ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 31/01/2021 ರಂದು ರಾತ್ರಿ ಪಿರ್ಯಾದಿದಾರರಾದ ಅಯೂಬ್ (45), ತಂದೆ: ಪಿ.ಎನ್ ಮಹಮ್ಮದ್, ವಾಸ: ಫಾತೀಮ ಮಂಜಿಲ್, 17ನೇ ಅಡ್ಡ ರಸ್ತೆ, ಮೂಡುತೋನ್ಸೆ, ನೇಜಾರು ಗ್ರಾಮ, ಉಡುಪಿ ತಾಲೂಕು ಇವರು ಮನೆಯಲ್ಲಿ ಇರುವಾಗ ರಾತ್ರಿ 11:15 ಗಂಟೆಗೆ ಅವರ ಸ್ನೇಹಿತರೊಬ್ಬರು ಫೋನ್ ಕರೆ ಮಾಡಿ ಅವರ ಪರಿಚಯದ ಆಸೀಫ್ ಎಂಬುವವರಿಗೆ ಉಪ್ಪೂರು ಸೇತುವೆಯ ಮೇಲೆ ರಸ್ತೆ ಅಪಘಾತವಾಗಿರುವ ವಿಷಯ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಬಂದು ನೋಡಿದಾಗ ಉಪ್ಪೂರು ಸೇತುವೆಯ ಬಳಿ ಆಸೀಪ್‌  (19) ನು ಬಿದ್ದುಕೊಂಡಿದ್ದು, ಆತನ ತಲೆ, ಮುಖ ಹಾಗೂ ಭುಜಕ್ಕೆ ತೀವ್ರಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುವುದು ಕಂಡು ಬಂದಿರುತ್ತದೆ.  ಅಲ್ಲಿಯೇ ಬಳಿಯಲ್ಲಿ ಸೇತುವೆಯ ಮೇಲೆ ಸ್ಕೂಟರ್ ಒಂದು ಬಿದ್ದು ಕೊಂಡಿರುತ್ತದೆ. ನಂತರ ಪಿರ್ಯಾದಿದಾರರು ಅಲ್ಲಿಯೇ ಇದ್ದ ಜನರಲ್ಲಿ ವಿಚಾರಿಸಿದಾಗ ಆಸೀಫ್ ನು ಆತನ KA-20-EM-7510 ನೇ ನಂಬ್ರದ ಹೊಂಡಾ ಆಕ್ಟಿವ್ ಸ್ಕೂಟರ್ ನ್ನು ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಬಂದು ರಾತ್ರಿ 11:00 ಗಂಟೆಯ ಸಮಯಕ್ಕೆ ಉಪ್ಪೂರು ಗ್ರಾಮದ, ಉಪ್ಪೂರು ಸೇತುವೆ ಬಳಿ ಅಜಾಗರೂಕತೆಯಿಂದ ಚಲಾಯಿಸಿ ಆತನ ನಿಯಂತ್ರಣ ತಪ್ಪಿ ಸ್ಕೂಟರ್ ಉಪ್ಪೂರು ಸೇತುವೆಯ ಎಡ ಬದಿಯ ಪಿಲ್ಲರ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದು, ತಲೆಯಲ್ಲಿ ಇದ್ದ ಹೆಲ್ಮೆಟ್ ಕಿತ್ತು ಹೋಗಿ ತಲೆಗೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ, ಆದರೂ ಆತನು ಜೀವಂತವಾಗಿರ ಬಹುದೆಂದು ತಿಳಿದು ಚಿಕಿತ್ಸೆ ಬಗ್ಗೆ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ರಾತ್ರಿ 11:45 ಗಂಟೆಗೆ  ಆಸೀಫ್‌ ರವರನ್ನು ಪರೀಕ್ಷಿಸಿದ ವೈಧ್ಯರು , ಆಸೀಫ್‌ನು ಮೃತಪಟ್ಟಿರುವ ಬಗ್ಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
