಂಕ 01.02.2023  ರಂದು ಪಿರ್ಯಾದಿದಾರರು  ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಖಚಿತ ಪಟ್ಟಿದ್ದು , ಈ ಬಗ್ಗೆ ಅಶೋಕ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ರವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್‌ ಠಾಣಾ ಕ್ರಮಾಂಕ 15/2023  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ದಿನಾಂಕ: 30.01.2023 ರಂದು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಎಂ.ಪಿ ಪಾರ್ಕ್ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಸಿಬ್ಬಂದಿಗಳಾದ ಹೆಚ್.ಸಿ. 39 ಮತ್ತು ಪಿ.ಸಿ. 1234 ನೇಯವರು ಬೆಳಿಗ್ಗೆ 10:45 ಗಂಟೆಗೆ ವಶಕ್ಕೆ ಪಡೆದ್ದು, ಠಾಣೆಗೆ ಹಾಜರುಪಡಿಸಿದ್ದು, ಪೊಲೀಸ್ ನಿರೀಕ್ಷಕರು  ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ.  ದಿನಾಂಕ 01.02.2023  ರಂದು ಪಿರ್ಯಾದಿದಾರರು  ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿದ್ದು, ಈ ಬಗ್ಗೆ ಅಶೋಕ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ರವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್‌ ಠಾಣಾ ಕ್ರಮಾಂಕ 16/2023  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 01-02-2023 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080