ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಮೇಘರಾಜ್ (27), ತಂದೆ: ಎ.ಕೆ ರಾಜ್, ವಾಸ: ಶ್ಯಾಂ ಕಂಪೌಂಡ್ ಶ್ಯಾರ್ಕಲ್ , ಸಂತೆಕಟ್ಟೆ ಅಂಚೆ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 30/01/2021 ರಂದು ರಾತ್ರಿ  7:00 ಗಂಟೆಗೆ  ತನ್ನ ತಂದೆ ಎ.ಕೆ. ರಾಜ್ ರವರೊಂದಿಗೆ ಪುತ್ತೂರು ಗ್ರಾಮದ ಅಂಬಾಗಿಲಿನಲ್ಲಿರುವ ಮಿಲಾಗ್ರಿಸ್ ಸರ್ವಿಸ್ ಸೆಂಟರ್ ಎದುರು ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಬದಿಯಲ್ಲಿ  ರಸ್ತೆ ದಾಟಲು ನಿಂತಿರುವಾಗ KA-19 L-6242 ನೇ ಮೋಟಾರ್‌ಸೈಕಲ್‌ಸವಾರ  ಗಿರೀಶ್ ಚಂದ್ರ ಆರ್  ತನ್ನ  ಮೋಟಾರು ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ತಂದೆ ಎ.ಕೆ. ರಾಜ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದ್ದು ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2021  ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 31/01/2021 ರಂದು ಪಿರ್ಯಾದಿದಾರರಾದ ಟಿ. ಅಶ್ವಿನಿ ಪಿ. ಪೈ (41), ಗಂಡ: ಟಿ. ಪ್ರಶಾಂತ್ ಪೈ, ವಾಸ: ಪ್ಲಾಟ್ ನಂಬ್ರ 208, ಕಲ್ಕೂರ್‌ಕೃಷ್ಣ, ಕುಂಜಿಬೆಟ್ಟು, ಶಿವಳ್ಳಿ ಗ್ರಾಮ. ಉಡುಪಿ ತಾಲೂಕು ಇವರ  ತಂದೆ ಯು.ಪ್ರೇಮಾನಂದ ಶೇಟ್ ರವರು ಮದ್ಯಾಹ್ನ 12:00 ಗಂಟೆಗೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ  ಕಲ್ಸಂಕ ಗುಂಡಿಬೈಲು ರಸ್ತೆಯಲ್ಲಿರುವ ವಿಜಯತಾರಾ ಹೋಟೆಲ್ ಮುಂಭಾಗ, ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ KA-20-EP- 6674 ನೇ ಮೋಟಾರು ಸೈಕಲ್ ಸವಾರ ಶ್ರೀಧರ ಎಂಬಾತ ಜೋನ್ ಎಂಬುವವರನ್ನು ಹಿಂಬದಿ ಕುಳ್ಳಿರಿಸಿಕೊಂಡು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ವಿಜಯತಾರಾ ಹೋಟೇಲ್ ಮುಂಭಾಗ ರಸ್ತೆ ದಾಟಲು ನಿಂತಿದ್ದ ಯು. ಪ್ರೇಮಾನಂದ ಶೇಟ್ (74) ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021  ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ 

  • ಕುಂದಾಪುರ: ಪಿರ್ಯಾದಿದಾರರಾದ ರಮೇಶ್ ಪೂಜಾರಿ (50), ತಂದೆ: ನಾರಾಯಣ, ವಾಸ: ನಿಶ್ಮಿತಾ ನಿಲಯ, ಕಲ್ಲಾಗರ, ಮಂಗಲ್ ಪಾಂಡ್ಯ ರಸ್ತೆ, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಇವರ ಅಕ್ಕ ಶಾರದಾ(57) ಎಂಬುವವರು ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಹಾಗೂ ಗಂಡ ಮೃತಪಟ್ಟ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ದಿನಾಂಕ 30/01/2021 ರ 16:00 ಗಂಟೆಗೆ ಮನೆಯಿಂದ ಹೊರಗಡೆ ಹೋಗುತ್ತೇನೆಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೇ ಇದ್ದು  ಈ ಬಗ್ಗೆ  ಹುಡುಕಲಾಗಿ 31-01-2021ರಂದು 09:00 ಗಂಟೆಗೆ ಶಾರದಾ ರವರ ಮೃತ ದೇಹವು ಸಂಗಂ ಡಂಪಿಂಗ್ ಯಾರ್ಡ್ ಬಳಿಯ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿರುತ್ತದೆ.  