ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

 • ಉಡುಪಿ :ಪಿರ್ಯಾದಿ :ಗಣೇಶ ಪ್ರಾಯ:21 ವರ್ಷ ತಂದೆ ನಾರಾಯಣ ವಾಸ:DNo 1-3 ಚಕ್ಕುಲಿಕಟ್ಟೆ, ನರ್ನಡ, ಲಕ್ಷ್ಮಿನಗರ, ಕೊಳಲಗಿರಿ, ಉಪ್ಪೂರು ಗ್ರಾಮ, ಉಡುಪಿ ಅಂಬಲಪಾಡಿಯಲ್ಲಿರುವ ಇ-ಕಾರ್ಟ್‌ ಸಂಸ್ಥೆಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರು ಹೋಂಡಾ ಡಿಯೋ ಸ್ಕೂಟರ್‌ ನಂಬ್ರ: KA 20 EV 6577 (Chassis No: ME4JF983GLW007011, Engine No: JF98EW0018338) ನೇದರ ಆರ್‌.ಸಿ ಮಾಲಕರಾಗಿದ್ದು, ದಿನಾಂಕ: 31/01/2022 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದುದಾರರು ವಿದ್ಯೋದಯ ಹೈಸ್ಕೂಲ್‌ ಬಳಿ ಇರುವ ಸಾಯಿರಾಧಾ ಗೋಕುಲಧಾಮ ಅಪಾರ್ಟ್‌ಮೆಂಟ್‌ನ ಎದುರುಗಡೆ ನಿಲ್ಲಿಸಿದ್ದು, ಪಾರ್ಸೆಲ್‌ ಕೊಟ್ಟು ವಾಪಾಸು10:05 ಗಂಟೆಗೆ ಬಂದು ನೋಡಿದಾಗ ಸ್ಕೂಟರ್‌ ನಿಲ್ಲಿಸಿದ  ಜಾಗದಲ್ಲಿ ಇಲ್ಲದೇ ಇದ್ದು, ಪಿರ್ಯಾದುದಾರರು ಅಪಾರ್ಟ್‌ಮೆಂಟ್‌ನ ಎದುರು ನಿಲ್ಲಿಸಿದ ಸ್ಕೂಟರ್‌ನ್ನು ಹಾಗೂ ಅದಲ್ಲಿದ್ದInfinix Hot -10 play ಕಂಪೆನಿಯ ರೂ. 8,299/- ಮೌಲ್ಯದ ಮೋಬೈಲ್‌, Pigeon ಕಂಪೆನಿಯ ರೂ. 2,191/- ಮೌಲ್ಯದ ಮಿಕ್ಸರ್‌ ಗ್ರೈಂಡರ್‌ ಹಾಗೂ ಇನ್ನಿತರ ಸಣ್ಣಪುಟ್ಟ ಪಾರ್ಸೆಲ್ ಒಟ್ಟು ಮೌಲ್ಯ 20,000/- ಆಗಬಹುದು. ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ರೂ. 80,000/- ಆಗಬಹುದು  ಸದ್ರಿ ಸ್ಕೂಟರ್‌ ಮತ್ತು ಅದರಲ್ಲಿದ್ದ ಪಾರ್ಸೆಲ್‌ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಿದಲ್ಲಿ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ  17/2022, ಕಲಂ: 379 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು:ಫಿರ್ಯಾದಿ ರಾಮಚಂದ್ರ ಕಾರಂತ ಪ್ರಾಯ: 53 ವರ್ಷ ತಂದೆ: ಸೂರ್ಯನಾರಾಯಣ ಕಾರಂತ ವಾಸ: ಯಕ್ಷೇಶ್ವರಿ ನಿಲಯ ಕೆಳಕೇರಿ ಕೋಣಿ ಗ್ರಾಮ ಕುಂದಾಪುರ ಇವರು ಕೋಣಿಯಲ್ಲಿ ನಂದಿನಿ ಏಜೆನ್ಸಿಸ್ ಎಂಬ ದಿನಸಿ ಸಾಮಾಗ್ರಿಗಳ ಅಂಗಡಿಯನ್ನು ಹೊಂದಿದ್ದು, ನನ್ನ ಅಂಗಡಿಯಿಂದ ದಿನಸಿ ಸಾಮಗ್ರಿಗಳನ್ನು ಚಿಲ್ಲರೆ ವ್ಯಾಪಾರಿ ಅಂಗಡಿಗಳಿಗೆ ಹೋಲ್ ಸೇಲ್ ರೀತಿಯಲ್ಲಿ ಸರಬರಾಜು ಮಾಡುತ್ತಿದ್ದು ದಿನಾಂಕ 31/01/2022 ರಂದು ತಮ್ಮ ಟಾಟಾ ಮೆಗಾ ಏಸ್ ಮಿನಿ ಗೂಡ್ಸ್ ವಾಹನ ನಂಬ್ರ KA20AA4529 ರಲ್ಲಿ ಸಾಮಾಗ್ರಿಗಳನ್ನು ತುಂಬಿಕೊಂಡು ಅಂಗಡಿಗಳಿಗೆ ಸರಬರಾಜು ಮಾಡಿ ಅದರಿಂದ ಬಂದ ಹಣವನ್ನು ಕಪ್ಪು ಬಣ್ಣದ ಬ್ಯಾಗ್ ನಲ್ಲಿ ಹಾಕಿಕೊಂಡು ಸಂಜೆ 5-45 ಗಂಟೆ ಸುಮಾರಿಗೆ ನಾವುಂದ ಅರೆಹೊಳೆ ಕ್ರಾಸ್ ರಸ್ತೆಯ ಬಳಿ ಇರುವ ಭಾಸ್ಕರ ರವರ ಮಹಾಗಣಪತಿ ಸ್ಟೋರ್ ಗೆ ತೆರಳಿ ದಿನಸಿ ಸಾಮಾಗ್ರಿಗಳನ್ನು ಹಾಕುತ್ತಿರುವಾಗ ಸಮಯ ಸುಮಾರು ಸಂಜೆ 5-45 ಗಂಟೆಯಿಂದ 6-15 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದುದಾರರ ಗೂಡ್ಸ್ ವಾಹನದಲ್ಲಿ ಇಟ್ಟಿದ್ದ  ದಿನಸಿ ಸಾಮಾಗ್ರಿಗಳನ್ನು ಸರಬರಾಜು ಮಾಡಿ ಬಂದ ಹಣ ರೂ 2 ಲಕ್ಷ 6 ಸಾವಿರ ಮತ್ತು ಚಿಲ್ಲರೆ ಹಣ 6 ಸಾವಿರ ಮತ್ತು ನನ್ನ ಹೆಂಡತಿಯ SBI ಬ್ಯಾಂಕ್ ನ 3 ಬ್ಲ್ಯಾಂಕ್ ಚೆಕ್ ಇದ್ದ ಕಪ್ಪು ಬಣ್ಣದ ಬ್ಯಾಗ್ ನ್ನು ಕಳವು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 32/2022 ಕಲಂ. 379  ಭಾ. ದಂ. ಸಂ. ರಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ಪಿರ್ಯಾದಿ ಸಂತೋಷ ಪ್ರಾಯ: 30 ವರ್ಷ ತಂದೆ:ನಾಗ ಪೂಜಾರಿ ವಾಸ: ಜಟ್ಟಿಹಿತ್ಲು ತಗ್ಗರ್ಸೆ ಗ್ರಾಮ ಬೈಂದೂರು  ಇವರು ದಿನಾಂಕ 29-01-2022 ರಂದು ರಾತ್ರಿ 8:30 ಗಂಟೆಗೆ ಯಡ್ತರೆ ಗ್ರಾಮದ  ನೀಲಕಂಠ ಹುದಾರ್ ರ ಮನೆಯ ಗೇಟಿನ ಎದುರು ಅವರ ಬಾಬ್ತು  KA 20 EV 9416 ನೇ  ನಂಬ್ರದ TVS NTORQ   ಬೈಕ್ ನ್ನು ನಿಲ್ಲಿಸಿ  ಬೀಗ ಹಾಕಿ ಹೋಗಿದ್ದು, ದಿನಾಂಕ 30-01-2022  ರಂದು  ಬೆಳಿಗ್ಗೆ 11:00 ಗಂಟೆಗೆ  ಪಿರ್ಯಾದುದರರು ಬಂದು ನೋಡಿದಾಗ ನಿಲ್ಲಿಸಿದ  ಸ್ಥಳದಲ್ಲಿ ಬೈಕ್  ಇಲ್ಲದೇ ಇದ್ದು,ಬೈಕಿನ ಡಿಕ್ಕಿಯೊಳಗೆ ಇಟ್ಟಿದ್ದ ದನದ ವಿಮಾ ಕಂಪೆನಿಯ 390078/494658 ನಂಬ್ರದ ಟ್ಯಾಗ್ ಸಹ ಕಳವಾಗಿರುತ್ತದೆ. ಬೈಕ್ ನ್ನು ಹುಡುಕಾಡಿದಲ್ಲಿ ಈ ವರೆಗೆ ಪತ್ತೆಯಾಗದೇ ಇದ್ದು ಯಾರೋ ಕಳ್ಳರು ಬೈಕ್ ನ್ನು   ದಿನಾಂಕ 29/01/2022  ರಂದು  ರಾತ್ರಿ 8:30 ಗಂಟೆಯಿಂದ ದಿನಾಂಕ 30/01/2022 ರಂದು ಬೆಳಿಗ್ಗೆ 11:00 ಗಂಟೆಯ ಮಧ್ಯಾವಧಿಯಲ್ಲಿ  ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳ್ಳತನವಾದ   ಬೈಕ್ ನ ಮೌಲ್ಯ ರೂ 1,10,000/- ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಕ್ರ 30/2022 ಕಲಂ. 379  ಬಾ. ದಂ. ಸಂ. ರಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

