ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಉಡುಪಿ: ದಿನಾಂಕ 31/12/2021 ರಂದು ಮೆಲ್ವಿನ್ ಎಂಬುವವರು KA-20-EX-9578 ನೇ ಮೋಟಾರ್ ಸೈಕಲ್ ನಲ್ಲಿ ವಿಜಯ್ ಎಂಬುವವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಕೊಳಲಗಿರಿ ಯಿಂದ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಬಂದು ಸಂತೆಕಟ್ಟೆ ಜಂಕ್ಷನ್ ಬಳಿ ಪ್ರೈಡ್ ಕಟ್ಟಡದ ಮುಂಬಾಗ ರಾಷ್ಟ್ರೀಯ ಹೆದ್ದಾರಿ 66 ತಲುಪುವಾಗ ರಾತ್ರಿ 11;15 ಗಂಟೆಗೆ ಮೆಲ್ವಿನ್ ತನ್ನ ಮೊಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿ ತೀರಾ ಬಲಬದಿಗೆ ಚಲಾಯಿಸಿ ಡಿವೈಡರ್ ಮೇಲೆ ಹತ್ತಿಸಿ ಡಿವೈಡರ್ ನಲ್ಲಿದ್ದ ನವಯುಗಕ್ಕೆ ಸಂಬಂದಪಟ್ಟ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೆಲ್ವಿನ್ ರವರ ಕಾಲು ಗಳಿಗೆ ಮೂಳೆಮುರಿತ ಉಂಟಾಗಿ ಸಹ ಸವಾರ ವಿಜಯ್ ರವರಿಗೆ ತಲೆಗೆ ಗಂಭಿರ ಗಾಯಾವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ 

  • ಮಣಿಪಾಲ: ಪಿರ್ಯಾದಿದಾರರಾದ ಅವಿನಾಶ ಎಸ್ ಪೂಜಾರಿ(36), ತಂದೆ: ಸಂಜೀವ ಪೂಜಾರಿ, ವಾಸ: ಶೆಟ್ಟಿಬೆಟ್ಟು, ಪರ್ಕಳ ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರು ನಡೆಸಿಕೊಂಡಿರುವ ಮಣಿಪಾಲದ ಎಂ ಐ ಟಿ ಪುಡ್ ಕೋರ್ಟ್-2 ನಲ್ಲಿ ಡಿಶ್ ವಾಸ್ ಕೆಲಸ ಮಾಡಿಕೊಂಡಿದ್ದ ಮುಕುಂದ ನಾಯ್ಕ್ (36) ರವರು ದಿನಾಂಕ 18/12/2021 ರಂದು ಬೆಳಿಗ್ಗೆ 9:00 ಗಂಟೆಗೆ ಮಣಿಪಾಲದ ಎಂ ಐ ಟಿ ಪುಡ್ ಕೋರ್ಟ್-2 ಯಿಂದ ಕಾಣೆಯಾಗಿದ್ದು, ಕಾಣೆಯಾದ ಮುಕುಂದ ನಾಯ್ಕ್ ರವರ ಸಂಬಂದಿಕರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿ ಮುಕುಂದ ನಾಯ್ಕ್ ರವರನ್ನು ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ:ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಮಲ್ಪೆ : ಪಿರ್ಯಾದಿದಾರರಾದ ಕೃಷ್ಣ(48),ತಂದೆ: ನರಸಿಂಹ ಮರಕಾಲ,ವಾಸ: ಗುರಿಕಾರರ ,ಮನೆ ಕೋಟತಟ್ಟು ಪಡುಕೆರೆ,ಕೋಟತಟ್ಟು –ಗ್ರಾಮ ಉಡುಪಿ ಇವರ ಅಳಿಯ ಮಹೇಶ(36) ರವರು 6 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು , ಪ್ರಸ್ತುತ ಮಹವೀರ್ ಬೋಟ್ ನಲ್ಲಿ ಕಲಾಸಿಯಾಗಿ ಕೆಲಸ ಮಾಡಿಕೊಂಡಿದ್ದು , ದಿನಾಂಕ 01/01/2022 ರಂದು ಬೋಟ್ ನ ಮಾಲಕರಾದ ಉದಯ ಕುಮಾರ್ ಪಿರ್ಯಾದಿದಾರರಿಗೆ ಕರೆ ಮಾಡಿ ಮಹೇಶನು ದಿನಾಂಕ 31/12/2021 ಸಂಜೆ 7:00 ಗಂಟೆಗೆ ಬೋಟಿನಿಂದ ಮೇಲಕ್ಕೆ ಹೋದವರು ವಾಪಸ್ಸು ಬೋಟಿಗೆ ಬಂದಿರುವುದಿಲ್ಲ.ಹುಡುಕಾಡಿದರೂ ಸಿಕ್ಕಿರುವುದಿಲ್ಲ ಎಂಬುದಾಗಿ ತಿಳಿಸಿದ್ದು., ದಿನಾಂಕ 01/01/2022 ರಂದು ಬೆಳಿಗ್ಗೆ 4:00 ಗಂಟೆಗೆ ಈಶ್ವರ ಎನ್ನುವವರು ಮೊಬೈಲ್ ನಲ್ಲಿ ಮಲ್ಪೆ ಬಂದರಿನ ಗೇಟಿನ ಬಳಿ ದಿನಾಂಕ 31/12/2021 ರಂದು ರಾತ್ರಿ ಒಂದು ಗಂಡಸಿನ ಮೃತ ದೇಹದ ಬಾವಚಿತ್ರ ವಾಟ್ಸಾಪ್ ಗ ಸಂದೇಶ ಬಂದಿದ್ದು . ಈ ಬಗ್ಗೆ ಮಲ್ಪೆ ಈಶ್ವರ ಎಂಬುವವರಿಗೆ ಕರೆ ಮಾಡಿ ವಿಚಾರಿಸಲಾಗಿ ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಮತ್ತು ಬೋಟ್ ಮಾಲಕರಾದ ಉದಯಕುಮಾರ್, ಕಲಾಸಿಗಳಾದ ರಾಜು, ರಾಘವೇಂದ್ರ,ಶೇಖರ , ದಿನೇಶರವರೊಂದಿಗೆ ಉಡುಪಿ ಜಿಲ್ಲಾಸ್ಪತ್ರೆಗೆ ಹೋಗಿ ನೋಡಲಾಗಿ ಅದು ಪಿರ್ಯಾದಿದಾರರ ಅಳಿಯ ಮಹೇಶ ರವರ ಮೃತದೇಹವಾಗಿರುತ್ತದೆ. ಮೃತನ ಎದೆಭಾಗ ಹಾಗೂ ಹೊಟ್ಟೆಯ ಭಾಗದಲ್ಲಿ ತರುಚಿದ ಹಾಗೂ ಗುದ್ದಿದ ಗಾಯವಿದ್ದು ಬೀಗಿರುತ್ತದೆ. ಪಿರ್ಯಾದಿದಾರರ ಅಳಿಯ ಮಹೇಶನು ಮಲ್ಪೆ ಬಂದರಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಾಹನ ಢಿಕ್ಕಿ ಹೊಡೆದು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ 174 (3)(IV) ಸಿ.ಆರ್.ಪಿ.ಸಿ

 

ಇತ್ತೀಚಿನ ನವೀಕರಣ​ : 01-01-2022 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080