ಶಾರದಾ ರವರು ದಿನಾಂಕ 30/01/2021 ರ 16:00 ಗಂಟೆಯಿಂದ 31/01/2021ರಂದು 09:00 ಗಂಟೆಯ ನಡುವಿನ ವೇಳೆಯಲ್ಲಿ  ಪಂಚಗಂಗಾವಳಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 06/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಗಂಗೊಳ್ಳಿ:  ಪಿರ್ಯಾದಿದಾರರಾದ ರಂಜಿತ್ ಶೆಟ್ಟಿ (28), ತಂದೆ: ಸುಭಾಷ್ ಶೆಟ್ಟಿ, ವಾಸ: ಯಳೂರು ಬಾಳೆ ಮನೆ, ನಾವುಂದರ ಮನೆ, ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ದೊಡ್ಡಪ್ಪ ಶಂಕರ ಶೆಟ್ಟಿ(56) ಎಂಬುವವರು ದಿನಾಂಕ 16/01/2021 ರಂದು ರಾತ್ರಿ 8:00 ಗಂಟೆಗೆ ಹಕ್ಲಾಡಿ ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಿಷ ಜಂತು ಕಚ್ಚಿದ್ದು, ಚಿಕಿತ್ಸೆ ಬಗ್ಗೆ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 31/01/2021 ರಂದು ಬೆಳಿಗ್ಗೆ 8:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ 

  • ಕಾರ್ಕಳ: ಪಿರ್ಯಾದಿದಾರರಾದ ಧೀರಜ್ ಜೈನ್ (45), ತಂದೆ: ದಿ.ಯುವರಾಜ್ ಜೈನ್, ವಾಸ: ಸೌಟಬೆಟ್ಟು  ಮನೆ ಮಾಳ ಚೌಕಿ ಮಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಮನೆಯಲ್ಲಿ ಕುಟುಂಬಸ್ಥರ ಭೂತದ ಗುಡಿ ನವೀಕರಣ ಮಾಡುತ್ತಿದ್ದು,  ದಿನಾಂಕ 30/01/2021 ರಂದು ಮಧ್ಯಾಹ್ನ 14:00 ಗಂಟೆಗೆ  ಪಿರ್ಯಾದಿದಾರರ ಮಾವನ ಮಗನಾದ ಶೀತಲ್ ಜೈನ್ ಗುಡಿಯ ಬಳಿ ಇರುವ ಬಟ್ಟೆ ತೊಳೆಯುವ ಕಲ್ಲು ತೆಗೆಯುವ ವಿಚಾರವಾಗಿ ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಕುತ್ತಿಗೆಯನ್ನು ಹಿಡಿದು ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೂಡಿದ್ದು ಅಲ್ಲದೇ ಜೀವ ಬೆದರಿಕೆ ಹಾಕಿರುವುದಾಗಿದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 448, 323,504 ,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಪಿರ್ಯಾದಿದಾರರಾದ ಶೀತಲ್ ಕುಮಾರ ಎಂ   ಜೈನ್ (40), ತಂದೆ: ಭುಜಬಲ ಹೆಗ್ಡೆ, ವಾಸ: ಚಂದ್ರ ನಿಲಯ ಹೌಸ್ ಮಾಳ ಚೌಕಿ ಮಾಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಚೌಕಿ ಸೌಟಬೆಟ್ಟು ಮನೆಯಲ್ಲಿ ಕುಟುಂಬಸ್ಥರ ಭೂತದ ಗುಡಿ ನವೀಕರಣ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈ ಬಗ್ಗೆ ದಿನಾಂಕ 30/01/2021 ರಂದು ಮಧ್ಯಾಹ್ನ 14:00 ಗಂಟೆಗೆ  ಪಿರ್ಯಾದಿದಾರರು ಸ್ಥಳಕ್ಕೆ ಹೋದಾಗ ಗುಡಿಯ ಬಳಿ ಇರುವ ಬಟ್ಟೆ ತೊಳೆಯುವ ಕಲ್ಲು ತೆಗೆಯುವ ವಿಚಾರವಾಗಿ  ಅವರ  ಅತ್ತೆಯೊಂದಿಗೆ ಮಾತುಕತೆ ನಡೆದಿದ್ದು, ನಂತರ ಪಿರ್ಯಾದಿದಾರರು ವಾಪಸು ಬರುತ್ತಿದ್ದಾಗ ಅತ್ತೆ  ಮಗನಾದ ಧೀರಜ್ ಜೈನ್  ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ  ಮಾಡಿ ಜೀವ ಬೆದರಿಕೆ ಹಾಕಿರುವುದಾಗಿದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 341, 323,504 ,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಬೈಂದೂರು: ದಿನಾಂಕ 30/01/2021 ರಂದು ಪಿರ್ಯಾದಿದಾರರಾದ ಚೇತನಾ ಕೆ ಶೆಟ್ಟಿ (40). ಗಂಡ:ಕಿಶೋರ್  ಕುಮಾರ್ ಶೆಟ್ಟಿ, ವಾಸ: ದೇಸ್ತ ಮನೆ, 11ನೇ ಉಳ್ಳೂರು ಬೈಂದೂರು ಇವರು ಮನೆಯ ಹತ್ತಿರ ಇರುವ ಅವರ ತೋಟದ ಸರ್ವೆ ನಂ 115/1ಬಿ ರ ಸ್ಥಳಕ್ಕೆ ಬೈಂದೂರು ಭೂ ಮಾಪನಾ ಅಧಿಕಾರಿಯವರು ಗಡಿ ಹದ್ದು ಬಸ್ತಿಗೆ ಬಂದಿದ್ದು ಆಗ ಪಿರ್ಯಾದುದಾರರು ಆಕ್ಷೇಪಿಸಿದ್ದು ಭೂಮಾಪನಾ ಅಧಿಕಾರಿಯವರು ವಾಪಾಸು ಹೋಗಿದ್ದು  ಆರೋಪಿತರಾದ ವಿರೇಂಧ್ರ ಶೆಟ್ಟಿ , ಪ್ರಕಾಶ ಸುಮತಿ ಯಾನೆ ಲಕ್ಷ್ಮಿ ಹಾಗೂ ಇತರ 5 ಮಂದಿ ಸೇರಿ ಬೆಳಗ್ಗೆ 11-15 ಗಂಟೆಗೆ ಪಿರ್ಯಾದುದಾರರ ಜಾಗಕ್ಕೆ  ಅತಿಕ್ರಮಣ ಪ್ರವೇಶ ಮಾಡಿ ಬೇಲಿಯನ್ನು ನಿರ್ಮಿಸುತ್ತಿರುವಾಗ ಪಿರ್ಯಾದುದಾರರು ಆಕ್ಷೇಪಿಸಿದ್ದಕ್ಕೆ ಆರೋಪಿತರಾದ  ವಿರೇಂದ್ರ ಶೆಟ್ಟಿ, ಸುಮತಿ ಯಾನೆ ಲಕ್ಷ್ಮಿ, ಪ್ರಕಾಶ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು  ಜೀವ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ: 143, 447, 504, 506  ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಶಂಕರನಾರಾಯಣ: ದಿನಾಂಕ 31/01/2021 ರಂದು ಪಿರ್ಯಾದಿದಾರರಾದ ಶ್ರೀಮತಿ  ಗುಣವತಿ  ಹೆಗ್ಡೆ (65), ಗಂಡ: ಜಯಪ್ರಕಾಶ  ಹೆಗ್ಡೆ,  ವಾಸ: ತೊಂಬತ್ತು  ಹೆಂಗವಳ್ಳಿ  ಗ್ರಾಮ ಕುಂದಾಪುರ ತಾಲೂಕು ಇವರ ಕುಮ್ಕಿ ಜಾಗದಲ್ಲಿ ಜೆಸಿಬಿ  ಮೂಲಕ  ಆವರಣ ಮಾಡುತ್ತಿರುವಾಗ ಆರೋಪಿಗಳಾದ  1. ಮೋಹನ  ಹೆಗ್ಡೆ,  ತಂದೆ: ನರಸಿಂಹ  ಹೆಗ್ಡೆ,  ವಾಸ:  ಹೆಂಗವಳ್ಳಿಗ್ರಾಮ  ಕುಂದಾಪುರ   ತಾಲೂಕು, 2. ವಸುಂದರ ಹೆಗ್ಡೆ,   ತಂದೆ: ನರಸಿಂಹ  ಹೆಗ್ಡೆ,  ವಾಸ:  ಹೆಂಗವಳ್ಳಿ ಗ್ರಾಮ,  ಕುಂದಾಪುರ ತಾಲೂಕು, 3.ಶಶಿಕಾಂತ ಹೆಗ್ಡೆ,  ತಂದೆ: ಭಾಸ್ಕರ  ಹೆಗ್ಡೆ,  ವಾಸ:  ಹೆಂಗವಳ್ಳಿ ಗ್ರಾಮ ಕುಂದಾಪುರ   ತಾಲೂಕು ಇವರು ಜಾಗಕ್ಕೆ ಬಂದು ಪಿರ್ಯಾದಿದಾರರನ್ನು ಕೈಯಿಂದ  ದೂಡಿ ದೊಣ್ಣೆಯಿಂದ  ಸಹ  ಹಲ್ಲೆ  ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ   ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021  ಕಲಂ: 341 ,323, 324 504,506, 354 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ..

ಇತ್ತೀಚಿನ ನವೀಕರಣ​ : 02-02-2021 11:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080