ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 30.12.2022 ರಂದು ರಾತ್ರಿ ಫಿರ್ಯಾದಿ ಸಚಿತ್‌ ಶೆಟ್ಟಿ ರವರು ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ಫ್ರೌಢ ಶಾಲೆಯಿಂದ  ಮನೆಗೆ ಅವರ  ಮೋಟಾರ್‌ ಸೈಕಲ್‌ ನಲ್ಲಿ ಸವಾರಿ ಮಾಡಿಕೊಂಡು ಹೆಗ್ಗುಂಜೆ ಗ್ರಾಮದ ಮಂದಾರ್ತಿ ಮೇಲ್‌ ಪೇಟೆ ಬಳಿ ಬರುವಾಗ ರಾತ್ರಿ ಸುಮಾರು 12:15  ಗಂಟೆಗೆ ಬಾರಕೂರು – ಮೈರ್‌ ಕೋಮೆ ಮುಖ್ಯ ರಸ್ತೆಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ KA.20.C.9129 ನೇ ನಂಬ್ರದ ಟಾಟಾ ಏಸ್‌ ಗೂಡ್ಸ್‌ ವಾಹನವನ್ನು ಆರೋಪಿ ರಾಘವೇಂದ್ರ ಆಚಾರ್ಯ ರವರು ಏಕಾ ಏಕಿ ಮುಖ್ಯ ರಸ್ತೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದು, ಅದೇ ವೇಳೆಗೆ ಬಾರಕೂರು ಕಡೆಯಿಂದ ಮೈರ್‌ ಕೋಮೆ ಕಡೆಗೆ ವಿಜೇಂದ್ರ ಶೆಟ್ಟಿ ರವರು ಸವಾರಿ ಮಾಡುತ್ತಿದ್ದ KA.02.JL.9269 ನೇ ಮೋಟಾರ್ ಸೈಕಲ್‌ ಗೆ ಆರೋಪಿ ವಾಹನದ ಬಲ ಭಾಗದ ಬಾಗಿಲು ಡಿಕ್ಕಿಯಾಗಿ ಮೋಟಾರ್‌ ಸೈಕಲ್‌ ಸಮೇತ ವಿಜೇಂದ್ರ ಶೆಟ್ಟಿ ತಾರ್‌ ರಸ್ತೆಯ ಮೇಲೆ ಬಿದ್ದು, ಅವರ ತಲೆಗೆ ತೀವ್ರ ರಕ್ತಗಾಯ & ಮುಖ, ತುಟಿ, ಕಾಲು ಬೆಟ್ಟುಗಳಿಗೆ  ಗಾಯವಾಗಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ.  ಅವರನ್ನು ಚಿಕಿತ್ಸೆ ಬಗ್ಗೆ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 221/2022 ಕಲಂ : 279, 338 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಕೋಟ: ಪಿರ್ಯಾದಿ ಶ್ರೀಮತಿ ಮಾಲತಿ ಪಿ ಶೆಟ್ಟಿ ಇವರ ಮನೆಗೆ ಸಂಪರ್ಕಕ್ಕೆ ಇರುವ ರಸ್ತೆಯನ್ನು ಚಂದ್ರಶೇಖರ ಶೆಟ್ಟಿಯು  ಪದೇ ಪದೇ ಅತಿಕ್ರಮಿಸಿ ರಸ್ತೆ ಕಿರಿದು ಮಾಡಿ  ಪದೇ ಪದೇ ತೊಂದರೆ ನೀಡುತ್ತಿದ್ದು ಈ ಬಗ್ಗೆ ಪಂಚಾಯತ್ ಗೆ ಮನವಿ ಕೂಡ ಮಾಡಲಾಗಿರುತ್ತದೆ.  ದಿನಾಂಕ 30/12/2022 ರಂದು ಮಧ್ಯಾಹ್ನ12.30 ಗಂಟೆಯ ಸಮಯಕ್ಕೆ ಚಂದ್ರ ಶೇಖರ ಶೆಟ್ಟಿಯು ಅತಿಕ್ರಮಿಸಿದ ರಸ್ತೆಯ ಜಾಗಕ್ಕೆ  ಕಾಂಕ್ರೀಟ್ ವಾಲ್ ಆವರಣ ಗೋಡೆ ಕಟ್ಟಲು  ಮುಂದಾಗಿದ್ದು  ಆಗ ಪಿರ್ಯಾದಿದಾರರು  ಸದ್ರಿ ಜಾಗದ ಬಳಿ ಹೋಗಿ ನೋಡುವಾಗ ಚಂದ್ರ ಶೇಖರ ಶೆಟ್ಟಿ ಪಿರ್ಯಾದಿದಾರರನ್ನು ಉದ್ದೇಶಿಸಿ ವಿನಾ ಕಾರಣ ಅವಾಚ್ಯವಾಗಿ ಬೈಯಲು ಶುರು ಮಾಡಿದ್ದು,  ರಸ್ತೆ ನಿರ್ಮಾಣ ಮಾಡಲು ಆಕ್ಷೇಪಿಸಿದಾಗ ಪಿರ್ಯಾದಿದಾರರ ತಮ್ಮನಾದ ಚಂದ್ರ ಶೇಖರ ಶೆಟ್ಟಿಯವರ ಮಗ ಚಲನ್ ಶೆಟ್ಟಿ  ಏಕಾಏಕಿ ಮುಂದೆ ಬಂದು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದು ಆಗ ಪಿರ್ಯಾದಿದಾರರು ಆಯ ತಪ್ಪಿ ಕೆಳಗೆ ಬಿದ್ದಿದ್ದುಒಳ ನೋವು ಆಗಿರುತ್ತದೆ. ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ  ಪಿರ್ಯಾದಿದಾರರ ಅಳಿಯ ಸುಧೀರ್ ಶೆಟ್ಟಿ ಮತ್ತು ಮತ್ತೊಬ್ಬ ತಮ್ಮ ಬಾಲಕೃಷ್ಣ ಶೆಟ್ಟಿ ರವರು ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿರುತ್ತಾರೆ. ಆರೋಪಿತರು ಇಬ್ಬರೂ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು  ಕೊಂದು ಹಾಕ್ತೇವೆ ಎಂಬುದಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 236/2022 ಕಲಂ: 323, 354, 504, 506 ಜೊತೆಗೆ 34 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ  ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾಧಿ ಅಲಗರಸಾಮಿ ಸೆಂತೂರು ಇವರು ಮಲ್ಪೆಯ ವಿನೋಧ ಸುವರ್ಣ ರವರ ಮಾಲಕತ್ವದ ಶ್ರೀ ಪರಮೇಶ್ವರ ಬೋಟ್ ನಂ IND KA-02 MM4437 ನೇ ಮೀನುಗಾರಿಕಾ ಬೋಟ್ ನಲ್ಲಿ ಕಳೆದ ಅಗಸ್ಟ್ 2022 ರಿಂದ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು ಅವರ ಬೋಟ್ ನಲ್ಲಿ ಕಲಾಸಿಗಳಾಗಿ ನಾಗಲಿಂಗ್, ನಿತ್ಯಾನಂದ ಪೂಜಾರಿ, ಬಾಮ ಬಾಸ್, ದಾವೂದ್ ವಿನ್ಚ್, ನಿತಿನ್, ಹರೀಶ, ಪೂನೇಶ್ವರ, ರಮಾನನ್ ಇವರು ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 26-12-2022 ರಂದು ಸಂಜೆ 04:00 ಗಂಟೆಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ಬೋಟ್ ನಲ್ಲಿ ಹೊರಟು ಅರಭೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಾ ದಿನಾಂಕ 30-12-2022 ರಂದು ರಾತ್ರಿ 09:00 ಗಂಟೆಗೆ ಅರಭೀ ಸಮುದ್ರದ ಸುಮಾರು 15 ನಾಟಿಕಲ್ ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ರಮಾನನ್ ಇವರು ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ನಿಂದ ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 117-2022 ಕಲಂ: ಮನುಷ್ಯ ಕಾಣೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿಯಾ೯ದಿ ಅಮೀನ್‌ ಇವರು ತನ್ನ ಹೆಂಡತಿ  ಮುತ್ತವ್ವ (26) ಹಾಗೂ ಮಗಳು ಗಂಗಾ(2.6) ರವರೊಂದಿಗೆ ಕಾಪು ತಾಲೂಕು ಮಲ್ಲಾರು ಗ್ರಾಮದ ಕೊಂಬುಗುಡ್ಡೆ ಎಂಬಲ್ಲಿ  ಮುಸ್ತಾಕ್‌ ಸಾಹೇಬರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮೇಸ್ತ್ರಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿಯಾ೯ದಿದಾರರು ದಿನಾಂಕ: 25/12/2022 ರಂದು ಬೆಳಿಗ್ಗೆ 08:00 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ಸಂಬಳ ತರುವುದಕ್ಕಾಗಿ ಕಾಪುವಿನಲ್ಲಿರುವ ತನ್ನ ಮಾಲಕರ ಮನೆಗೆ ಬಂದು ಕಾಪು ಪೇಟೆಯಲ್ಲಿ ಸ್ನೇಹಿತರಲ್ಲಿ ಮಾತನಾಡಿ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮನೆಗೆ ಹೋದಲ್ಲಿ ಮನೆಯಲ್ಲಿ ಹೆಂಡತಿ ಹಾಗೂ ಮಗು ಕಾಣೆದೇ ಇದ್ದು,ಹೆಂಡತಿಯ ಮೊಬೈಲ್‌ ಗೆ ಕರೆಮಾಡಿದಾಗ ಸ್ವಿಚ್‌ ಆಪ್‌ ಎಂಬುದಾಗಿ ಬರುತ್ತಿದ್ದು, ಸಂಬಂದಿಕರ ಹಾಗೂ ಸ್ನೇಹಿತರಿಗೆ ಕರೆ ಮಾಡಿ ಪತ್ತೆಯ ಬಗ್ಗೆ ಪ್ರಯತ್ನಿಸಿದ್ದು ಈ ವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 148/2022 ಕಲಂ ಹೆಂಗಸು ಮತ್ತು ಮಗು ಕಾಣೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌‌

  • ಶಿರ್ವ: ಪಿರ್ಯಾದಿ ಅಲ್ವಿನ್  ಸ್ಟೀಫನ್ ನಜ್ರೆತ್ ಇವರ ತಮ್ಮ ಅನಿಲ್ ನಜರೆತ್ (41ವರ್ಷ) ರವರು ಸುಮಾರು 2 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಈ ದಿನ ದಿನಾಂಕ:31/12/2022 ರಂದು ಮಧ್ಯಾಹ್ನ 12.30 ಗಂಟೆ ಸಮಯಕ್ಕೆ ಮನೆಯ ಒಳಗಿನ ರೂಮ್ ನಲ್ಲಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯವರು ಕೂಡಲೇ ಹಗ್ಗದಿಂದ ಬಿಡಿಸಿ ಉಡುಪಿಯ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಅನಿಲ್ ನಜರೆತ್ ರವರು ಚಿಕಿತ್ಸೆಗೆ ಸ್ಪಂದಿಸದೇ ಈ ದಿನ ಮಧ್ಯಾಹ್ನ ಸುಮಾರು 2.45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಯು.ಡಿ.ಆರ್ 32/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ: ಪಿರ್ಯಾದಿ ಸುರೇಶ್ ನಾಯ್ಕ ಇವರ ಅಣ್ಣ  ದಿನೇಶ ನಾಯ್ಕ 36 ವರ್ಷರವರು ಯಾವುದೋ ವಿಷಯದ ಬಗ್ಗೆ  ಮನಸ್ಸಿನಲ್ಲಿಯೇ ಯೋಚನೆ ಮಾಡಿ ಮನೆಯವರಲ್ಲಿ ಹೇಳಿಕೊಳ್ಳದೇ  ಕೊರಗಿ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ 31/12/2022ರಂದು ಸಂಜೆ 06;00  ಗಂಟೆಯಿಂದ 06;30  ಗಂಟೆ ಮದ್ಯಾವಧಿಯಲ್ಲಿ  ವರಂಗ ಗ್ರಾಮದ ಕಾಡುಹೊಳೆ  ಸಿದ್ದುಪಲ್ಕೆ  ಎಂಬಲ್ಲಿರುವ ಪಿರ್ಯಾದಿದಾರರ ಮನೆಯಲ್ಲಿ ಯಾರೂ ಇಲ್ಲದ ಸಮಯ  ಮಲಗುವ ಕೋಣೆಯಲ್ಲಿರುವ   ನೇಣು ಹಾಕಿಕೊಂಡು ಆತ್ಮಹತ್ಯೆ   ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯು.ಡಿ.ಆರ್ 37/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 01-01-2023 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080