ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ : ದಿನಾಂಕ 30/12/2021 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರಾದ ಬೇಬಿ (48), ಗಂಡ : ದಿ ವಸಂತ , ವಾಸ: ಮಾತೃ ಪ್ರಸಾದ್ ಕಲ್ಕಾರ್ ಕುಂಟಾಡಿ  ಕಲ್ಯಾ ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯ ಎದುರುಗಡೆ  ಕಾರ್ಕಳದಿಂದ ಪಳ್ಳಿ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ KA-20-EL-3406  ನೇ ಮೋಟಾರ್ ಸೈಕಲ್ ಸವಾರನು  ಹಿಂಬದಿಯಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಪಳ್ಳಿಯಿಂದ ಕಾರ್ಕಳ ಕಡೆಗೆ ತಿರುವಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ಕಡೆಯಿಂದ  ಪಳ್ಳಿ ಕಡೆಗೆ ಹೋಗುತ್ತಿದ್ದ  KA-19-MH-4979 ಕಾರಿಗೆ ಡಿಕ್ಕಿ ಹೊಡೆದು ಬಳಿಕ ಮೋಟಾರ್ ಸೈಕಲ್ ಸಮೇತ ಸವಾರ ಮತ್ತು ಸಹಸವಾರ ರಸ್ತೆಗೆ  ಬಿದ್ದ ಪರಿಣಾಮ ಮೋಟಾರ್ ಸೈಕಲ್ ಸಹ ಸವಾರ ಅರ್ಜುನ್  ರವರ ತಲೆ, ಮುಖ, ಕಾಲಿಗೆ ರಕ್ತ ಗಾಯವಾಗಿ, ಸವಾರ ನಾಗರಾಜ ರವರ ಭುಜಕ್ಕೆ ಗುದ್ದಿದ್ದ ಒಳ ಜಖಂ ಆಗಿ ಚಿಕಿತ್ಸೆ ಬಗ್ಗೆ ಮಂಗಳೂರು  ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 142/2021 ಕಲಂ: 279, 337 ಐಪಿಸಿಯಂತ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ವಸಂತ ವಿ ಕಾಮತ್ (56), ತಂದೆ: ದಿವಂಗತ ವೆಂಕಟೇಶ ಕಾಮತ್, ವಾಸ: ಮರಾಠ ಕಾಲೋನಿ, ಧಾರವಾಡ  ಇವರ ತಮ್ಮ ದೇವೇಂದ್ರ ಕಾಮತ್  (47) ಇವರು ದಿನಾಂಕ 30/12/2021 ರಂದು 18:00 ಗಂಟೆಗೆ ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮ ಕೆಳಾಕೊಡ್ಲು ವೆಂಕಟೇಶ  ಶಣೈ ರವರ ತೋಟದಲ್ಲಿ  ಕೆಲಸ ಮಾಡುತ್ತಿರುವ ಸಮಯ ಯಾವುದೋ ವಿಷ ವಸ್ತು ಸೇವಿಸಿ ಇಲ್ಲವೆ ಕೆಲಸ  ಮಾಡುವಾಗ ಯಾವುದಾದರೂ ವಿಷ ಜಂತು ಕಚ್ಚಿ   ಅಸ್ವಸ್ಥಗೊಂಡವರನ್ನು  ಚಿಕಿತ್ಸೆಯ ಬಗ್ಗೆ   ಕೊಟೇಶ್ವರ  ಡಾ. ಎನ್ ಆರ್  ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು  ಹೋಗಿ   ಪ್ರಥಮ     ಚಿಕಿತ್ಸೆ  ಕೊಡಿಸಿ   ಹೆಚ್ಚಿನ   ಚಿಕಿತ್ಸೆಯ  ಬಗ್ಗೆ   ಮಣಿಪಾಲ  ಕೆಎಂ.ಸಿ.   ಆಸ್ಪತ್ರೆಗೆ   ಕರೆದುಕೊಂಡು  ಹೋಗವಾಗ  ದಾರಿ  ಮದ್ಯೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 52/2021 ಕಲಂ : 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 01-01-2022 09:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080