ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಬ್ರಹ್ಮಾವರ: ದಿನಾಂಕ: 01/02/2022 ರಂದು ಬೆಳಗಿನ ಜಾವ ಸುಮಾರು 4-30 ಗಂಟೆಗೆ ಪಿರ್ಯಾದಿ ರಾಘವೇಂದ್ರ ಇವರ ಮನೆಯ ನಾಯಿ ಬೊಗಳುವುದನ್ನು ಕೇಳಿ ಮನೆಯ ಹೊರಗೆ ಲೈಟ್‌ ಹಾಕಿ ಪಿರ್ಯಾದುದಾರರು ಹೊರಬಂದಾಗ ಮನೆಯ  ಎದುರಿಗೆ ಇರುವ ದನದ ಕೊಟ್ಟಿಗೆಯಲ್ಲಿ  ಕಟ್ಟಿ ಹಾಕಿದ್ದ 4 ದನಗಳ ಪೈಕಿ ಒಂದು ದನದ ಬಳಿ ಮರೆಯಲ್ಲಿ ಇಬ್ಬರು ಹೋಗಿ ದನದ ಕುತ್ತಿಗೆಯ ಹಗ್ಗವನ್ನು ಕತ್ತಲೆಯಲ್ಲಿ ಬಿಚ್ಚುತ್ತಿರುವುದು ಕಂಡು ಬಂತು.ಪಿರ್ಯಾದುದಾರರು ಬೊಬ್ಬೆ ಹೊಡೆದಾಗ ಆ ವ್ಯಕ್ತಿಗಳು ಕೊಟ್ಟಿಗೆಯಿಂದ ಹೊರಗೆ ಹೋಗಿ ಕೊಟ್ಟಿಗೆ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಚಾಲನಾ  ಸ್ಥಿತಿಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿರುತ್ತಾರೆ,.ಇನ್ನೋರ್ವ ವ್ಯಕ್ತಿ ಕಾರಿನ ಚಾಲನಾ ಸೀಟಿನಲ್ಲಿ ಕುಳಿತಿರುವುದು ಕಂಡು ಬಂತು. ಆ ಮೂವರು ವ್ಯಕ್ತಿಗಳು ಸುಮಾರು 30-35 ವರ್ಷ ಪ್ರಾಯದ ವರಾಗಿರುತ್ತಾರೆ.ಪಿರ್ಯಾದಿದಾರರು ತನ್ನ ಸ್ಕೂಟಿಯಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಬಬ್ಬು ಸ್ವಾಮಿ ದೇವಸ್ಥಾನ ನಂದಿಗುಡ್ಡೆ ಕ್ರಾಸ್‌‌ವರೆಗೆ ಬಂದು ಕಾರಿನ ನೊಂದಣಿ ನಂಬ್ರವನ್ನು ನೋಡಿದ್ದು,ನೊಂದಣಿ ನಂಬ್ರ ಕೆಎ – 04 - ಎಂಕೆ- 744ನೇ ಮಾರುತಿ ಕಂಪೆನಿಯ ಕಾರು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 18/2022 ಕಲಂ 379, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಹೆಂಗಸು ಕಾಣೆ ಪ್ರಕರಣ

  • ಅಜೆಕಾರು: ಸುನಿತಾ (29 ವರ್ಷ) ಳು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 30-01-2022 ರಂದು ಭಾನುವಾರ ಬೆಳಿಗ್ಗೆ 09:00  ಗಂಟೆಯ ಸುಮಾರಿಗೆ ಸುನಿತಾಳು ಕಡ್ತಲ ಪೇಟೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದವಳು ಸಂಜೆಯವರೆಗೂ ಮನೆಗೆ ಬಾರದ ಕಾರಣ ಮನೆಯವರೆಲ್ಲರೂ ಕಡ್ತಲ ಪೇಟೆಯಲ್ಲಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಎಲ್ಲಿಯೋ ಸಂಬಂಧಿಕರ ಮನೆಗೆ ಹೋಗಿರಬಹುದೆಂದು ನಾಳೆ ಬರಬಹುದು ಎಂದು ತಿಳಿದು ವಾಪಾಸ್ಸು ಮನೆಗೆ ಬಂದಿದ್ದು,  ಇದುವರೆಗೂ ಮನೆಗೆ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2022 ಕಲಂ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

 ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪ್ರಶಾಂತ ದೇವಾಡಿಗ (31ವರ್ಷ ) ರವರು ಊದು/ಡೋಲು ಬಾರಿಸುವ ಕೆಲಸ ಮಾಡಿಕೊಂಡಿದ್ದು ಅವರು ಪೀಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆಯನ್ನು ಮಾಡಿಸಿದರೂ ಗುಣಮುಖರಾಗಿರುವುದಿಲ್ಲ. ಇದೇ ವಿಚಾರದಲ್ಲಿ ಮನನೊಂದು ದಿನಾಂಕ:31/01/2022 ರಂದು ರಾತ್ರಿ ಸುಮಾರು 10:45 ಗಂಟೆಗೆ ಹೆಬ್ರಿ ಗ್ರಾಮದ ದೇವಸ್ಥಾನಬೆಟ್ಟು ಕೆಳಪೇಟೆ ಎಂಬಲ್ಲಿರುವ ಅವರ ಚಿಕ್ಕಪ್ಪನ ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೋಟ: ಗಣೇಶ ಆಚಾರ್ಯ ಪ್ರಾಯ (49) ರವರು ರಿಕ್ಷಾ ಚಾಲಕ ಕೆಲಸ ಮಾಡಿಕೊಂಡಿದ್ದು ಸುಣ್ಣಾರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 31/01/2022 ರಂದು  ರಾತ್ರಿ 10.00  ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದವರು ದಿನಾಂಕ 01/02/2022 ರಂದು ಬೆಳಿಗ್ಗೆ 07.00 ಗಂಟೆಗೆ ನೋಡಿದಲ್ಲಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ಕೂಡಲೇ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಬೆಳಿಗ್ಗೆ 08.45 ಗಂಟೆಗೆ ಪರೀಕ್ಷಿಸಿದ ವೈದ್ಯರು ಹೃದಯಾಘಾತವಾಗಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 01-02-2022 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080