 • ಬ್ರಹ್ಮಾವರ:  ಪಿರ್ಯಾದಿದಾರರು ರಘು ಪೂಜಾರಿ(49),ತಂದೆ: ಬೊಗ್ಗು ಪೂಜಾರಿ, ವಾಸ: ಲಕ್ಷ್ಮಿ ನಿವಾಸ ಕೀಳಿಂಜೆ. ಹಾವಂಜೆ ಗ್ರಾಮ ಮತ್ತು ಅಂಚೆ, ಬ್ರಹ್ಮಾವರ ತಾಲೂಕು ಇವರು ದಿನಾಂಕ:30/01/2022 ರಂದು ರಾತ್ರಿ 9:00 ಗಂಟೆಗೆ ಹಾವಂಜೆ ಗ್ರಾಮದ ಕೀಳಿಂಜೆ ಶಾಲೆ ಕ್ರಾಸ್‌ ಬಳಿ ನಿಂತುಕೊಂಡಿರುವಾಗ ಕೊಳಲಗಿರಿ ಕಡೆಯಿಂದ ಕೆಎ-20-ಇಎನ್‌‌-4629 ನೇ ಟಿವಿಎಸ್‌‌‌ ಜುಪಿಟರ್‌‌‌ ದ್ವಿಚಕ್ರ ವಾಹನದಲ್ಲಿ ರಮೇಶನನ್ನು ಹಿಂಬದಿ ಸವರನನ್ನಾಗಿ ಕುಳ್ಳಿರಿಸಿಕೊಂಡು ಸುರೇಶ್‌‌ನು ಸ್ಕೂಟರ್‌‌ನ್ನು ಸವಾರಿ ಮಾಡಿಕೊಂಡು ಕೀಳಿಂಜೆ ಶಾಲೆ ಕ್ರಾಸ್‌‌ ಕಡೆಗೆ ತಿರುಗಲು ಜುಪಿಟ್ರ್‌‌ನ್ನು ನಿಲ್ಲಿಸಿ ಹಾವಂಜೆ ಕಡೆಯಿಂದ ಬರುತ್ತಿದ್ದ ವಾಹನವನ್ನು ಗಮನಿಸುತ್ತಿದ್ದಾಗ, ಹಾವಂಜೆ ಕಡೆಯಿಂದ ಕೊಳಲಗಿರಿ ಕಡೆಗೆ KA-51-G-5199  ನೇ 108 ಆಂಬ್ಯುಲೆನ್ಸ್‌‌‌ ಚಾಲಕ ಹುಚ್ಚಯ್ಯ ಎಂಬವರು ಆಂಬ್ಯುಲೆನ್ಸ್‌‌‌‌‌‌‌ನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುರೇಶನು ನಿಲ್ಲಿಸಿದ್ದ  ಸ್ಕೂಟರ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರು ಸ್ಕೂಟರ್‌‌ ಸಮೇತರಸ್ತೆಗೆ ಬಿದ್ದಿದ್ದು,ಸುರೇಶ್‌‌‌ರವರಿಗೆ ತಲೆಗೆ ತೀವ್ರ ಸ್ವರೂಪದ ಒಳ ಜಖಂ ಹಾಗೂ ಮುಖಕ್ಕೆ ರಕ್ತಗಾಯವಾಗಿರುತ್ತದೆ ಹಾಗೂ ಹಿಂಬದಿ ಸವಾರ ರಮೇಶ ಪೂಜಾರಿಯವರಿಗೆ ಹಣೆ ಹಾಗೂ ಕುತ್ತಿಗೆಯ ಬಳಿ ತರಚಿದ ರಕ್ತಗಾಯವಾಗಿರುತ್ತದೆ.  ಈ ಅಪಘಾತಕ್ಕೆ KA-51-G-5199  ನೇ 108 ಆಂಬ್ಯುಲೆನ್ಸ್‌‌‌ ಚಾಲಕ ಹುಚ್ಚಯ್ಯ ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ. 17/2022 ಕಲಂ 279, 337,338  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕೊಟ: ದಿನಾಂಕ 30/01/2022 ರಂದು ಸಂಜೆ ಸುಮಾರು 5.00 ಗಂಟೆಯ ಸಮಯಕ್ಕೆ ಪಿರ್ಯಾದಿ ಅಮೃತ ಪ್ರಾಯ 35 ವರ್ಷ ಗಂಡ: ಪ್ರಶಾಂತ ವಾಸ: ಲಲಿತಾ ನಿಲಯ  ಕೊಟ ಸಾರ್ವಜನಿಕ ಆಸ್ಪತ್ರೆಯ ಎದುರು ಗಿಳಿಯಾರು ಇವರ ಮಗ ಸೃಜನ್  (12) ಈತನು ಮನೆಯ ಎದುರಿನ ಮೈದಾನದಲ್ಲಿ ಆಟ ಆಡುತ್ತಿದ್ದಾಗ  ಮೈದಾನದ ಬದಿಯಲ್ಲಿ ನಿಲ್ಲಿಸಿದ  KA019364 ನೇ ನೀರಿನ  ಟ್ಯಾಂಕರ್ ನ್ನು ಅದರ ಚಾಲಕ ಪ್ರಕಾಶ ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೆ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ  ಟ್ಯಾಂಕರ್ ಹಿಂಬದಿ ಆಟ ಆಡುತ್ತಿದ್ದ  ಸೃಜನ್ ನಿಗೆ  ತಾಗಿದ್ದು ಆತನ ತೊಡೆಯ ಮೇಲೆ ಟ್ಯಾಂಕರ್  ಹಿಂಬದಿಯ ಚಕ್ರ ಹರಿದಿರುತ್ತದೆ.  ಕೂಡಲೇ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಎಡ ತೊಡೆಯ ಮೂಳೆ ಮುರಿತವಾಗಿರುವುದಾಗಿ ತಿಳಿಸಿರುತ್ತಾರೆ ಈ ಅಪಘಾತಕ್ಕೆ ಟ್ಯಾಂಕರ್ ಚಾಲಕನ ನಿರ್ಲಕ್ಷತನದ ಚಾಲನೆಯೆ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅ.ಕ್ರ  10/2022  ಕಲಂ: 279.337 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ : ಪಿರ್ಯಾದಿ ಶಿವಾನಂದ ಕುಮಾರ್ ಪ್ರಾಯ: 35 ವರ್ಷ, ತಂದೆ: ದಿ ಬಾಬು ಪೂಜಾರಿ ವಾಸ: ನೇರೊಲ್ದಪಲ್ಕೆ, ತೆಳ್ಳಾರ್ ಅಂಚೆ, ದುರ್ಗಾ ಗ್ರಾಮ, ಕಾರ್ಕಳ ಇವರು ದಿನಾಂಕ 30.01.2022 ರಂದು ರಾತ್ರಿ 10.00 ಘಂಟೆಗೆ ಕೆಎ 19 ಇಪಿ 1754 ನೇ ಮೋಟಾರ್ ಸೈಕಲಿನಲ್ಲಿ ಸಹಸವಾರನಾಗಿ ಕುಳಿತುಕೊಂಡು ಸವಾರನಾದ ತನ್ನ ಸಂಬಂಧಿ ನಿತೇಶ ರವರೊಂದಿಗೆ ಕಾರ್ಕಳ ಪೇಟೆಯಿಂದ ತೆಳ್ಳಾರು ಕಡೆಗೆ ಕೋಲದ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಸಮಯ, ತೆಳ್ಳಾರು ಸಂಕದ ಬಳಿ ರಸ್ತೆಗೆ ಅಡ್ಡ ಬಂದ ದನವೊಂದನ್ನು ತಪ್ಪಿಸುವ ಭರದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟ, ಸಹಸವಾರರಾದ ಪಿರ್ಯಾದಿದಾರರ ಬಲಕಾಲಿಗೆ ನೋವುಂಟಾಗಿದ್ದು, ಸವಾರ ನಿತೇಶ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಮನೆಗೆ ಹೋದ ನಂತರ ರಾತ್ರಿ ವೇಳೆ ಪಿರ್ಯಾದಿದಾರರಿಗೆ ನೋವು ಜಾಸ್ತಿಯಾದ ಕಾರಣ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಹೋದಾಗ ಪರೀಕ್ಷಿಸಿದ ವೈದ್ಯರು ಬಲಕಾಲಿನ ಕೋಲು ಕಾಲಿನಲ್ಲಿ ಮೂಳೆ ಮುರಿತವಾಗಿರುತ್ತದೆ ಎಂದು ತಿಳಿಸಿ ಒಳ ರೋಗಿಯಾಗಿ  ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ ಕೆಎ 19 ಇಪಿ 1754 ನೇ ಮೋಟಾರ್ ಸೈಕಲ್ ನ ಸವಾರ ನಿತೇಶ ರವರ ಅತೀ ವೇಗ ಮತ್ತು ಅಜಾರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 21/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಮಟ್ಕ ಜುಗಾರಿ ಪ್ರಕರಣ

 • ಉಡುಪಿ:  ದಿನಾಂಕ 31/01/2022 ರಂದು 17:05 ಗಂಟೆಗೆ ಶ್ರೀ ವಿಜಯ ಎಎಸ್‌ಐ ಉಡುಪಿ ನಗರ ಪೊಲೀಸ್‌ ಠಾಣೆ ಉಡುಪಿ ರವರು ಖಾಸಗಿ ಬೈಕ್‌ನಲ್ಲಿ ಠಾಣಾ ಸಿಬ್ಬಂದಿ ಪಿಸಿ188 ನೇರವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್‌ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ ಬಗ್ಗೆ ತನಗೆ ಖಚಿತ ಮಾಹಿತಿ ದೊರೆತಿದ್ದು ಫಿರ್ಯಾದುದಾರರು ಸದ್ರಿ ಮಾಹಿತಿಯನ್ನು ಠಾಣಾ ಪಿಐ ರವರಿಗೆ ಫೋನ್‌ ಮುಖೇನ ತಿಳಿಸಿ, ಅವರ ಆದೇಶದಂತೆ  ಸದ್ರಿ ಸ್ಥಳಕ್ಕೆ 17:25 ಗಂಟೆಗೆ  ಧಾಳಿ ನಡೆಸಿ,  ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ನಿತಿನ್‌ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 2ನೇ ಆಪಾದಿತ ಅಂಬಾಗಿಲಿನ ಆದರ್ಶ ಬೇಕರಿಯ ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂ 1,530/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1, ಬಾಲ್‌ಪೆನ್‌ ಒಂದು ಮತ್ತು ಆತನ ವಶದಲ್ಲಿದ್ದ ರೂ. 5,000/- ಮೌಲ್ಯದ ವಿವೋ ಕಂಪೆನಿಯ ಮೊಬೈಲ್-1ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 18/2022, ಕಲಂ: 78(1)(3) KP Act ರಂತೆ ಪ್ರಕರಣ ದಾಖಲಿಸಲಾಗಿದೆ. 
 • ಬೈಂದೂರು: ದಿನಾಂಕ: 31/01/2022  ರಂದು ಫಿರ್ಯಾದಿ ಸಂತೋಷ್ ಎ ಕಾಯ್ಕಿಣಿ  ಪೊಲೀಸ್ ವೃತ್ತನೀರೀಕ್ಷಕರು ಬೈಂದೂರು ಇವರು ಇಲಾಖಾ ಜೀಪು ನಂಬ್ರ KA 20 G 506 ನೇದರಲ್ಲಿ ಸಿಬ್ಬಂದಿಗಳೊಂದಿಗೆ  ರೌಂಡ್ಸ ಕರ್ತವ್ಯದಲ್ಲಿರುವಾಗ  ಸಮಯ ಸುಮಾರು 17:30 ಗಂಟೆಗೆ ಬಾತ್ಮಿದಾರರೊಬ್ಬರು ದೂರವಾಣಿ ಕರೆಮಾಡಿ ಉಪ್ಪುಂದ ಗ್ರಾಮದ ಪೂರ್ಣಿಮಾ ವೈನ್ ಶಾಪ್ ಹಿಂಬದಿಯ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ನೀಡಿದ ಮೇರೆಗೆ ಪಿರ್ಯಾದುದಾರರು ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಮೇಲಿನ  ಸ್ಥಳಕ್ಕೆ  ಹೋಗಿ  ಮರೆಯಲ್ಲಿ ನಿಂತು ಗುಪ್ತವಾಗಿ  ನೋಡಲಾಗಿ ಕೆಲವು ವ್ಯಕ್ತಿಗಳು  ನೆಲದ ಮೇಲೆ ದಿನಪತ್ರಿಕೆಯನ್ನು ಹಾಸಿಕೊಂಡು ಅದರಲ್ಲಿ ಓರ್ವನು ತನ್ನ ಕೈಯಲ್ಲಿರುವ ಇಸ್ಪೀಟ್ ಎಲೆಗಳನ್ನು ಒಂದೊದಾಗಿ ದಿನಪತ್ರಿಕೆಯ ಮೇಲೆ ಎರಡು ಭಾಗಗಳಾಗಿ ಹಾಕುತ್ತಿದ್ದು ಉಳಿದವರು ಅಂದರ 50 ರೂಪಾಯಿ, ಬಾಹರ್  100 ರೂಪಾಯಿ ಎಂದು ಹೇಳುತ್ತಾ ಹಣವನ್ನು ಪಣವಾಗಿರಿಸಿಕೊಂಡು ಜೂಜಾಟ ಆಡುತ್ತಿರುವುದು ಖಚಿತಪಡಿಸಿಕೊಂಡು 18:20 ಗಂಟೆಗೆ ಸುತ್ತುವರಿದು ದಾಳಿ ನಡೆಸಿ  5 ಜನರನ್ನು ಹಿಡಿದುಕೊಂಡಿದ್ದು ಇನ್ನುಳಿದವರು ಓಡಿಹೋಗಿದ್ದು,ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪಿಗಳಾದ 1] ಕೃಷ್ಣ ಖಾರ್ವಿ 2] ಜಟ್ಟ ದೇವಾಡಿಗ,3] ಲಕ್ಷ್ಮಣ ಖಾರ್ವಿ 4] ವಸಂತ ದೇವಾಡಿಗ 5]  ಕೇಶವ ಖಾರ್ವಿ ರವರುಗಳನ್ನು ವಶಕ್ಕೆತೆಗೆದುಕೊಂಡು ಆಪಾದಿತರು ಇಸ್ಪೀಟ್ ಜುಗಾರಿ ಆಟ ಆಡಲು ಉಪಯೋಗಿಸಿದ ಹಳೆಯ ದಿನಪತ್ರಿಕೆ, 52 ಇಸ್ಪೀಟ್ ಎಲೆ ಮತ್ತು ನಗದು ರೂ 3600 /-  ನ್ನು   18:20 ಗಂಟೆಯಿಂದ 19:15 ಗಂಟೆಯ ತನಕ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು ಆರೋಪಿ ಮತ್ತು ಸ್ವಾಧೀನಪಡಿಸಿಕೊಂಡ ಸ್ವೊತ್ತುಗಳೊಂದಿಗೆ 20:20 ಗಂಟೆಗೆ ಠಾಣೆಗೆ ಬಂದು ಆರೋಪಿಗಳ ವಿರುದ್ದ  ಕಾನೊನು ಕ್ರಮ ಜರುಗಿಸುವರೇ ವರದಿ ನೀಡಿರುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 31/2022 ಕಲಂ. 87 KP ACT ರಂತೆ ಪ್ರಕರಣ ದಾಖಲಿಸಲಾಗಿದೆ.  

ಇತರ ಪ್ರಕರಣ:

 • ಕುಂದಾಪುರ: ಪಿರ್ಯಾದಿ ಹೆಲೆನ್ ಮೊರಿನ್ ರೆಬೆಲ್ಲೋ, ಪ್ರಾಯ: 68 ವರ್ಷ, ಗಂಡ: ವಾಲ್ಟರ್ ಪಿಂಟೋ, ವಾಸ: 276/11, ಡಾಯ್ಗ್ ಫೆರಿ ರಸ್ತೆ, ಖಾರ್ವಿಕೇರಿ ಕುಂದಾಪುರ ಕಸಬಾ ಗ್ರಾಮ, ಇವರಿಗೆ ಕುಂದಾಪುರ ಕಸಬಾ ಗ್ರಾಮದ 97/5ಎ ಸರ್ವೇ ನಂಬರಿನ 12 ಸೆಂಟ್ಸ್ ಜಾಗವನ್ನು ಅವರ ತಾಯಿ ಬಳುವಳಿಯಾಗಿ ನೀಡಿದ ಜಾಗದಲ್ಲಿ ಪಿರ್ಯಾದುದಾರರು ವಾಸವಾಗಿದ್ದು ,ಸದ್ರಿ ಜಾಗದ ವಿಚಾರವಾಗಿ ಪಿರ್ಯಾದುದಾರರಿಗೆ ಹಾಗೂ ಆಪಾದಿತ ಉಲ್ಲಾಸ್ ಅಲ್ಮೇಡಾ  ಎಂಬಾತನಿಗೂ ತಕರಾರಿದ್ದು  ದಿನಾಂಕ 31-01-2022 ರಂದು   16:00 ಗಂಟೆಗೆ ಪಿರ್ಯಾದುದಾರರ ಜಾಗದಲ್ಲಿನ ಒಣಗಿದ ತೆಂಗಿನಮರ ಕಡಿಯುವ ಸಮಯ  ಆಪಾದಿತನು  ಪಿರ್ಯಾದುದಾರರ ಮನೆಗೆ ಅಕ್ರಮ ಪ್ರವೇಶ  ಮಾಡಿ ಪಿರ್ಯಾದುದಾರರ ರಟ್ಟೆಯನ್ನು ಹಿಡಿದೆಳೆದು ಕೈಯಿಂದ ಹೊಡೆದು, ಪಿರ್ಯಾದುದಾರರನ್ನು ಉದ್ದೇಶಿಸಿ ಸದ್ರಿ ಜಾಗವು ನನಗೆ ಸೇರಿದ್ದು ಈ ಜಾಗದಲ್ಲಿ ವಾಸವಿದ್ದರೆ  ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಹಲ್ಲೆಯಿಂದಾಗಿ ಪಿರ್ಯಾದುದಾರರಿಗೆ ಒಳನೋವು ಉಂಟಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 09/2022 ಕಲಂ: 447, 354, 323, 506 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಪಡುಬಿದ್ರಿ: ಪಿರ್ಯಾದುದಾರರು ಮನ್ಸೂರ್ ಕೆ, ಪ್ರಾಯ: 30 ವರ್ಷ, ತಂದೆ: ದಿ. ಟಿ ಮಹಮ್ಮದ್ , ವಾಸ: ಅನ್ಸಾರ್ ಮಂಜಿಲ್, ಕಂಚಿನಡ್ಕ, ಪಡುಬಿದ್ರಿ, ನಡ್ಸಾಲು ಗ್ರಾಮ ಇವರು ಪಡುಬಿದ್ರಿಯಲ್ಲಿ ಎಂ.ಎಸ್.ಫ್ರೂಟ್ಸ್ ಅಂಡ್ ವೆಜಿಟೆಬಲ್ಸ್ ಮತ್ತು ಎಂ.ಎಸ್. ಗೂಡ್ಸ್ ಟ್ರಾನ್ಸ್‌‌ಪೋರ್ಟ್‌ ಇದರ ಮಾಲಕರಾಗಿದ್ದು, ಅವರು ದಿನಾಂಕ:31.01.2022 ರಂದು 20:00 ಗಂಟೆಗೆ  ದಿನದ ವ್ಯಾಪಾರ ವಹಿವಾಟು ಮುಗಿಸಿ ಅವರ ದ್ವಿಚಕ್ರವಾಹನದಲ್ಲಿಮನೆಗೆ ಹೋಗುತ್ತಿರುವಾಗ, ಎರಡು ಕಾರು ಮತ್ತು ಎರಡು ರಿಕ್ಷಾಗಳಲ್ಲಿ ಬಂದ ಅರೋಪಿತರು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು, ಕಂಚಿನಡ್ಕ ರುದ್ರಭೂಮಿಗೆ ಹೋಗುವ ರಸ್ತೆಯಲ್ಲಿ ರಾಜ್ಯ ಹೆದ್ದಾರಿಯಿಂದ ಸುಮಾರು 200 ಮೀಟರ್ ದೂರದಲ್ಲಿ  ಪಿರ್ಯಾದಿದಾರರ ವಾಹನವನ್ನು ಅಡ್ಡಗಟ್ಟಿ, ಆರೋಪಿತರೆಲ್ಲರೂ ಪಿರ್ಯಾದಿದಾರರನ್ನು ಸುತ್ತುವರಿದಾಗ, ಫಿರೋಜ್‌‌ ಎಂಬಾತನು ಆತನ ಸೊಂಟದ ಬಳಿಯಿಂದ ಪಿಸ್ತೂಲನ್ನು ಹೊರ ತೆಗೆದು ಅಬ್ದುಲ್ ಅಜೀಜ್‌‌  ಕಾಟಿಪಳ್ಳ ಎಂಬಾತನಿಗೆ ನೀಡಿದ್ದು, ಆತನು ಪಿಸ್ತೂಲನ್ನು ಪಿರ್ಯಾದಿದಾರರ ತಲೆಗೆ ಗುರಿಯಾಗಿಸಿ, ಹರಿತವಾದ ಲಾಂಗನ್ನು ಹಿಡಿದು ಬೆದರಿಸಿದ್ದು, ಇತರರು ಕೊಲ್ಲುವ ಉದ್ದೇಶದಿಂದ ತಲವಾರು, ಚಾಕು, ಕಬ್ಬಿಣದ ರಾಡು, ದೊಣ್ಣೆಯಿಂದ ಪಿರ್ಯಾದಿದಾರರ ಕಾಲಿಗೆ, ಹೊಟ್ಟೆ, ಎದೆಯ ಭಾಗಕ್ಕೆ ಹಲ್ಲೆ ನಡೆಸಿದ ಪರಿಣಾಮ ಮನ್ಸೂರ್‌‌ನ ತಲೆ ಮತ್ತು ಕಾಲಿಗೆ ತೀವ್ರ ಗಾಯ ನೋವು ಉಂಟಾಗಿರುತ್ತದೆ. ನಂತರ ಅಬ್ದುಲ್ ಅಜೀಜ್‌ ಕಾಟಿಪಳ್ಳ ಈತನು ರಿವಾಲ್ವಾರ್‌ನಿಂದ ಪಿರ್ಯಾದಿದಾರರ ತಲೆಗೆ ಹೊಡೆದು, ಅವರುಗಳು ಬಂದಿದ್ದ ಕಾರಿನಲ್ಲಿ ಪಿರ್ಯಾದಿದಾರರನ್ನು ಕಿಡ್ನಾಪ್ ಮಾಡಲು ಕಾರಿನ ಒಳಗೆ ದೂಡಿ ಹಾಕಿ ಕುಳ್ಳಿರಿಸಿ, ಮನ್ಸೂರ್‌‌ನಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೂರು ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿ, ಆರೋಪಿತರೆಲ್ಲರೂ ಕಾರಿನ ಹೊರಗೆ ಒಬ್ಬರಿಗೊಬ್ಬರು ಹಣವನ್ನು ಹಂಚಿಕೊಳ್ಳುತ್ತಿರುವಾಗ, ಪಿರ್ಯಾದಿದಾರರು ಅವರಿಂದ ತಪ್ಪಿಸಿಕೊಂಡು ಓಡಿಹೋಗಿ, ಯತೀಶ್ ಎಂಬುವರ ಸಹಾಯದಿಂದ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 14/2022 ಕಲಂ: 143, 147, 148, 341, 506, 324, 342, 307, 395 ಜೊತೆಗೆ 149 ಐಪಿಸಿ. ಮತ್ತು ಕಲಂ: 27 ಶಸ್ತ್ರಗಳ ಅಧಿನಿಯಮ ದಂತೆ ಪ್ರಕರಣ ದಾಖಲಿಸಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದುದಾರರಾದ ಶ್ಯಾಮಲ ದೇವಾಡಿಗ ಪ್ರಾಯ:30 ವರ್ಷಗಂಡ:ಗಣೇಶ್ ದೇವಾಡಿಗ ವಾಸ:ಕುರುವಾಲ್ ಮನೆ ಕಂಬದಕೋಣೆ ಗ್ರಾಮ ಬೈಂದೂರು ಇವರ ತಂದೆ ಮಂಜಯ್ಯ ದೇವಾಡಿಗ ಪ್ರಾಯ:61 ವರ್ಷರವರು  ಪಡುವರಿ ಗ್ರಾಮದ ವಿರೂಪಾಕ್ಷಿ ಹುಣ್ಸೆಮನೆ ಎಂಬಲ್ಲಿ  ತನ್ನ  ತಮ್ಮನಾದ ಗೋವಿಂದ ದೇವಾಡಿಗ ಎಂಬವರ  ಜೊತೆಯಲ್ಲಿ  ವಾಸ ಮಾಡಿಕೊಂಡಿದ್ದು, ಮೃತರು   ಈ ದಿನ ದಿನಾಂಕ 31-01-2022 ರಂದು  ಬೆಳಿಗ್ಗೆ 7:00 ಗಂಟೆಗೆ ಕೆಲಸಕ್ಕೆಂದು ಹೋದವರು ಕೆಲಸವಿಲ್ಲದ ಕಾರಣ  ವಾಪಾಸ್ಸು ಮನೆಗೆ ಬರಲು  ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ  1:45  ಗಂಟೆಯ ಮಧ್ಯಾವಧಿಯಲ್ಲಿ ಪಡುವರಿ ಗ್ರಾಮದ ಸುಮನಾವತಿ ಹೊಳೆಯನ್ನು ದಾಟುತ್ತಿರುವ ಸಮಯ ಆಯತಪ್ಪಿ ಕಾಲುಜಾರಿ ಹೊಳೆಯಲ್ಲಿ ಉಸಿರುಕಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 03/2022 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


   
ಇತ್ತೀಚಿನ ನವೀಕರಣ​ : 01-02-2022 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080