    ಕೋಟ: ದಿನಾಂಕ 31/01/2021 ರಂದು ರಾತ್ರಿ ಪಿರ್ಯಾದಿದಾರರಾದ ಪ್ರಶಾಂತ (29), ತಂದೆ:  ಬಸವರಾಜ್‌, ವಾಸ:  ಮದಗದ  ಮನೆ, ಕಕ್ಕುಂಜೆ  ಗ್ರಾಮ, ಬ್ರಹ್ಮಾವರ  ತಾಲೂಕು, ಉಡುಪಿ ಜಿಲ್ಲೆ  ಇವರು ಕಾರ್‌ನಲ್ಲಿ  ಬಿದ್ಕಲ್‌ ಕಟ್ಟೆ- ಸೈಬ್ರಕಟ್ಟೆ  ಡಾಮಾರು  ರಸ್ತೆಯಲ್ಲಿ  ಬಿದ್ಕಲ್‌ ಕಟ್ಟೆ ಕಡೆಯಿಂದ  ಗಾವಳಿ ಕಡೆಗೆ  ಹೊರಟಿದ್ದು  ರಾತ್ರಿ 8-30 ಗಂಟೆಗೆ ಹಾರ್ದಳ್ಳಿ  ಮಂಡಳ್ಳಿ ಗ್ರಾಮದ ಕಿನಾರ  ಹೊಟೇಲ್‌ ಹತ್ತಿರ ತಲುಪುವಷ್ಟರಲ್ಲಿ ಪಿರ್ಯಾದಿದಾರರ  ಎದುರಿನಲ್ಲಿ  ಸೈಬ್ರಕಟ್ಟೆ ಕಡಗೆ  ಹೋಗುತ್ತಿದ್ದ  ಸ್ಕೂಟಿ  ನಂಬ್ರ  KA-20-EK-3807  ನೇದನ್ನು  ಅದರ  ಸವಾರ  ಅಜಿತ ಸಹಸವಾರ ಸುಕೇಶ ಆಚಾರ್ಯ ಎಂಬುವವರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ  ಮಾಡಿಕೊಂಡು   ಎದುರಿನಲ್ಲಿ ಸೈಬ್ರಕಟ್ಟೆ ಕಡೆಗೆ  ಹೋಗುತ್ತಿದ್ದ ಮೊಟಾರ್‌ಸೈಕಲ್‌ನಂಬ್ರ KA-20-EQ-2950 ನೇದಕ್ಕೆ ಹಿಂದಿನಿಂದ  ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರರು  ಮತ್ತುಮೋಟಾರ್‌ ಸೈಕಲ್‌ ಸವಾರರು  ಸ್ಕೂಟಿ ಮತ್ತು ಮೋಟಾರ್‌ ಸೈಕಲ್‌ ಸಮೇತ  ರಸ್ತೆಗೆ ಬಿದ್ದಿದ್ದು ಮೋಟಾರ್‌ ಸೈಕಲ್‌ನಂಬ್ರ KA-20-EQ-2590 ನೇದರ ಸವಾರ ಚಂದ್ರಶೇಖರ  ಶೆಟ್ಟಿ ರವರಿಗೆ  ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು,  ಸ್ಕೂಟಿ ಸಹಸವಾರ  ಸುಕೇಶ ಆಚಾರ್ಯ ರವರ  ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಆರೋಪಿ ಸ್ಕೂಟಿ ಸವಾರನಿಗೆ  ಬಲಕೈ ಮೊಣಗಂಟಿನ ಕೆಳಗೆ ರಕ್ತಗಾಯವಾಗಿದ್ದು ಕೈಕಾಲುಗಳಿಗೆ ಸಣ್ಣಪುಟ್ಟ  ತರಚಿದ ರಕ್ತಗಾಯವಾಗಿದ್ದು ಗಾಯಗೊಂಡವರನ್ನು ಪಿರ್ಯಾದಿದಾರರು ಮತ್ತು ಅವರ  ಸ್ನೇಹಿತರು ಅವರ ಕಾರ್‌ನಲ್ಲಿ  ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈಧ್ಯರು  ಅಜಿತ್‌ಮತ್ತು  ಸುಕೇಶ ಆಚಾರ್ಯ ರವರಿಗೆ ಚಿಕಿತ್ಸೆಯನ್ನು  ನೀಡಿ  ಸುಕೇಶ ಆಚಾರ್ಯ ರವರನ್ನು ಒಳರೋಗಿಯಾಗಿ  ದಾಖಲಿಸಿಕೊಂಡಿದ್ದು, ತೀವ್ರ ಸ್ವರೂಪದ ಗಾಯಗೊಂಡಿದ್ದ ಚಂದ್ರಶೇಖರ ಶೆಟ್ಟಿ ರವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದಂತೆ ಆಸ್ಪತ್ರೆಯ ಅಂಬ್ಯುಲೆನ್ಸ್‌ನಲ್ಲಿ  ಉಡುಪಿ  ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2020  ಕಲಂ: 279,  337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 02-02-2021 11:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